ಬಹು ಬೆಳೆ ಬೇಸಾಯ, ಉತ್ತಮ ಆದಾಯ: ಇದು 21 ವರ್ಷದ ಯುವ ರೈತನ ಚಮತ್ಕಾರ

First Published | Feb 14, 2020, 5:51 PM IST

ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕು, ಕಸಬಾ ಹೋಬಳಿಯ ಯಲೇಚಾಗಹಳ್ಳಿ ಗ್ರಾಮದ 21 ವರ್ಷದ ಯುವ ರೈತ ರವಿ ತಮ್ಮ 6 ಎಕರೆ ಜಮೀನಿನಲ್ಲಿ ವಿವಿಧ ತೋಟಗಾರಿಕೆ ಬೆಳೆಗಳನ್ನು ಬೆಳೆದು ಆರ್ಥಿಕವಾಗಿ ಸಫಲರಾಗಿದ್ದಾರೆ. ಸರ್ಕಾರದ ಯೋಜನೆಗಳ ಇಲಾಖೆಯ ಹೊಸ ತಾಂತ್ರಿಕತೆಗಳು ಹಾಗೂ ಮಾರ್ಗದರ್ಶನದಿಂದಲೇ ಒಟ್ಟು 6 ಎಕರೆಯಿಂದ 20 ಲಕ್ಷ ರೂಗಳ ಆದಾಯವನ್ನು ಪಡೆದಿದ್ದಾರೆ. 

ರವಿಯವರ ತಂದೆ ಮಲ್ಲಪ್ಪ ಕೂಡ ಈ ಮುಂಚೆ ತಮ್ಮ ಜಮೀನಿನಲ್ಲಿ ರಾಗಿಯನ್ನು ಬೆಳೆಯುತ್ತಿದ್ದರು. ಇದರಿಂದ ಅವರಿಗೆ ಒಟ್ಟು ಆದಾಯ 5 ಲಕ್ಷ ರೂಗಳು ಬರುತ್ತಿತ್ತು.
undefined
ತದನಂತರ 2011-2012 ನೇ ಸಾಲಿನ ನಂತರದ ದಿನಗಳಲ್ಲಿ ರವಿ ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಂದ ತಾಂತ್ರಿಕ ಮಾಹಿತಿ ಪಡೆದು ವಿವಿಧ ತೋಟಗಾರಿಕೆ ಬೆಳೆಗಳಾದ ಟೋಮ್ಯಾಟೋ-12 ಎಕರೆ, ಚೆಂಡು ಹೂ-2 ಎಕರೆ, ಬೀನ್ಸ್-12 ಎಕರೆ, ಎಲೆಕೋಸು-2 ಎಕರೆ ಮತ್ತು ತೆಂಗು 75 ಗಿಡಗಳನ್ನ ಬೆಳೆದರು.
undefined

Latest Videos


ರವಿಯವರು ತೋಟಗಾರಿಕೆ ಇಲಾಖೆಯಿಂದ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿಯಲ್ಲಿ 2018-19ನೇ ಸಾಲಿನಲ್ಲಿ 90,000ರೂ ಗಳ ಸಹಾಯಧನವನ್ನು ಪಡೆದು 2.5 ಎಕರೆಯಲ್ಲಿ ಎಲೆಕೋಸು ಮತ್ತು ಟೋಮ್ಯಾಟೋ ಬೆಳೆಗಳನ್ನು ಮಾಡಿದ್ದಾರೆ.
undefined
ಹಾಗೆಯೇ 2018-19 ನೇ ಸಾಲಿನಲ್ಲಿ ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ 25,000 ರೂಗಳ ಸಹಾಯಧನ ಪಡೆದು 75 ತೆಂಗಿನ ಗಿಡಗಳ ನಿರ್ವಹಣೆಗೆ ಗುಂಡಿ ತೆಗೆಯುವುದು, ನಾಟಿ ಮಾಡುವುದು, ನೀರು ಹಾಯಿಸುವುದು, ಜೊತೆಗೆ ಕಳೆ ನಿಯಂತ್ರಣಕ್ಕೆ ಬಳಸಿದ್ದಾರೆ.
undefined
ಈ ಹಿಂದೆ ರಾಗಿ ಮತ್ತು ಟೋಮ್ಯಾಟೋ ಬೆಳೆಗಳನ್ನು ಬೆಳೆಯುತ್ತಿದ್ದಾಗ ವೈಜ್ಞಾನಿಕ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಂಡಿರಲಿಲ್ಲ, ಆದಾಯ ಬಂದರು ಖರ್ಚು ತುಂಬಾ ಇರುತ್ತಿದ್ದರಿಂದ ಹೆಚ್ಚಿನ ಆದಾಯವನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ನಂತರ ತೋಟಗಾರಿಕೆ ಇಲಾಖೆಯ ಮಾರ್ಗದರ್ಶನ ಪಡೆದು ಹನಿ ನೀರಾವರಿ ಅಳವಡಿಕೆಯಿಂದ ನೀರಿನ ಸದ್ಭಳಕೆ, ಭೂಮಿಯಲ್ಲಿ ತೇವಾಂಶ ಕಾಪಾಡಲು ಮತ್ತು ಕಳೆ ನಿಯಂತ್ರಿಸಲು ನೆಲೆಹೊದಿಕೆ ಬಳಕೆಯಿಂದ ಕೂಲಿ ಆಳುಗಳ ಖರ್ಚು ಕಡಿಮೆಯಾಗುತ್ತದೆ ಮತ್ತು ಹೈಬ್ರಿಡ್ ತರಕಾರಿ ಬೀಜಗಳ ಬಳಕೆಯಿಂದ ಉತ್ತಮ ಇಳುವರಿ ಮತ್ತು ಹೆಚ್ಚಿನ ಆದಾಯವನ್ನು ತಮ್ಮದಾಗಿಸಿಕೊಂಡಿದ್ದಾರೆ.
undefined
ರಾಷ್ಟ್ರೀಯ ತೋಟಗಾರಿಕೆ ಮಿಷನ್ ಅಡಿಯಲ್ಲಿ ಹೈಬ್ರಿಡ್ ತರಕಾರಿ ಬೇಸಾಯಕ್ಕೆ ಸಹಾಯಧನವಾಗಿ 1,500 ರೂಗಳನ್ನು ಪಡೆದು ಹೈಬ್ರಿಡ್ ಟೋಮ್ಯಾಟೋ ಮತ್ತು ಕ್ಯಾಪ್ಸಿಕಂ ಬೆಳೆಯ ನೆಲಹೊದಿಕೆಗೆ 6,400 ರೂಗಳ ಸಹಾಯಧನವನ್ನು ಪಡೆದಿದ್ದಾರೆ. ಇಲಾಖೆಯ ಯೋಜನೆಗಳ ಸಹಾಯಧನದಿಂದ ಆರ್ಥಿಕ ನೆರವು ಪಡೆದು ರವಿ ಯಶಸ್ವಿ ರೈತನಾಗಿ ಹೊರ ಒಮ್ಮಲು ಕಾರಣವಾಗಿದೆ.
undefined
ಇಲಾಖೆಯ ಹೊಸ ತಾಂತ್ರಿಕತೆಗಳು ಹಾಗೂ ಮಾರ್ಗದರ್ಶನದಿಂದಲೇ ನಾನು ಹೆಚ್ಚಿನ ಆದಾಯಗಳಿಸಲು ಸಹಾಯವಾಯಿತು. ಒಟ್ಟು 6 ಎಕರೆಯಿಂದ 20 ಲಕ್ಷ ರೂಗಳ ಆದಾಯವನ್ನು ಪಡೆದಿದ್ದಾರೆ. ಒಂದು ಬೆಳೆಯನ್ನು ನಂಬಿ ಕೃಷಿ ಮಾಡುವುದು ಸೂಕ್ತವಾದ ಬೇಸಾಯ ಪದ್ಧತಿಯಲ್ಲ, ನಾಲ್ಕು ಐದು ಬೆಳೆ ಮಾಡಿದರೆ ಒಂದಿಲ್ಲ ಒಂದಕ್ಕೆ ಉತ್ತಮ ಬೆಲೆ ಸಿಕ್ಕಿ ಆದಾಯ ಹೆಚ್ಚಾಗುತ್ತದೆ, ಜಮೀನನ್ನು ವೈಜ್ಞಾನಿಕವಾಗಿ ವಿಂಗಡಣೆ ಮಾಡಿ ಬಹು ಬೆಳೆ ಮಾಡಿದರೆ ನಷ್ಟದ ಮಾತಿಲ್ಲ ಎಂಬುವುದು ರವಿಯವರ ನಂಬಿಕೆ. ಬೇರೆ ರೈತರು ಇಲಾಖೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
undefined
ರವಿಯವರು ತೋಟಗಾರಿಕೆ ಇಲಾಖೆಯಿಂದ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿಯಲ್ಲಿ 2018-19ನೇ ಸಾಲಿನಲ್ಲಿ 90,000ರೂ ಗಳ ಸಹಾಯಧನವನ್ನು ಪಡೆದು 2.5 ಎಕರೆಯಲ್ಲಿ ಎಲೆಕೋಸು ಮತ್ತು ಟೋಮ್ಯಾಟೋ ಬೆಳೆಗಳನ್ನು ಮಾಡಿದ್ದಾರೆ.
undefined
click me!