ನೆಲಮಂಗಲ ಬಳಿ ಕೆಎಸ್‌ಆರ್‌ಟಿಸಿ ಬಸ್ ಭೀಕರ ಅಪಘಾತ, ನುಜ್ಜುಗುಜ್ಜಾದ ಬಸ್‌!

Published : May 18, 2024, 11:43 AM IST

ಬೆಂಗಳೂರು (ಮೇ.18): ನೆಲಮಂಗಲ  ಬಳಿ ಕೆಎಸ್ಆರ್ ಟಿಸಿ ಬಸ್ ಭೀಕರ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ಡಿವ್ಯೆಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಬಸ್‌ ನುಜ್ಜುಗುಜ್ಜಾಗಿದೆ.

PREV
15
 ನೆಲಮಂಗಲ  ಬಳಿ ಕೆಎಸ್‌ಆರ್‌ಟಿಸಿ ಬಸ್ ಭೀಕರ ಅಪಘಾತ, ನುಜ್ಜುಗುಜ್ಜಾದ ಬಸ್‌!

ನೆಲಮಂಗಲದ ಅಡಕಿಮಾರನಹಳ್ಳಿ ಬಳಿಯ ಹೆದ್ದಾರಿಯಲ್ಲಿ ಘಟನೆ  ನಡೆದಿದ್ದು, ಸೋಮವಾರ ಪೇಟೆಯಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್  ಎಂದು ತಿಳಿದುಬಂದಿದೆ.

25

ಬಸ್ ನಲ್ಲಿ ಇದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಅಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಾಲಕ ನಿರ್ವಾಹಕ ಸೇರಿದಂತೆ ಆರು ಮಂದಿಗೆ ಗಾಯವಾಗಿದೆ.

35

ನೆಲಮಂಗಲ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅವಘಡ ಸಂಭವಿಸಿದ್ದು, ನೆಲಮಂಗಲ ಸಂಚಾರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ

45

ಅಪಘಾತದ ಭೀಕರತೆ ಎಷ್ಟಿತ್ತೆಂದರೆ ಡಿವೈಡರ್‌ ಗೆ ಡಿಕ್ಕಿ ಹೊಡೆದ ಬಸ್‌ ಮತ್ತೊಂದು ಬದಿಯ ರೋಡ್‌ ಗೆ ಹೋಗಿ ಡಿವೈಡರ್‌ ನ ಮೇಲೆ ನಿಂತಿದೆ.

55

ಪೊಲೀಸರ ತನಿಖೆ ಬಳಿಕ ಅಪಘಾತಕ್ಕೆ ಕಾರಣವೇನು ಎಂದು ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ. ಸ್ಥಳ ಮಹಜರು ಬಳಿಕ ಬಸ್‌ ತೆರವು ಕಾರ್ಯ ನಡೆಯಲಿದೆ.

Read more Photos on
click me!

Recommended Stories