ಉಡುಪಿ, ದಕ್ಷಿಣ ಕನ್ನಡದಲ್ಲಿ ಗುಡಗು ಸಹಿತ ಭಾರೀ ಮಳೆ

First Published | May 3, 2020, 10:03 AM IST

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಹಲವೆಡೆ ಶನಿವಾರ ಸಂಜೆ ಹಾಗೂ ರಾತ್ರಿ ವೇಳೆ ಗುಡುಗು ಮಿಂಚು ಸಹಿತ ಮಳೆಯಾಗಿದೆ. ಬೆಳ್ತಂಗಡಿ ತಾಲೂಕಿನಾದ್ಯಂತ ಗುಡುಗು ಮಿಂಚು ಸಹಿತ ಧಾರಾಕಾರ ವರ್ಷಧಾರೆ ಆಗಿದೆ. ಇಲ್ಲಿವೆ ರವಿ ಪರಕ್ಕಜೆ ಮತ್ರು ಈಶಪ್ರಸನ್ನ ತೆಗೆದ ಫೋಟೋಸ್

ಉಡುಪಿ ಹಾಗೂ ಮಂಗಳೂರಿನ ಹಲವು ಪ್ರದೇಶಗಳಲ್ಲಿ ಶನಿವಾರ ಸಂಜೆ ಭಾರೀ ಮಳೆಯಾಗಿದ್ದು, ಮಳೆಗೂ ಮುನ್ನ ದಟ್ಟವಾಗಿ ಕವಿದಿರುವ ಕಾರ್ಮೋಡ
undefined
ದ.ಕ. ಹಾಗೂ ಉಡುಪಿ ಜಿಲ್ಲೆಯ ಹಲವೆಡೆ ಶನಿವಾರ ಸಂಜೆ ಹಾಗೂ ರಾತ್ರಿ ವೇಳೆ ಗುಡುಗು ಮಿಂಚು ಸಹಿತ ಮಳೆಯಾಗಿದೆ. ಬೆಳ್ತಂಗಡಿ ತಾಲೂಕಿನಾದ್ಯಂತ ಗುಡುಗು ಮಿಂಚು ಸಹಿತ ಧಾರಾಕಾರ ವರ್ಷಧಾರೆ ಆಗಿದೆ.
undefined

Latest Videos


ಮೂರು ದಿನಗಳ ಬಳಿಕ ಮತ್ತೆ ಭಾರಿ ಮಳೆಯಾಗಿ ಕೃಷಿಕರನ್ನು ಸಂತಸಗೊಳಿಸಿದೆ. ಮಂಗಳೂರು ಹೊರವಲಯ, ಬಂಟ್ವಾಳ ತಾಲೂಕು ಭಾಗದಲ್ಲೂ ಮಳೆಯಾಗಿದೆ.
undefined
ಉಡುಪಿ ಜಿಲ್ಲಾದ್ಯಂತ ಶನಿವಾರ ರಾತ್ರಿ ಗುಡುಗು ಸಿಡಿಲಿನೊಂದಿಗೆ ಉತ್ತಮ ಮಳೆಯಾಗಿದೆ.
undefined
ಈ ಮೂಲಕ ಕಳೆದ ಮೂರು ದಿನಗಳಿಂದ ಮೋಡ ಮಾತ್ರ ಕಾಣಿಸಿಕೊಂಡು, ಸೆಕೆಯಲ್ಲಿ ಬೇಯುತ್ತಿರುವ ಜನರನ್ನು ನಿರಾಸೆಗೊಳಿಸಿದ್ದ ಮಳೆ, ತಂಪೆರೆಯಿತು.
undefined
ಗುರುವಾರ ಮತ್ತು ಶುಕ್ರವಾರ ಸಂಜೆ ಹೊತ್ತಿಗೆ ಜಿಲ್ಲೆಯ ಕೆಲವು ಭಾಗಗಳಲ್ಲಿ ತುಂತುರು ಮಳೆಯಾಗಿತ್ತು.
undefined
ಇದರಿಂದ ಹಗಲಿನಲ್ಲಿ ಸೆಕೆ ವಿಪರೀತ ಏರಿಕೆಯಾಗಿತ್ತು. ಶನಿವಾರ ಮಧ್ಯಾಹವೂ ಮೋಡ ಕವಿದ ವಾತಾವರಣ ಇದ್ದು ನಂತರ ತಿಳಿಯಾಗಿತ್ತು.
undefined
ರಾತ್ರಿಯಾಗುತ್ತಿದ್ದಂತೆ ಇದ್ದಕ್ಕಿದ್ದಂತೆ ಸುಮಾರು 1 ಗಂಟೆ ಉತ್ತಮ ಮಳೆ ಸುರಿದಿದ್ದು, ವಾತಾವರಣ ತಂಪಾಯಿತು. ಕಾರ್ಕಳ ಭಾಗದಲ್ಲೂ ಗುಡುಗು ಸಹಿತ ಮಳೆಯಾಯಿತು.
undefined
click me!