ಶಿಕ್ಷಣ ಕ್ಷೇತ್ರ ತೆರೆಯುವ ಮೂಲಕ ಅಸಂಖ್ಯಾತ ಮಕ್ಕಳ ಅಕ್ಷರ ನಿಧಿಯಾಗಿರುವ ಶ್ರೀಗಳು, ಸದಾ ರೈತಪರವಾದ ವಿಚಾರಧಾರೆ ಹೊಂದಿ ಸಾವಯವ ಕೃಷಿಗೆ ಉತ್ತೇಜನ ನೀಡಿ, ಮಣ್ಣಿನ ಸಂರಕ್ಷಣೆ ಕುರಿತು ಕಾರ್ಯಕ್ರಮ ಹಮ್ಮಿಕೊಂಡು ರೈತರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
undefined
ಮಕ್ಕಳ ಕಲಿಕಾ ಗುಣಮಟ್ಟ ಹೆಚ್ಚಿಸಬೇಕೆಂಬ ಮಹಾತ್ವಾಕಾಂಕ್ಷೆಯಿಂದ ನಕಲು ರಹಿತ ಪರೀಕ್ಷೆಗೆ ಆದ್ಯತೆ ನೀಡಿರುವ ಶ್ರೀಗಳು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಹಾಲಕೆರೆ ಮಠದಿಂದ ಉಳವಿ ವರೆಗೆ 261 ಚಕ್ಕಡಿಗಳ ಮೂಲಕ ಸತತ ಹದಿನೈದು ದಿನಗಳ ಕಾಲ ಚಕ್ಕಡಿಯಲ್ಲಿ ಸಾಗರೋಪಾದಿ ಭಕ್ತರೊಂದಿಗೆ ಉಳವಿಯಾತ್ರೆ ಕೈಗೊಂಡು ಜನತೆಗೆ ಅರಿವು ಮೂಡಿಸಿದರು.
undefined
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲಕ್ಷಾಂತರ ಮೌಲ್ಯವನ್ನು ಶಿಷ್ಯವೇತನವನ್ನಾಗಿ ನೀಡುವ ಮೂಲಕ ಮಕ್ಕಳ ಕಲಿಕೆಗೆ ಹಾಗೂ ಅಂಗವಿಕಲ ಮಕ್ಕಳಿಗೆ ವಿಶೇಷ ಶಿಕ್ಷಣ ನೀಡಿ ದಾರಿದೀಪವಾಗಿದ್ದಾರೆ.
undefined
ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಬಿದರಿ ಗ್ರಾಮದ ಬಸವಲಿಂಗಯ್ಯ ಹಾಗೂ ಗುರಮ್ಮ ದಂಪತಿ ಪುತ್ರರಾಗಿ ಡಿ. 19, 1938ರಂದು ಜನಿಸಿರುವ ಅನ್ನದಾನ ಶ್ರೀಗಳು ಬೈಲಹೊಂಗಲ ಹಾಗೂ ನರೇಗಲ್ಲಿನಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿ, ಮುಂದಿನ ವಿದ್ಯಾಭ್ಯಾಸವನ್ನು 12 ವರ್ಷ ಶಿವಯೋಗ ಮಂದಿರದಲ್ಲಿ ಮಾಡಿದ್ದಾರೆ. ಉನ್ನತ ವ್ಯಾಸಂಗಕ್ಕೆ ಕಾಶಿಗೆ ತೆರಳಿದ ಶ್ರೀಗಳು ಹಿಂದಿ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
undefined
ಇಂದು ಅದೇ ಅನ್ನದಾನೇಶ್ವರ ಮಠ, ಶಿವಯೋಗಮಂದಿರ, ಬಳ್ಳಾರಿ, ಹೊಸಪೇಟೆಯಲ್ಲಿನ ಮಠಗಳ ಪೀಠಾಧಿಕಾರಿಗಳಾಗಿ ನಮ್ಮೆದುರು ನಡೆದಾಡುವ ದೇವರಾದ ಶ್ರೀಗಳು
undefined
ಶಿವಯೋಗ ಮಂದಿರದಲ್ಲಿ 2010ರಲ್ಲಿ ನಿರ್ಮಿಸಿದ ತೇರು ಏಷ್ಯಾದಲ್ಲಿಯೇ ಅತಿ ಎತ್ತರದ ತೇರು ಹೆಗ್ಗಳಿಕೆಗೆ ಪಾತ್ರವಾಗಿದೆ. ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪ್ರಮುಖ ನಾಯಕರು ಆಗಮಿಸಿ ರಥೋತ್ಸವಕ್ಕೆ ಚಾಲನೆ ನೀಡಿರುವುದು ಇನ್ನೂ ಕಣ್ಮುಂದೆ ಇದೆ. 2005ರಲ್ಲಿ ಬೆಳ್ಳಿರಥ ನಿರ್ಮಿಸುವ ಮೂಲಕ ಮಹಿಳೆಯರಿಂದ ಎಳೆಸುವ ಮೂಲಕ ಶ್ರೀಗಳು ಸಮಾನತೆ ಕಲ್ಪಿಸಿದ್ದಾರೆ.
undefined
ಶ್ರೀಗಳು 1987ರಲ್ಲಿ ಅಧಿಕಾರ ವಹಿಸಿದ ದಿನದಿಂದ ನರೇಗಲ್ಲ, ಗಜೇಂದ್ರಗಡ, ಕುಷ್ಟಗಿ ಸೇರಿದಂತೆ ಮುಂತಾದ ಭಾಗಗಳಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ. ಇತ್ತೀಚೆಗೆ ವಿವಿಧ ಭಾಗಗಳಲ್ಲಿ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಿದ್ದಾರೆ. ಹೀಗಾಗಿ ಪ್ರತಿ ಸ್ಫರ್ಧಿಯಲ್ಲಿ ಈ ಸಂಸ್ಥೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡುತ್ತಿದ್ದಾರೆ.
undefined
ನಮ್ಮ ವಿದ್ಯಾಲಯದಲ್ಲಿ ವರ್ಷದಿಂದ ವರ್ಷಕ್ಕೆ ಪ್ರತಿಭಾನ್ವಿತರ ಸಂಖ್ಯೆ ಹೆಚ್ಚುತ್ತಲೆ ಸಾಗಿದೆ. ಇದಕ್ಕೆ ಶ್ರೀಗಳ ಸಮಯೋಚಿತ ಮಾರ್ಗದರ್ಶನವೇ ಕಾರಣವಾಗಿದೆ ಎಂದು ಅನ್ನದಾನೇಶ್ವರ ಪಪೂ ಮಹಾವಿದ್ಯಾಲಯದ ಪ್ರಾಚಾರ್ಯವೈ.ಸಿ. ಪಾಟೀಲ ಹೇಳಿದ್ದಾರೆ.
undefined
ಶ್ರೀಗಳ ಆಶೀರ್ವಾದದಿಂದ ಮಹಾವಿದ್ಯಾಲಯದಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆರೆದಿದ್ದು, ಪ್ರತಿವರ್ಷ ಮಹಾವಿದ್ಯಾಲಯದ ಫಲಿತಾಂಶ ಸುಧಾರಣೆಯಾಗುತ್ತಿದೆ ಎಂದು ಅನ್ನದಾನೇಶ್ವರ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಜಿ. ಕೇಶಣ್ಣವರ ತಿಳಿಸಿದ್ದಾರೆ.
undefined
ಹೊಸದಾಗಿ ಅಭಿನವ ಅನ್ನದಾನ ಪದವಿ ಪೂರ್ವ ಮಹಾವಿದ್ಯಾಲಯ ಸ್ಥಾಪಿಸಿದ್ದು ಮೊದಲ ಬ್ಯಾಚಿನ್ ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶ ಪಡೆದಿದ್ದಾರೆ ಎಂದು ಅಭಿನವ ಅನ್ನದಾನ ಪಪೂ ಮಹಾವಿದ್ಯಾಲಯದ ಪ್ರಾಚಾರ್ಯೆ ಅನಸೂಯಾ ಪಾಟೀಲ ಹೇಳಿದ್ದಾರೆ.
undefined