ಲಕ್ಕುಂಡಿ: ಉತ್ಖನನ ಪಕ್ಕದಲ್ಲಿಯೇ ಕಾಣಿಸಿಕೊಂಡ ಬೃಹತ್ ಹಾವು; ಇತ್ತ ಪುಟಾಣಿ ಶಿವಲಿಂಗು ಪತ್ತೆ

Published : Jan 18, 2026, 10:40 AM IST

ಲಕ್ಕುಂಡಿ ಗ್ರಾಮದಲ್ಲಿ ನಡೆಯುತ್ತಿರುವ ಉತ್ಖನನದ ವೇಳೆ ಬೃಹತ್ ನಾಗರಹಾವು ಕಾಣಿಸಿಕೊಂಡು ಜನರಲ್ಲಿ ಆತಂಕ ಸೃಷ್ಟಿಸಿದೆ. ಇದೇ ವೇಳೆ, ಕೋಟೆಯ ಗೋಡೆಯಲ್ಲಿ ಪುಟ್ಟ ಶಿವಲಿಂಗವೊಂದು ಪತ್ತೆಯಾಗಿದ್ದು, ಇದು ಕುತೂಹಲಕ್ಕೆ ಕಾರಣವಾಗಿದೆ. ಪುರಾತತ್ವ ಇಲಾಖೆಯು ಉತ್ಖನನವನ್ನು ಮುಂದುವರೆಸಿದೆ.

PREV
15
ಲಕ್ಕುಂಡಿಯಲ್ಲಿ ನಾಗರಾಜ ಪ್ರತ್ಯಕ್ಷ

ಲಕ್ಕುಂಡಿ ಗ್ರಾಮದಲ್ಲಿ ಉತ್ಖನನ ನಡೆಯುತ್ತಿರುವ ಪಕ್ಕದ ಜಾಗದಲ್ಲಿಯೇ ಬೃಹತ್ ಗಾತ್ರದ ಹಾವು ಕಾಣಿಸಿಕೊಂಡಿದೆ. ಹಾವು ಕಾಣಿಸಿದ ವಿಷಯ ತಿಳಿಯುತ್ತಿದ್ದಂತೆ ಲಕ್ಕುಂಡಿ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿದೆ. ಪುರಾತತ್ವ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತ, ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ ನೇತೃತ್ವದಲ್ಲಿ ಉತ್ಖನನ ನಡೆಯುತ್ತಿದೆ.

25
ಮೂರನೇ ದಿನದ ಉತ್ಖನನ ಕಾರ್ಯ

ಲಕ್ಕುಂಡಿ ಗ್ರಾಮದಲ್ಲಿಂದು ಮೂರನೇ ದಿನವೂ ಉತ್ಖನನ ಕಾರ್ಯ ಆರಂಭಗೊಂಡಿದೆ. ಉತ್ಖನನ ನಡೆಯುತ್ತಿರುವ ಜಾಗದ ಪಕ್ಕದ ಶಾಲೆಯಲ್ಲಿನ ಕಟ್ಟಡ ತೆರೆವುಗೊಳಿಸುತ್ತಿರುವ ಸಂದರ್ಭದಲ್ಲಿ ನಾಗರಾಜ ಪ್ರತ್ಯಕ್ಷವಾಗಿದ್ದಾನೆ. ಜೆಸಿಬಿ ಹಾಗೂ ಟ್ರ್ಯಾಕ್ಟರ ಚಾಲಕರ‌ ಕಣ್ಣಿಗೆ ಹಾವು ಕಾಣಿಸಿದೆ ಎಂದು ತಿಳಿದು ಬಂದಿದೆ. ಲಕ್ಕುಂಡಿ ಗ್ರಾಮದ ಜನತಾ ಶಿಕ್ಷಣ ಸಂಸ್ಥೆಯ ಶಾಲೆಯಲ್ಲಿ ಹಾವು ಕಾಣಿಸಿದೆ.

35
8 ಮೀಟರ್ ಉದ್ದದ ಹಾವು!

ಸಾಮಾನ್ಯವಾಗಿ ನಿಧಿ ಇರೋ ಸ್ಥಳದ ಪರಿಸರದಲ್ಲಿ ಹಾವುಗಳು ವಾಸವಾಗಿರುತ್ತವೆ. ಇದನ್ನು ಸರ್ಪಗಾವಲು ಎಂದು ಕರೆಯಲಾಗುತ್ತದೆ. ಇದೀಗ ಉತ್ಖನನ ಸಮಯದಲ್ಲಿಯೇ ಸುಮಾರು 8 ಮೀಟರ್ ಉದ್ದದ ಹಾವು ಕಂಡಿದ್ದೇವೆ ಕಾರ್ಮಿಕರು ಹೇಳುತ್ತಿದ್ದಾರೆ. ಕೆಲ ಕಾರ್ಮಿಕರು ಕೆಲಸಕ್ಕೆ ಹಿಂದೇಟು ಹಾಕುತ್ತಿರೋ ಬಗ್ಗೆ ಮಾತುಗಳು ಕೇಳಿ ಬಂದಿವೆ.

45
ಪುಟ್ಟ ಶಿವಲಿಂಗ ಪತ್ತೆ

ಶನಿವಾರ ಜನತಾ ಶಿಕ್ಷಣ ಸಂಸ್ಥೆ ಕಟ್ಟಡ ತೆರವು ನಂತರ ಕೋಟೆ ಗೋಡೆಯಲ್ಲಿ ಶಿವಲಿಂಗು ಪತ್ತೆಯಾಗಿತ್ತು. ಕೋಟೆ ಗೋಡೆ ಒಳಭಾಗದಲ್ಲಿದ್ದ ಶಿವಲಿಂಗು ಕಂಡು ಬಂದಿದೆ. ಪತ್ತೆಯಾದ ಶಿವಲಿಂಗು ಕಂಚಿನದ್ದಾ? ತಾಮ್ರದ್ದಾ? ಬೆಳ್ಳಿಯದ್ದಾ? ಎಂಬುದರ ಬಗ್ಗೆ ಕುತೂಹಲ ಮನೆ ಮಾಡಿದೆ. ಪುಟ್ಟ ಶಿವಲಿಂಗದ ಆಕೃತಿಯನ್ನ ಪುರಾತತ್ವ ಇಲಾಖೆ ಅಧಿಕಾರಿಗಳು‌ ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಲಕ್ಕುಂಡಿ ಇತಿಹಾಸಕ್ಕೆ ಹೊಸ ಆಯಾಮ ನೀಡ್ತಿರೋ ಉತ್ಖನನಕ್ಕೆ ಸ್ಥಳೀಯರಿಂದಲೇ ಅಪಸ್ವರ: ವಿರೋಧಕ್ಕೆ ಕಾರಣ ಏನು?

55
ಇಂದು ಸಂಜೆ ಸಭೆ

ಇಂದು ಮೂರನೇ ದಿನದ ಉತ್ಖನನ ಕಾರ್ಯ ಆರಂಭಗೊಂಡಿದೆ. ಇಂದು ಸಂಜೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ ಪಾಟೀಲ್ ನೇತೃತ್ವದಲ್ಲಿ ಪುರಾತತ್ವ ಇಲಾಖೆ ಅಧಿಕಾರಿಗಳ ಸಭೆ ನಡೆಯಲಿದೆ. ಈ ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು, ಜಿಲ್ಲಾಧಿಕಾರಿ, ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ ಅಧಿಕಾರಿಗಳ ಭಾಗಿಯಾಗಲಿದ್ದಾರೆ.

ಇದನ್ನೂ ಓದಿ: 800 ಗ್ರಾಂ ಇದ್ದ ಚಿನ್ನ 466 ಗ್ರಾಂ ಹೇಗಾಯಿತು? ಇನ್ನುಳಿದ ಬಂಗಾರ ಎಲ್ಲಿ ಹೋಯಿತು?

Read more Photos on
click me!

Recommended Stories