ಬಿಸಿ ಬಿಸಿಯಾದ ಮಿರ್ಚಿ ಬಜ್ಜಿ ಮಾಡಿದ ಮಾಜಿ ಶಾಸಕ ರೇಣುಕಾಚಾರ್ಯ

First Published | Nov 12, 2024, 2:54 PM IST

ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರು ಚಿಕ್ಕ ಹೋಟೆಲ್‌ನಲ್ಲಿ ಮಿರ್ಚಿ ಬಜ್ಜಿ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಉಪ ಚುನಾವಣೆಯ ಪ್ರಚಾರದಲ್ಲಿ ಸಕ್ರಿಯರಾಗಿರುವ ಅವರು, ವಿಭಿನ್ನವಾಗಿ ಪ್ರಚಾರ ನಡೆಸುತ್ತಿದ್ದಾರೆ.

ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರು ಚಿಕ್ಕ ಹೋಟಲ್‌ನಲ್ಲಿ ಮಿರ್ಚಿ ಬಜ್ಜಿ ಮಾಡುವ ಫೋಟೋ ಮತ್ತು  ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಬಿಜೆಪಿ ನಾಯಕ, ಮಾಜಿ ಶಾಸಕರಾಗಿರುವ ಎಂ.ಪಿ.ರೇಣುಕಾಚಾರ್ಯ ಅವರು ರಾಜ್ಯದಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಸಕ್ರಿಯರಾಗಿದ್ದು, ತಮ್ಮ ಪಕ್ಷದ ಅಭ್ಯರ್ಥಿ ಪರವಾಗಿ ವಿಭಿನ್ನವಾಗಿ ಪ್ರಚಾರ ನಡೆಸಿದ್ದಾರೆ. ತಮ್ಮ ಪ್ರಚಾರದ ಫೋಟೋ ಮತ್ತು ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಾರೆ.

Tap to resize

ಸಂಡೂರು ತಾಲೂಕಿನ ಕಳಸಿಗೆರೆ ಗ್ರಾಮದ ನಾಗೇಂದ್ರ ಗೌಡ ಅವರ ಹೋಟೆಲ್ ನಲ್ಲಿ ಅವರ ಅಪೇಕ್ಷೆ ಮೇರೆಗೆ  ಮಿರ್ಚಿ ಬಜ್ಜಿ ಮಾಡಿದ್ದಾರೆ. ಈ ವಿಡಿಯೋಗೆ ಫೇಸ್‌ಬುಕ್‌ನಲ್ಲಿ ಒಂದೂವರೆ ಸಾವಿರಕ್ಕೂ ಅಧಿಕ ವ್ಯೂವ್ ಬಂದಿದೆ. ಸಂಡೂರು ತಾಲೂಕಿನ ಬೊಮ್ಮಘಟ್ಟ ಗ್ರಾಮದ ಹೋಟೆಲ್‌ನಲ್ಲಿ ಟೀ ಸಹ ಮಾಡಿದ್ದರು.

2023ರ ವಿಧಾನಸಭಾ ಚುನಾವಣೆಯಲ್ಲಿ ಎಂ.ಪಿ.ರೇಣುಕಾಚಾರ್ಯ ಅವರಿಗೆ ಸೋಲಾಗಿತ್ತು. ನಂತರ ಲೋಕಸಭಾ ಚುನಾವಣೆಗೆ ದಾವಣಗೆರೆ ಕ್ಷೇತ್ರದ ಆಕಾಂಕ್ಷಿಯಾಗಿದ್ದರು. ಆದ್ರೆ ಪಕ್ಷ ಟಿಕೆಟ್ ನೀಡದ ಹಿನ್ನೆಲೆ ಚುನಾವಣೆಯಿಂದ ಹಿಂದೆ ಸರಿದಿದ್ದರು.

ಶಾಸಕರಾಗಿದ್ದ ಸಂದರ್ಭದಲ್ಲಿಯೂ ಎಂ.ಪಿ.ರೇಣುಕಾಚಾರ್ಯ ಹಲವು ವಿಷಯಗಳಿಂದ ಟ್ರೋಲ್ ಆಗಿದ್ದರು. ಒಮ್ಮೆ ತೆಪ್ಪದಲ್ಲಿ ನಿಂತು ಫೋಟೋಗೆ ಪೋಸ್ ನೀಡಿ ಟೀಕೆಗೆ ಗುರಿಯಾಗಿದ್ದರು. ಬಸ್ ಉದ್ಘಾಟನೆ ಸಂದರ್ಭದಲ್ಲಿ ಸರ್ಕಾರಿ ಬಸ್ ಚಾಲನೆ ಮಾಡಿದ್ದರು. 

ಮತ್ತೊಮ್ಮೆ ಹೋರಿ ಬೆದರಿಸುವ ಸ್ಪರ್ಧೆಗೆ ವಿಶೇಷ ಅತಿಥಿಯಾಗಿ ರೇಣುಕಾಚಾರ್ಯ ತೆರಳಿದ್ದರು. ಈ ವೇಳೆ ರೇಣುಕಾಚಾರ್ಯ ಮೇಲೆ ಹೋರಿ ದಾಳಿಗೆ ಯತ್ನಿಸಿತ್ತು. ಕೂದಲೆಳೆ ಅಂತರದಲ್ಲಿ ರೇಣುಕಾಚಾರ್ಯ ಪಾರಾಗಿದ್ದರು. ಹಾಗೆಯೇ ಕೋವಿಡ್ ಸಂದರ್ಭದಲ್ಲಿ ತಮ್ಮ ಕೆಲಸಗಳಿಂದ ಎಲ್ಲರಿಂದಲೂ ಮೆಚ್ಚುಗೆಗೆ ಪಾತ್ರವಾಗಿದ್ದರು.

Latest Videos

click me!