Published : Nov 17, 2026, 02:08 PM ISTUpdated : Nov 17, 2026, 02:11 PM IST
ಕರ್ನಾಟಕದ ಮೋಹನ್ ರೈ ಸೇರಿದಂತೆ ಭಾರತದ ವಿವಿಧೆಡೆ ಮಸೀದಿ ಹಾಗೂ ಈದ್ಗಾ ನಿರ್ಮಾಣಕ್ಕೆ ಹಿಂದೂಗಳು ತಮ್ಮ ಬೆಲೆಬಾಳುವ ಭೂಮಿಯನ್ನು ದಾನವಾಗಿ ನೀಡಿದ್ದಾರೆ. ಇದು ದೇಶದ ಧಾರ್ಮಿಕ ಸಾಮರಸ್ಯ ಮತ್ತು ಸೌಹಾರ್ದತೆಗೆ ಅತ್ಯುತ್ತಮ ಉದಾಹರಣೆಯಾಗಿದೆ.
ಭಾರತ ಜಾತ್ಯಾತೀತ ರಾಷ್ಟ್ರವಾಗಿದ್ದು, ಎಲ್ಲಾ ಧರ್ಮದವರು ಶಾಂತಿ ಮತ್ತು ಸಹಬಾಳ್ವೆಯಿಂದ ಜೀವನ ನಡೆಸಿಕೊಂಡು ಬರುತ್ತಿದ್ದಾರೆ. ಮುಸ್ಲಿಮರು ಒಗ್ಗಟ್ಟಾಗಿ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ರೆ, ಹಿಂದೂಗಳು ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸುತ್ತಾರೆ. ಈ ಲೇಖನವು ಮಸೀದಿಗಳ ನಿರ್ಮಾಣ ಹಾಗೂ ವಿಸ್ತರಣೆಗಾಗಿ ಭೂಮಿ ದಾನ ನೀಡಿದವರ ಮಾಹಿತಿಯನ್ನು ಒಳಗೊಂಡಿದೆ. ಇದು ಭಾರತದ ಧಾರ್ಮಿಕ ಸಾಮರಸ್ಯ ಮತ್ತು ಸೌಹಾರ್ದತೆಯನ್ನು ತೋರಿಸುತ್ತದೆ.
25
ದಕ್ಷಿಣ ಕನ್ನಡದ ಮೋಹನ್ ರೈ
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಮೋಹನ್ ರೈ ಅವರು, ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರು. 2017ರಲ್ಲಿ ಮೋಹನ್ ರೈ ಅವರು ಮಸೀದಿ ಮತ್ತು ದರ್ಗಾದ ವಿಸ್ತರಣೆಗಾಗಿ ತಮ್ಮ 12 ಸೆಂಟ್ಸ್ ಜಾಗವನ್ನು ದಾನವಾಗಿ ನೀಡಿದ್ದರು.
ಮಸೀದಿ ನಿರ್ಮಾಣಕ್ಕಾಗಿ ಹಣಕಾಸಿನ ನೆರವು
ಗದಗ ಜಿಲ್ಲೆಯ ಪುರ್ತಗೇರಿ ಗ್ರಾಮದ ಹಳೆಯ ಮಸೀದಿ ನಿರ್ಮಾಣಕ್ಕಾಗಿ ಸ್ಥಳೀಯ ಹಿಂದೂಗಳು ಹಣಕಾಸಿನ ನೆರವು ಮತ್ತು ನಿರ್ಮಾಣ ಸಾಮಗ್ರಿಗಳನ್ನು ನೀಡಿ ಸಹಕರಿಸಿದರು
35
ದಾವಣೆಗೆರೆ ಮೂವರು ಸೋದರರು
2022ರಲ್ಲಿ ದಾವಣಗೆರೆ ಜಿಲ್ಲೆಯ ಮಾಯಕೊಂಡ ತಾಲೂಕಿನ ಅನಬೇರು ಗ್ರಾಮದ ಸೋದರರಾದ ರಾಜಶೇಖರಪ್ಪ, ಕೆ.ಸಿ.ರಾಜಪ್ಪ ಮತ್ತು ಬಿ.ಶೇಖರಪ್ಪ ಎಂಬವರು ತಮ್ಮೂರಿನ ಈದ್ಗಾ ಕಾಂಪೌಂಡ್ ನಿರ್ಮಾಣಕ್ಕಾಗಿ ಭೂಮಿಯನ್ನು ದಾನವನ್ನಾಗಿ ನೀಡಿದ್ದರು ಎಂದು ವರದಿಗಳಿವೆ. ಸಮುದಾಯದ ಸಾಮರಸ್ಯಕ್ಕೆ ನೀಡಿದ ಕೊಡುಗೆಗಾಗಿ ದಾನಿಗಳನ್ನು ಸ್ಥಳೀಯ ಸಮುದಾಯವು ಸಾರ್ವಜನಿಕವಾಗಿ ಗೌರವಿಸಿತ್ತು.
ತಮ್ಮೂರಿನ ಮುಸ್ಲಿಮರು ನಮಾಜ್‌ಗಾಗಿ ಪಕ್ಕದೂರಿಗೆ ಹೋಗುತ್ತಿದ್ದನ್ನು ಗಮನಿಸಿದ ಪಂಡಿತ್ ಜಸ್ಪಾಲ್ ರಾಮ್ ಕುಟುಂಬ, 5 ರಿಂದ 7 ಎಕರೆ ಭೂಮಿಯನ್ನು ದಾನವಾಗಿ ನೀಡಿದ್ದರು. 2026ರ ಫೆಬ್ರವರಿಯಲ್ಲಿ ಪಂಜಾಬ್ ರಾಜ್ಯದ ಸಂಗ್ರೂರ್ ಜಿಲ್ಲೆಯ ಪುನ್ನೆವಾಲ್ ಗ್ರಾಮದಲ್ಲಿ ಮಸೀದಿ ಉದ್ಘಾಟನೆಯಾಗಿತ್ತು. 2022ರಲ್ಲಿ ಭೂಮಿ ನೀಡಲಾಗಿತ್ತು. ಪಂಡಿತ್ ಜಸ್ಪಾಲ್ ರಾಮ್ ಮತ್ತು ಪಂಡಿತ್ ವಿಜಯ್ ಕುಮಾರ್ ಸಮ್ಮುಖದಲ್ಲಿಯೇ ಮಸೀದಿಯನ್ನು ಉದ್ಘಾಟನೆ ಮಾಡಲಾಗಿತ್ತು.
55
ಮಸೀದಿ ದಾರಿಗಾಗಿ ಭೂಮಿ, 1.2 ಕೋಟಿ ರೂಪಾಯಿ ಮೌಲ್ಯದ 2.1 ಎಕರೆ ಭೂಮಿ
ಉತ್ತರ ಪ್ರದೇಶದಲ್ಲಿ ನಾಲ್ವರು ಹಿಂದೂಗಳು ಮಸೀದಿಯ ದಾರಿಗಾಗಿ ಭೂಮಿಯನ್ನು ದಾನವಾಗಿ ನೀಡಿದ್ದರು. 2018ರಲ್ಲಿ ಉತ್ತರ ಪ್ರದೇಶದ ಥವಾಯಿಪರ್ ಈ ಘಟನೆ ನಡೆದಿತ್ತು. ಕಾಶಿಪುರದ ಇಬ್ಬರು ಹಿಂದೂ ಸಹೋದರಿಯರು ತಮ್ಮ ತಂದೆಯ ಕೊನೆಯ ಆಸೆಯಂತೆ 2022ರಲ್ಲಿ ಈದ್ಗಾಕ್ಕಾಗಿ ಸುಮಾರು 1.2 ಕೋಟಿ ರೂಪಾಯಿ ಮೌಲ್ಯದ 2.1 ಎಕರೆ ಭೂಮಿಯನ್ನು ದಾನ ಮಾಡಿದರು