ಸೋಮವಾರಪೇಟೆ ತಾಲೂಕಿನ ಜಂಬೂರು ಗ್ರಾಮದಲ್ಲಿ ಹಾಗೂ ಮಡಿಕೇರಿ ತಾಲೂಕಿನ ಮದೆ ಗ್ರಾಮದಲ್ಲಿ ಈಗಾಗಲೇ 463 ಮನೆಗಳು ನಿರ್ಮಾಣವಾಗುತ್ತಿದ್ದು, ಮೇ ಅಂತ್ಯದೊಳಗೆ ಸಂತ್ರಸ್ತರಿಗೆ ಮುಕ್ತವಾಗುವ ನಿರೀಕ್ಷೆಯಿದೆ.
undefined
ಮೇ 29ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಕೊಡಗು ಜಿಲ್ಲೆಗೆ ಆಗಮಿಸುವ ಸಾಧ್ಯತೆಯಿದ್ದು, ಜಿಲ್ಲೆಯ ಮದೆ ಹಾಗೂ ಜಂಬೂರು ಗ್ರಾಮಗಳಲ್ಲಿ ಪ್ರಕೃತಿ ವಿಕೋಪ ಸಂತ್ರಸ್ತರಿಗೆ ನಿರ್ಮಿಸಲಾಗಿರುವ ಮನೆಗಳನ್ನು ಹಸ್ತಾಂತರ ಮಾಡಲಿದ್ದಾರೆ ಎನ್ನಲಾಗುತ್ತಿದೆ.
undefined
ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಹಾಗೂ ವಸತಿ ಸಚಿವರಾಗಿರುವ ವಿ. ಸೋಮಣ್ಣ ಅವರು, ಮೇ 22ರಂದು ಕೊಡಗು ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದಾರೆ. ಅಂದು ಜಿಲ್ಲೆಯ ಮದೆ, ಬಿಳಿಗೇರಿ, ಗಾಳಿಬೀಡು ಹಾಗೂ ಜಂಬೂರು ಗ್ರಾಮಗಳಲ್ಲಿ ಸಂತ್ರಸ್ತರಿಗೆ ನಿರ್ಮಾಣವಾಗುತ್ತಿರುವ ಕಾಮಗಾರಿಗಳ ಬಗ್ಗೆ ಸಚಿವರು ಪರಿಶೀಲನೆ ನಡೆಸಲಿದ್ದಾರೆ. ಜಂಬೂರಿನಲ್ಲಿ 383 ಮನೆಗಳು ಹಾಗೂ ಮದೆನಾಡಿನಲ್ಲಿ 80 ಮನೆಗಳು ಮಳೆಗಾಲದ ಮುಂಚಿತವಾಗಿ ಹಸ್ತಾಂತರವಾಗಲಿದೆ.
undefined
ಸರ್ಕಾರದಿಂದ ಮಡಿಕೇರಿ ತಾಲೂಕಿನ ಕರ್ಣಂಗೇರಿ ಗ್ರಾಮದಲ್ಲಿ ಸಂತ್ರಸ್ತರಿಗೆ 35 ಮನೆಗಳು ಮಾತ್ರ ಹಸ್ತಾಂತರವಾಗಿದೆ. ತಾಲೂಕಿನ ಮದೆನಾಡು ಗ್ರಾಮದಲ್ಲಿ ಈಗಾಗಲೇ 80 ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಜಂಬೂರು ಗ್ರಾಮದಲ್ಲಿ ಮನೆಗಳ ನಿರ್ಮಾಣವಾಗುತ್ತಿದ್ದು, ಸಂತ್ರಸ್ತ ಫಲಾನುಭವಿಗಳಿಗೆ ಮನೆಗಳ ಹಂಚಿಕೆ ಮಾಡಲಾಗಿದೆ.
undefined
ಜಿಲ್ಲೆಯಲ್ಲಿ 2018ರಲ್ಲಿ ಸುರಿದ ಮಳೆಯಿಂದ ಪ್ರಕೃತಿ ವಿಕೋಪದಿಂದ ಒಟ್ಟು 842 ಸಂತ್ರಸ್ತರನ್ನು ಗುರುತಿಸಲಾಗಿದ್ದು, ನಂತರ ಪುನಃ ಸಂತ್ರಸ್ತರ ಪಟ್ಟಿಯನ್ನು ಪರಿಷ್ಕರಿಸಲಾಯಿತು. ಕೆಲವು ಗುಡ್ಡಗಳಲ್ಲಿ ಮನೆ ಕಟ್ಟಿಕೊಂಡು ಇರುವವರನ್ನು ಅಪಾಯಕಾರಿಯಾದ ಕಾರಣ ಜಿಲ್ಲಾಡಳಿತ ಅವರಿಗೆ ಮನೆ ತೆರವು ಮಾಡುವಂತೆ ಸೂಚಿಸಿ ಸಂತ್ರಸ್ತರ ಸಂಖ್ಯೆಯನ್ನೂ 925ಕ್ಕೆ ಏರಿಸಲಾಗಿದೆ.
undefined