ಬೆಳ್ಳಂಬೆಳಗ್ಗೆ ನಡೆದ ಕೊಪ್ಪಳದ ಗವಿಸಿದ್ದೇಶ್ವರ ರಥೋತ್ಸವ: ರಾಜ್ಯಕ್ಕೆ ಮಾದರಿಯಾದ ‌ಗವಿಮಠ ಶ್ರೀ

First Published | Jan 19, 2022, 8:48 AM IST

ಕೊಪ್ಪಳ(ಜ.19):  ಕೊರೋನಾ(Coronavirus) ಸೋಂಕು ಹರಡದಿರಲು ರಾಜ್ಯ ಸರ್ಕಾರ(Government of Karnataka)ಸಭೆ, ಸಮಾರಂಭ, ಪ್ರತಿಭಟನೆ, ಜಾತ್ರೆ ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ನಿರ್ಬಂಧವನ್ನ ಹೇರಿದೆ. ಹೀಗಾಗಿ ರಾಜ್ಯಾದ್ಯಂತ(Karnataka) ಜಾತ್ರೆಗಳು ರದ್ದಾಗಿದ್ದವು. ಇನ್ನು ದಕ್ಷಿಣ ಭಾರತದ ಕುಂಭಮೇಳ(Kumbh Mela of South India) ಖ್ಯಾತಿಯ ಕೊಪ್ಪಳ ಗವಿಸಿದ್ದೇಶ್ವರ ರಥೋತ್ಸವವನ್ನ(Gavisiddeshwara Fair)  ರದ್ದು ಪಡಿಸಲಾಗಿತ್ತು. ಹೀಗಾಗಿ ಇಂದು(ಬುಧವಾರ) ಬೆಳಗ್ಗೆ 4.30ಕ್ಕೆ ಹಬಬ್ರಾಹ್ಮಿ ಮೂಹರ್ತದಲ್ಲಿ ನಡೆದ ಗವಿಸಿದ್ದೇಶ್ವರ ಜಾತ್ರೆ ನಡೆದಿದೆ. 

ಇಂದು ಸಂಜೆ 5.30ಕ್ಕೆ ರಥೋತ್ಸವ(Fair) ನಡೆಯಬೇಕಿತ್ತು. ಆದರೆ, ಸಂಜೆ ಜಾತ್ರೆ ನಡೆದರೆ ಲಕ್ಷಾಂತರ ಜನರು ಸೇರುವ ಸಾಧ್ಯತೆ ಇರುವುದರಿಂದ ಇಂದು ಬೆಳಿಗ್ಗೆ 4.30ಕ್ಕೆ ಜಾತ್ರೆ ನಡೆದಿದೆ. ಕೊಪ್ಪಳದ‌(Koppal) ಗವಿಸಿದ್ದೇಶ್ವರ ರಥೋತ್ಸವ ಅತ್ಯಂತ‌ ಸರಳವಾಗಿ ನಡೆದಿದೆ.

ಪ್ರತಿ ವರ್ಷ ನಡೆಯುವ ಗವಿಸಿದ್ದೇಶ್ವರ ರಥೋತ್ಸವದಂದು ಸುಮಾರು 5 ಲಕ್ಷ ಜನರು ಸೇರುತ್ತಿದ್ದರು. ಜಿಲ್ಲಾಡಳಿತ(District Administration) ನಿರ್ಬಂಧದ ಹಿನ್ನೆಲೆಯಲ್ಲಿ ಜಾತ್ರೆಯ ಎಲ್ಲ ಕಾರ್ಯಕ್ರಮಗಳನ್ನ ಗವಿಮಠ ರದ್ದು ಮಾಡಿತ್ತು. ಸಾಂಪ್ರದಾಯಿಕ ಮತ್ತು ಧಾರ್ಮಿಕ ಕಾರ್ಯಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

Latest Videos


ಇಂದು ಬೆಳ್ಳಂಬೆಳಿಗ್ಗೆ ನಡೆದ ರಥೋತ್ಸವದಲ್ಲಿ ಕೆಲವೇ ಭಕ್ತರು(Devotees) ರಥ ಎಳೆದಿದ್ದಾರೆ. ಕೊನೆ ಕ್ಷಣದ ವರೆಗೂ ರಥೋತ್ಸವದ ಸಮಯದ ಬಗ್ಗೆ ಗವಿಮಠ(Gavimatha) ಯಾವುದೇ ಮಾಹಿತಿ ನೀಡಿರಲಿಲ್ಲ. 

ರಥೋತ್ಸವದಂದು ಲಕ್ಷಾಂತರ ಭಕ್ತರು ಭಾಗವಹಿಸುವ ಹಿನ್ನೆಲೆಯಲ್ಲಿ ಗವಿಮಠ ಯಾವುದೇ ಮಾಹಿತಿ ನೀಡಿರಲಿಲ್ಲ. ಆದಾಗ್ಯೂ ರಥೋತ್ಸವದಲ್ಲಿ ಸಾವಿರಾರು ಜನ ಭಾಗಿಯಾಗಿದ್ದಾರೆ.

ರಥೋತ್ಸವದಂದು ಲಕ್ಷಾಂತರ ಭಕ್ತರು ಸೇರುವದನ್ನ ತಡೆಯುವ ಮೂಲಕ ಕೊಪ್ಪಳದ ‌ಗವಿಸಿದ್ದೇಶ್ವರ ಸ್ವಾಮೀಜಿ(Gavisiddeshwara Swamiji) ಅವರು ಇಡೀ ರಾಜ್ಯಕ್ಕೆ ಮಾದರಿಯಾಗಿದ್ದಾರೆ.  

click me!