ಕೊರೋನಾ ವಿರುದ್ಧ ಹೋರಾಟ: ಆಶಾ ಕಾರ್ಯಕರ್ತೆಯರಿಗೆ ಉಡಿ ತುಂಬಿ ಸನ್ಮಾನ

First Published | May 11, 2020, 1:24 PM IST

ಮುಂಡರಗಿ(ಮೇ.11): ವಿಶ್ವ ತಾಯಂದಿರ ದಿನ ಹಾಗೂ ಹೇಮರಡ್ಡಿ ಮಲ್ಲಮ್ಮನವರ ಜಯಂತಿ ಅಂಗವಾಗಿ ಕೊರೋನಾ ಹಿನ್ನೆಲೆಯಲ್ಲಿ ಮಾಜಿ ಸಚಿವ ಎಸ್‌.ಎಸ್‌. ಪಾಟೀಲ ಅಭಿಮಾನಿಗಳು ಹಾಗೂ ಶಿವಕುಮಾರಗೌಡ ಪಾಟೀಲ ಗೆಳೆಯರ ಬಳಗ ಭಾನುವಾರ ತಾಲೂಕಿನ ಹಾರೋಗೇರಿ ಹಾಗೂ ಸಿಂಗಟಾಲೂರು ಗ್ರಾಮದಲ್ಲಿನ ಆಶಾ ಕಾರ್ಯಕರ್ತೆಯರಿಗೆ ಸನ್ಮಾನಿಸಿ ಉಡಿತುಂಬಿ ತಲಾ ಒಂದು ಸಾವಿರ ರು. ಚೆಕ್‌ ವಿತರಿಸಿತು.

ಕೊರೋನಾದ ವಿರುದ್ಧ ಹಗಲಿರುಳೆನ್ನದೇ ತಮ್ಮ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಗೌರವ ಸಲ್ಲಿಕೆ
ಹೇಮರಡ್ಡಿ ಮಲ್ಲಮ್ಮನ ಜಯಂತಿಯ ಶುಭ ದಿನದಂದು ವಿಶ್ವ ತಾಯಂದಿರ ದಿನದಂದು ಕೊರೋನಾ ವಾರಿಯರ್ಸ್‌ಗೆ ಸನ್ಮಾನ
Tap to resize

ಮುಂಡರಗಿ ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲ ಗ್ರಾಮಗಳಿಗೂ 1.80 ಕೋಟಿ ವೆಚ್ಚದಲ್ಲಿ ಸುಮಾರು 28 ರಿಂದ 30 ಸಾವಿರ ಕುಟುಂಬಗಳಿಗೆ ದಿನಸಿ ಹಾಗೂ ತರಕಾರಿ ಕಿಟ್‌ ವಿತರಣೆ
ಆಶಾ ಕಾರ್ಯಕರ್ತೆಯರು, ವೈದ್ಯರು, ನರ್ಸ್‌ಗಳು, ಪೊಲೀಸ್‌ ಇಲಾಖೆ ಅಧಿಕಾರಿಗಳು, ಪತ್ರಕರ್ತರು ಎಲ್ಲರೂ ಕೃತಜ್ಞತೆ ಸಲ್ಲಿಸುವೆ: ಮಾಜಿ ಸಚಿವ ಎಸ್‌.ಎಸ್‌. ಪಾಟೀಲ
ಸಾನ್ನಿಧ್ಯ ವಹಿಸಿದ್ದ ವಿರುಪಾಪೂರ ಮಠದ ಮುಧುಕೇಶ್ವರ ಶಿವಾಚಾರ್ಯರು

Latest Videos

click me!