ಕಾರ್ಮಿಕರ ಜೊತೆ ಸಲಿಕೆ, ಗುದ್ದಲಿ ಹಿಡಿದು ಕೆಲಸ ಮಾಡಿದ IAS ಅಧಿಕಾರಿ..!

First Published | May 4, 2020, 3:15 PM IST

ಬೀದರ್(ಮೇ. 04): ಕಾರ್ಮಿಕರ ಜೊತೆ ಸಲಿಕೆ, ಗುದ್ದಲಿ ಹಿಡಿದು ಕೆಲಸ ಮಾಡುವ ಮೂಲಕ ಐಎಎಸ್ ಅಧಿಕಾರಿಯೊಬ್ಬರು ಕೂಲಿ ಕೆಲಸದ ಕಾಯಕಕ್ಕೆ ಮತ್ತಷ್ಟು ಪ್ರೇರಣೆಯಾದ ಘಟನೆ ಔರಾದ್ ತಾಲೂಕಿನಲ್ಲಿ ನಡೆದಿದೆ. ಐಎಎಸ್‌ ಅಧಿಕಾರಿ ಗಂಗವಾರ್ ಅವರು ಸಣ್ಣ ನೀರಾವರಿಯ ಟ್ಯಾಂಕ್ ಕಾಮಗಾರಿಯನ್ನು ಪರಿಶೀಲಿಸಿದ ಬಳಿಕ ಕೂಲಿ ಕಾರ್ಮಿಕರ ಕೈಯಲ್ಲಿದ್ದ ಸಲಿಕೆ ಪಡೆದು ತಾವೂ ಗುಂಡಿ ತೋಡುವ ಕಾರ್ಯಕ್ಕೆ ಮುಂದಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
 

ಖಾನಾಪೂರ ಗ್ರಾಮದಲ್ಲಿ ಸಸಿ ನೆಡಲು ಗುಂಡಿ ತೋಡುವ ಕಾಮಗಾರಿ ಪರಿಶೀಲಿಸಿದ ಐಎಎಸ್‌ ಅಧಿಕಾರಿ ಗಂಗವಾರ್
ಉದ್ಯೋಗ ಖಾತ್ರಿ ಯೋಜನೆ ಬಡವರ ಹೊಟ್ಟೆ ತುಂಬುವ, ಆರ್ಥಿಕ ದುಸ್ಥಿತಿಯಿಂದ ಹೊರಬರಲು ಜಾರಿಯಾದ ಮಹತ್ವವಾದ ಯೋಜನೆ ಇದಾಗಿದ್ದು ಇದರತ್ತ ಮತ್ತಷ್ಟು ಜನ ಧಾವಿಸಿ ಕಾಮಗಾರಿಗಳಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದ ಗಂಗವಾರ್
Tap to resize

ಕಾರ್ಮಿಕರೊಂದಿಗೆ ಸುಮಾರು ಅರ್ಧ ಗಂಟೆ ಗುಂಡಿ ತೋಡುವ ಕೆಲಸ ಮಾಡಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ ಐಎಎಸ್‌ ಅಧಿಕಾರಿ ಗಂಗವಾರ್
ಕಾರ್ಮಿಕನಾಗಿ ಕೆಲಸ ಮಾಡಿ ಆತ್ಮಸ್ಥೆರ್ಯ ತುಂಬಿ ಸಾಮಾಜಿಕ ಅಂತರ ಕಾಪಾಡಿಕೊಂಡು ಉದ್ಯೋಗ ಖಾತ್ರಿ ಕೆಲಸ ಮಾಡಿ ಎಂದು ತಿಳಿವಳಿಕೆ ನೀಡಿದ ಅಧಿಕಾರಿ ಗಂಗವಾರ್

Latest Videos

click me!