ತರೀಕೆರೆ; ಮದುವೆ ಛತ್ರದಿಂದ ವರ ಪರಾರಿ.. ಮದುಮಗಳ ಕೈಹಿಡಿದ ಕಂಡಕ್ಟರ್!

First Published | Jan 3, 2021, 9:38 PM IST

ಚಿಕ್ಕಮಗಳೂರು (ಜ. 03)   ರಾತ್ರಿ ರಿಸೆಪ್ಷನ್ ಗೆ ಇದ್ದ ವರ ಬೆಳಗ್ಗೆ ಮುಹೂರ್ತಕ್ಕೆ ನಾಪತ್ತೆಯಾಗಿದ್ದಾನೆ. ಇನ್ನೊಬ್ಬ ಹುಡುಗ  ಛತ್ರದಲ್ಲೇ ಯುವತಿಯ ಕೈಹಿಡಿದಿದ್ದಾನೆ. ತರೀಕರೆಯ ಶೃಂಗೇರಿ ಸಮುದಾಯ ಭವನದಲ್ಲಿನ ಸುಖಾಂತ್ಯದ ಮದುವೆ ಇದೆ.

ದೋರನಾಳು ಗ್ರಾಮದ ನವೀನ್ ಗೆ ಹೊಸದುರ್ಗದ ಸಿಂಧು ಜೊತೆ ಮದುವೆ ನಿಶ್ಚಯವಾಗಿತ್ತು.ಆದರೆ ಇನ್ನೊಂದು ಕಡೆ ನವೀನ್ ಪ್ರೀತಿಸಿದ ಯುವತಿಯಿಂದ ಮದುವೆ ನಿಲ್ಲಿಸುವ ಬೆದರಿಕೆ ಹಾಕಿದ್ದಳು.
ಇದೆಲ್ಲದರ ಪರಿಣಾಮ ಎಂಬಂತೆ ಛತ್ರದಿಂದಲೇ ವರ ನವೀನ್ ನಾಪತ್ತೆಯಾದ.ಮಧುಮಗಳಾಗಿದ್ದ ಸಿಂಧು ಅವರನ್ನು ಬಿಎಂಟಿಸಿ ಕಂಡಕ್ಟರ್ ಚಂದ್ರು ಮದುವೆಯಾದರು. ಚಂದ್ರು ತರೀಕೆರೆ ತಾಲೂಕಿನ ನಂದಿ ಗ್ರಾಮದ ಯುವಕ.
Tap to resize

ಹಸೆಮಣೆ ಏರಬೇಕಿದ್ದ ಯುವತಿಗೆ ಮದುವೆ ನಿಲ್ಲುವ ಆತಂಕ ಎದುರಾಗಿತ್ತು. ಆದರೆ, ಮದುವೆ ನಿಲ್ಲದೆ ಛತ್ರದಲ್ಲೇ ಮತ್ತೋರ್ವ ಯುವಕ ಚಂದ್ರು ನಾನೇ ಮದುವೆಯಾಗುತ್ತೇನೆಂದು ವಿವಾಹವಾಗಿದ್ದು ಎಲ್ಲವೂ ಸುಖಾಂತ್ಯವಾಗಿದೆ.
ಯುವಕ ಚಂದ್ರು ತೆಗೆದುಕೊಂಡ ತೀರ್ಮಾನಕ್ಕೆ ಎಲ್ಲ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.x

Latest Videos

click me!