ಗಣತಿಗೆ ತೆರಳಿದ್ದ ಶಿಕ್ಷಕರಿಗೆ ಅಪಘಾತ, ಕೋಲಾರ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಸಾವು

Published : Apr 23, 2026, 09:53 PM IST

ಗಣತಿಗೆ ತೆರಳಿದ್ದ ಶಿಕ್ಷಕರಿಗೆ ಅಪಘಾತ, ಕೋಲಾರ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಸಾವು, ಬೈಕ್ ಹಾಗೂ ಕಾರು ಅಪಘಾತಕ್ಕೀಡಾಗಿ ದುರಂತ ಸಂಭವಿಸಿದೆ. ಮತ್ತೊರ್ವ ಶಿಕ್ಷಕ ಗಭೀರವಾಗಿ ಗಾಯಗೊಂಡಿದ್ದಾರೆ. 

PREV
14
ಮನೆ ಗಣತಿ ವೇಳೆ ಅಪಘಾತ

ಮನೆ ಗಣತಿ ಕಾರ್ಯಗಳು ಆರಂಭಗೊಂಡಿದೆ. ಶಿಕ್ಷಕರು ಉರಿ ಬಿಸಿಲಿನಲ್ಲಿ ಗಣತಿ ಕಾರ್ಯಗಳನ್ನು ನಡೆಸುತ್ತಾ ತಮ್ಮ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಹೀಗೆ ಮನೆ ಗಣತಿಗೆ ತೆರಳುತ್ತಿದ್ದ ಶಿಕ್ಷಕರ ಬೈಕ್ ಅಪಘಾತಕ್ಕೀಡಾಗಿ ದುರಂತ ಸಂಭವಿಸಿದೆ. ಕೋಲಾರದ ಬೆತ್ತನಿ ಗ್ರಾಮದ ಬಳಿ ಘಟನೆ ನಡೆದಿದೆ.

24
ಮುಖ್ಯ ಶಿಕ್ಷಕ ಮುನಿರಾಜು ಸಾವು

ಬೈಕ್ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿದೆ. ಇಬ್ಬರು ಶಿಕ್ಷಕರು ಬೈಕ್‌ನಲ್ಲಿ ತೆರಳುತ್ತಿದ್ದಾಗ, ಹಿಂಬದಿಯಿಂದ ಬಂದ ಕಾರು ಡಿಕ್ಕಿಯಾಗಿ ಸ್ಥಳದಲ್ಲೆ ಬೈರಂಡಹಳ್ಳಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಮುನಿರಾಜು‌ ಸಾವು ಕಂಡಿದ್ದಾರೆ.

34
ಮತ್ತೊಬ್ಬ ಮುಖ್ಯ ಶಿಕ್ಷಕನಿಗೆ ಗಾಯ

ಇದೇ ಬೈಕ್‌‌ನಲ್ಲಿದ್ದ ಮತ್ತೊಬ್ಬ ಮುಖ್ಯ ಶಿಕ್ಷಕ ಕೆ.ಟಿ.ನಾಗರಾಜ್ ಗೆ ಗಾಯ ಗೊಂಡಿದ್ದಾರೆ. ತಕ್ಷಣವೇ ಗಾಯಾಳು ಶಿಕ್ಷಕನನ್ನು ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕೆಟಿ ನಾಗರಾಜ್‌ಗೆ ಚಿಕಿತ್ಸೆ ಮುಂದುವರಿದಿದೆ.ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

44
ಗಣತಿ ಕಾರ್ಯ ಮುಗಿಸಿ ವಾಪಾಸ್ಸಾಗುವಾಗ ಅಪಘಾತ

ಮುಖ್ಯ ಶಿಕ್ಷಕರಾದ ಕೆಟಿ ನಾಗರಾಜ್ ಹಾಗೂ ಮುನಿರಾಜ್ ಮನೆ ಗಣತಿ ಕಾರ್ಯದಲ್ಲಿ ತೊಡಗಿದ್ದರು. ದಿನ್ನೆಹೊಸಹಳ್ಳಿಯಲ್ಲಿ ಮನೆ ಗಣತಿ ಕಾರ್ಯ ಮುಗಿಸಿ ವಾಪಸ್ಸಾಗುವ ವೇಳೆ ಅಪಘಾತ ನಡೆದಿದೆ. ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಕೋಲಾರ ಜಿಲ್ಲಾಸ್ಪತ್ರೆಗೆ ಧಾವಿಸಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Read more Photos on
click me!

Recommended Stories