ಶೋಚನೀಯ ಸ್ಥಿತಿಯಲ್ಲಿ ಕ್ವಾರಂಟೈನ್‌ ಕೇಂದ್ರಗಳು: ಇಲ್ಲಿ ಇರೋದಾದ್ರೂ ಹೇಗೆ? ಬಡ ಕಾರ್ಮಿಕರು ಅಳಲು..!

First Published | May 14, 2020, 11:26 AM IST

ಯಾದಗಿರಿ(ಮೇ.14): ವಿವಿಧ ಜಿಲ್ಲೆ, ಬೇರೆ ಬೇರೆ ರಾಜ್ಯಗಳಿಂದ ಜಿಲ್ಲೆಗೆ ಬಂದ ವಲಸೆ ಕಾರ್ಮಿಕರಿಗೆ ಆರಂಭಿಸಿರುವ ಕೆಲವೊಂದು ಕ್ವಾರಂಟೈನ್ ಕೇಂದ್ರಗಳಲ್ಲಿ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲ. ಹೀಗಾಗಿ ಇಲ್ಲಿ ಹೇಗೆ ಇರಬೇಕು ಎಂಬುದು ವಲಸೆ ಕಾರ್ಮಿಕರು ಅಳಲಾಗಿದೆ. ಕೆಲವುಗಳ ದುಸ್ಥಿತಿಯಂತೂ ಅತ್ಯಂತ ಶೋಚನೀಯ ಸ್ಥಿತಿಯಲ್ಲಿವೆ. 

ಶೋಚನೀಯ ಸ್ಥಿತಿಯಲ್ಲಿ ಯಾದಗಿರಿ ಜಿಲ್ಲೆಯ ಕೆಲವೊಂದು ಕ್ವಾರಂಟೈನ್ ಕೇಂದ್ರಗಳು
ಇಂತಹ ಕ್ವಾರಂಟೈನ್ ಕೇಂದ್ರಗಳಲ್ಲೇ ಸೋಂಕು ಹಬ್ಬುವ ಸಾಧ್ಯತೆಯನ್ನೂ ಅಲ್ಲಗೆಳೆಯುವಂತಿಲ್ಲ ಎಂಬುದು ಸಾರ್ವಜನಿಕರ ಆತಂಕ
Tap to resize

ಜರ್ಮನಿಯಲ್ಲಿ ಯಹೂದಿಗಳನ್ನು ಶಿಕ್ಷಿಸಲು ಅಡಾಲ್ಫ್‌ ಹಿಟ್ಲರ್ ನಿರ್ಮಿಸಿದ್ದ ಲೇಬರ್ ಕ್ಯಾಂಪುಗಳ ಚಿತ್ರಣ ಕಣ್ಮುಂದೆ ಬಂದಂತೆ ಭಾಸವಾಗುತ್ತದೆ
ಕ್ವಾರಂಟೈನ್ ಕೇಂದ್ರದಲ್ಲಿನ ವ್ಯವಸ್ಥೆಗೆ ನಲುಗಿ ಹೋದ ಕಾರ್ಮಿಕರ ಕುಟುಂಬಗಳು
ಕ್ವಾರಂಟೈನ್ ಕೇಂದ್ರದಲ್ಲಿನ ವ್ಯವಸ್ಥೆಗೆ ನಲುಗಿ ಹೋದ ಕಾರ್ಮಿಕರ ಕುಟುಂಬಗಳು
ಊಟ-ಉಪಾಹಾರಕ್ಕಾಗಿ ಪರದಾಟ, ಕುಡಿಯುವ ನೀರಿಗಾಗಿ ನರಳಾಟ, ಶೌಚಾಲಯ, ವಿದ್ಯುತ್ ಅವ್ಯವಸ್ಥೆ ಮುಂತಾದ ಚಿತ್ರಣಗಳು ಬೆಚ್ಚಿ ಬೀಳಿಸುತ್ತವೆ
ಕೆಲವು ಕೇಂದ್ರಗಳಲ್ಲಿ ನೂರಾರು ಜನರನ್ನು ಒಂದೆಡೆಯೇ ಗುಂಪು ಗುಂಪಾಗಿ ಹಾಕಿ ಬೀಗ ಜಡಿದ ಅಧಿಕಾರಿಗಳು
ಕ್ವಾರಂಟೈನ್ ಕೇಂದ್ರಗಳೇ ಮುಂದೊಂದು ದಿನ ಕೊರೋನಾ ಸೋಂಕು ಹಬ್ಬಿಸುವ ಆತಂಕ
ಗರ್ಭಿಣಿಯರು, ಬಾಣಂತಿಯರು, ಹಸುಗೂಸುಗಳು, ವಯೋವೃದ್ಧರು ಮುಂತಾದವರು ತುತ್ತು ಊಟಕ್ಕಾಗಿ ಪರದಾಟ
ಹದಗೆಟ್ಟ ವ್ಯವಸ್ಥೆಯ ಬಗ್ಗೆ ಕೆಲವರು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಮೊಬೈಲ್ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಆಕ್ರೋಶ ವ್ಯಕ್ತಪಡಿಸುತ್ತಿರುವ ವಲಸೆ ಕಾರ್ಮಿಕರು

Latest Videos

click me!