Tumkur ghost story: ತುಮಕೂರು ಹೈವೆಯಲ್ಲಿ ಮಟನ್ ಸಾಂಬಾರ್ ಕೇಳಿದ ಅಪರಿಚಿತ ಧ್ವನಿ, ನೀವು ಎಚ್ಚರ!

Published : Jun 19, 2026, 01:25 PM IST

Hanumantapura tumkur road story ತುಮಕೂರು ಜಿಲ್ಲೆಯ ಹನುಮಂತಪುರ ಮತ್ತು ಕೊರಟಗೆರೆ ಭಾಗದ ರಸ್ತೆಗಳಲ್ಲಿ ಮಧ್ಯರಾತ್ರಿ ಸಮಯದಲ್ಲಿ ವಿಚಿತ್ರ ಘಟನೆಗಳು ನಡೆಯುತ್ತವೆ ಎಂಬ ಮಾತುಗಳು ವರ್ಷಗಳಿಂದ ಕೇಳಿಬರುತ್ತಿವೆ. 

PREV
14
ನಾನು ಬರಲಾ ಅಜ್ಜ?

2010ರ ಅಕ್ಟೋಬರ್ ತಿಂಗಳಲ್ಲಿ, ಪಿತೃಪಕ್ಷ ಮುಗಿಯುವ ದಿನಗಳಲ್ಲಿ ನಡೆದ ಈ ಘಟನೆ ಅಜಯ್ ಜೀವನವನ್ನೇ ಬದಲಾಯಿಸಿತ್ತು. ಸಂಬಂಧಿಕರ ಮನೆಯಲ್ಲಿ ಊಟ ಮುಗಿಸಿ ರಾತ್ರಿ 11 ಗಂಟೆ ಸುಮಾರಿಗೆ ಸೈಕಲ್‌ನಲ್ಲಿ ಮನೆಗೆ ಹೊರಟಿದ್ದ ಅಜಯ್, ತನ್ನ ಜೊತೆ ಯಾರೋ ಮಾತನಾಡುತ್ತಿರುವ ಅನುಭವಕ್ಕೆ ಒಳಗಾಗಿದ್ದ.

ಮೊದಲಿಗೆ "ನಾನು ಬರಲಾ ಅಜ್ಜ?" ಎಂಬ ಧ್ವನಿ ಕೇಳಿಸಿತು. ಸುತ್ತಲೂ ನೋಡಿದರೂ ಯಾರೂ ಕಾಣಿಸಲಿಲ್ಲ. ಸ್ವಲ್ಪ ದೂರ ಹೋಗುತ್ತಿದ್ದಂತೆ ಅದೇ ಧ್ವನಿ ಮತ್ತೆ ಕೇಳಿಸಿತು. ಈ ಬಾರಿ ಅದು ಸಿಟ್ಟಿನಿಂದ ಮಾತನಾಡುವ ಮಹಿಳೆಯ ಧ್ವನಿಯಂತಿತ್ತು.

24
ನನಗೂ ಸ್ವಲ್ಪ ಮಟನ್ ಸಾಂಬಾರ್ ಕೊಡ್ತೀಯಾ?

"ನನ್ನನ್ನೂ ಕರೆದುಕೊಂಡು ಹೋಗು... ಒಬ್ಬನೇ ಹೋಗ್ತಿದೀಯಾ?" ಎಂಬ ಮಾತು ಕೇಳುತ್ತಿದ್ದಂತೆ ಅಜಯ್ ಭಯದಿಂದ ನಡುಗತೊಡಗಿದ. ವಿಚಿತ್ರವೆಂದರೆ, ಅವನ ಕೈಯಲ್ಲಿದ್ದ ಮಟನ್ ಸಾಂಬಾರ್ ಪಾರ್ಸಲ್ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. ಆದರೆ ಆ ಧ್ವನಿ,

"ನನಗೂ ಸ್ವಲ್ಪ ಮಟನ್ ಸಾಂಬಾರ್ ಕೊಡ್ತೀಯಾ? ನನಗೂ ಹಸಿವಾಗಿದೆ..." ಎಂದು ಕೇಳಿತಂತೆ.

34
ಸಾಂಬಾರ್ ರಸ್ತೆಯ ಮೇಲೆ ಚೆಲ್ಲಾಪಿಲ್ಲಿ

ಈ ಮಾತು ಕೇಳಿದ ಕ್ಷಣ ಅಜಯ್ ನಿಯಂತ್ರಣ ಕಳೆದುಕೊಂಡು ಸೈಕಲ್‌ನಿಂದ ಕೆಳಗೆ ಬಿದ್ದ. ಟಿಫಿನ್ ಬಾಕ್ಸ್ ತೆರೆದು ಸಾಂಬಾರ್ ರಸ್ತೆಯ ಮೇಲೆ ಚೆಲ್ಲಾಪಿಲ್ಲಿಯಾಗಿತ್ತು. ಭಯದಿಂದ ನಡುಗುತ್ತಿದ್ದ ಅಜಯ್ ಸೈಕಲ್ ಎತ್ತಿಕೊಂಡು ಹಿಂದೆ ತಿರುಗಿ ನೋಡದೆ ಮನೆಗೆ ಓಡಿಹೋಗಿದ್ದ.

44
ತೀವ್ರ ಜ್ವರ

ಮರುದಿನ ಬೆಳಗ್ಗೆ ಅಜಯ್‌ಗೆ ತೀವ್ರ ಜ್ವರ ಕಾಣಿಸಿಕೊಂಡಿತು. ಔಷಧಿ ತೆಗೆದುಕೊಂಡರೂ ಜ್ವರ ಕಡಿಮೆಯಾಗದ ಕಾರಣ ಕುಟುಂಬದವರು ಹನುಮಂತಪುರದ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ವಿಶೇಷ ಪೂಜೆ ಮಾಡಿಸಿದರು. ದೇವಸ್ಥಾನದ ಅರ್ಚಕರು ರಕ್ಷಣಾ ಯಂತ್ರ ಕಟ್ಟಿದ ಬಳಿಕವೇ ಜ್ವರ ಕಡಿಮೆಯಾಯಿತಂತೆ.

Read more Photos on
click me!

Recommended Stories