ಮಂಗಳವಾರ ನಗರದ ವಸಂತ ನಗರ ವಾರ್ಡ್ ವ್ಯಾಪ್ತಿಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿರುವ ಫಿಜಿಕಲ್ ಟ್ರಯಾಜ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಗೌರವ್ ಗುಪ್ತಾ
ಸೋಂಕಿತರಾಗಿದ್ದು ಯಾವುದೇ ರೋಗ ಲಕ್ಷಣಗಳು ಇಲ್ಲದವರಿಗೆ ಮನೆಯಲ್ಲೇ ಐಸೋಲೇಟ್ ಆಗುವಂತೆ ತಿಳಿಸಿ ಐಸೋಲೇಷನ್ ಕಿಟ್ ಕೊಡಿ. ಮನೆಯಲ್ಲಿ ಐಸೋಲೇಟ್ ಆಗಲು ಸ್ಥಳಾವಕಾಶ ಇಲ್ಲದಿದ್ದರೆ ಕೋವಿಡ್ ಆರೈಕೆ ಕೇಂದ್ರಗಳಿಗೆ(Covid Care Center) ಕಳುಹಿಸಿಕೊಡಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಪರೀಕ್ಷೆ(Covid Test) ಮಾಡುವ, ಸಂಚಾರಿ ಕೋವಿಡ್ ಪರೀಕ್ಷಾ ತಂಡ, ಲಸಿಕೆ(Vaccine) ಸೇರಿದಂತೆ ಇನ್ನಿತರ ವ್ಯವಸ್ಥೆಗಳ ಬಗ್ಗೆ ಸರಿಯಾಗಿ ಮೇಲ್ವಿಚಾರಣೆ ಮಾಡಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಸಿಬ್ಬಂದಿಯೊಬ್ಬರು, ಶಿವಾಜಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಸೋಮವಾರ 118 ಕೋವಿಡ್ ಸೋಂಕು ಪ್ರಕರಣಗಳು ಕಂಡು ಬಂದಿದ್ದು, ಎಲ್ಲರಿಗೂ ಟೆಲಿ ಟ್ರಯಾಜಿಂಗ್ ಮಾಡಲಾಗಿದೆ. ಅವರಲ್ಲಿ 10 ಕೋವಿಡ್ ಮಂದಿ ಸೋಂಕಿತರು ಮುಂಚಿತವಾಗಿಯೇ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನು 43 ಕೋವಿಡ್(Covid19) ಸೋಂಕಿತರಿಗೆ ಭೌತಿಕ ಟ್ರಯಾಜಿಂಗ್ ಮಾಡಲಾಗಿದ್ದು, ಆರೋಗ್ಯ ಪರಿಸ್ಥಿತಿ ನೋಡಿಕೊಂಡು ಆಸ್ಪತ್ರೆಯಲ್ಲಿ ದಾಖಲಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ವಲಯ ಜಂಟಿ ಆಯುಕ್ತ ಶಿಲ್ಪಾ, ವಲಯ ಆರೋಗ್ಯಾಧಿಕಾರಿ ಡಾ. ಸಿದ್ದಪ್ಪಾಜಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.