ಗಂಗಾವತಿ: ಟಿಕ್‌ಟಾಕ್‌ನಲ್ಲಿ ಗಂಗಮ್ಮಳದ್ದೇ ಹವಾ, ಅಜ್ಜಿ ಡ್ಯಾನ್ಸ್‌ಗೆ ಯುವಕರು ಫಿದಾ..!

First Published | Jun 12, 2020, 11:51 AM IST

ಗಂಗಾವತಿ(ಜೂ.12): ಟಿಕ್‌ಟಾಕ್‌ ಗಂಗಮ್ಮ ಎಂದೇ ಖ್ಯಾತಿಯಾಗಿರುವ ಗಂಗಮ್ಮಳ ನೃತ್ಯ ಗಮನ ಸೆಳೆದಿದೆ. ಮೂಲತಃ ಕಾರಟಿಗಿಯವರಾಗಿರುವ ಗಂಗಮ್ಮಗೆ 55 ವರ್ಷ. ಈ ಮಹಿಳೆ ಸಿನಿಮಾ, ಜಾನಪದ ಮತ್ತು ಭಾವಗೀತೆಗಳ ಹಾಡುಗಳಿಗೆ ನೃತ್ಯ ಮಾಡುತ್ತ ಗಮನ ಸಳೆಯುತ್ತಿದ್ದಾಳೆ. 

ಶ್ರೀ ಚೆನ್ನಬಸವಸ್ವಾಮಿ ಮಠದಲ್ಲಿ ಊಟ ವಸತಿ ವ್ಯವಸ್ಥೆ ಮಾಡಿಕೊಂಡು, ಕೈಯಲ್ಲಿ ಗಡಿಯಾರ ತಲೆಗೆ ಹೂ, ಕೈತುಂಬ ಬಳೆ ಹಾಕಿಕೊಂಡು ರಸ್ತೆ ಅಲ್ಲದೇ ವಿವಿಧ ವೃತ್ತಗಳಲ್ಲಿ ಡ್ಯಾನ್ಸ್‌ ಮಾಡುವ ಗಂಗಮ್ಮ
ಗಂಗಾವತಿ ನಗರದ ಎಪಿಎಂಸಿ ರಸ್ತೆಯ ಮಾರ್ಗದಲ್ಲಿ ಯುವಕರ ಮೊಬೈಲ್‌ಗಳಿದ ಹಾಡುಗಳನ್ನು ಹಾಕಿಸಿಕೊಂಡು ಭರ್ಜರಿ ಡ್ಯಾನ್ಸ್‌ ಮಾಡಿದ ಅಜ್ಜಿ
Tap to resize

ಮಹಿಳೆಯ ಡ್ಯಾನ್ಸಿಗೆ ಬಹಳಷ್ಟು ಯುವಕರು ಕುಣಿದಾಡಿದ್ದಲ್ಲದೆ ಟಿಕ್‌ಟಾಕ್‌ ಮಾಡಿ ಗಮನ ಸೆಳೆದಿದ್ದಾರೆ
ಕಳೆದ ನಾಲ್ಕು ತಿಂಗಳಿನಿಂದ ನೃತ್ಯ ಮಾಡುತ್ತ ಊರೂರು ತಿರುಗಾಡುವ ಗಂಗಮ್ಮ ತನಗೆ ಟಿವಿ ಮತ್ತು ಸಿನಿಮಾದಲ್ಲಿ ನಟಿಸುವ ಆಸೆ ಇದೆ ಎಂದು ಹೇಳಿದ್ದಾಳೆ.

Latest Videos

click me!