ಟ್ರೈಯಾಂಗಲ್ ಲವ್ ಸ್ಟೋರಿಯಲ್ಲಿ ಕಿರಿಕ್ ಪ್ರೇಯಸಿ ಮೇಲೆ ಹಲ್ಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರದಲ್ಲಿ ನಡೆದಿದೆ.ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬಬಿತ್ ಎಂಬ ಹುಡುಗ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ.
ನಾಲ್ಕು ವರ್ಷಗಳ ಪ್ರೀತಿಯ ನಂತರ ಯುವತಿ ಹಾಗೂ ಬಬಿತ್ ನಡುವೆ ಬ್ರೇಕ್ ಅಪ್ ಆಗಿತ್ತು.
ನಂತರ ಯುವತಿ ರಾಹುಲ್ ಎಂಬ ಹುಡುಗನ ಜೊತೆ ಪ್ರೀತಿಯಲ್ಲಿದ್ದಳು
ರಾಹುಲ್ ಮನೆಯಲ್ಲಿ ಯುವತಿ ಇದ್ದಾಗ ಬಬಿತ್ ಎಂಟ್ರಿಕೊಟ್ಟಿದ್ದ
ಈ ಸಮಯದಲ್ಲಿ ಮೂವರ ನಡುವೆ ಗಲಾಟೆ ನಡೆದಿದೆ.ಈ ವೇಳೆ ಯುವತಿ ಮೇಲೆ ಹಲ್ಲೆ ಹಲ್ಲೆ ಮಾಡಲಾಗಿದೆ.
ನಂತರ ಯುವತಿ ಬಬಿತ್ ಮನೆಗೆ ಬಂದ್ದಿದ್ದು, ಈ ವೇಳೆ ಇಲ್ಲಿಯೂ ಹಲ್ಲೆ ಮಾಡಲಾಗಿದೆ. ಸದ್ಯ ಯುವತಿ ಆಸ್ಪತ್ರೆಗೆ ದಾಖಲಾಗಿದ್ದು, ಇಬ್ಬರೂ ಪ್ರಿಯಕರರನ್ನು ಪೊಲೀಸರು ಬಂಧಿಸಿದ್ದಾರೆ. ಸೋಲದೇವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.