ಮಹಿಳೆಯರ ಜೊತೆ ಸೇರಿ 'ನೀರಿಲ್ಲ ನೀರಿಲ್ಲ' ರೀಲ್ಸ್‌ ಮೂಲಕ ಎಲ್ಲರ ಗಮನ ಸೆಳೆದ ಮಾಜಿ ಮೇಯರ್ ರಾಮ್‌ ಮೋಹನ್‌ ರಾಜ್‌!

First Published | Mar 8, 2024, 3:01 PM IST

ಕರಿಮಣಿ ಮಾಲೀಕ‌ ಸಾಂಗ್ ಟ್ರೆಂಡ್ ಮುಗಿದ್ರು ಆದ್ರ ಹವಾ ಮಾತ್ರ ಕಡಿಮೆಯಾಗಿಲ್ಲ. ಸಿಲಿಕಾನ್ ಸಿಟಿಯಲ್ಲಿ ನೀರಿನ ಸಮಸ್ಯೆ ಹೆಚ್ಚುತ್ತಿದ್ದಂತೆ ಕರಿಮಣಿ ಮಾಲೀಕ ಟ್ಯುನ್ ಗೆ ನೀರಿಲ್ಲ ನೀರಿಲ್ಲ ಸಾಲುಗಳನ್ನ ಬರೆದು ಹಾಡಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. 

ವರದಿ: ವಿದ್ಯಾಶ್ರೀ.ಬಿ.ಎನ್, ಏಷ್ಯಾನೆಟ್ ಸುವರ್ಣನ್ಯೂಸ್

ಬೆಂಗಳೂರು (ಮಾ.08): ಕರಿಮಣಿ ಮಾಲೀಕ‌ ಸಾಂಗ್ ಟ್ರೆಂಡ್ ಮುಗಿದ್ರು ಆದ್ರ ಹವಾ ಮಾತ್ರ ಕಡಿಮೆಯಾಗಿಲ್ಲ. ಸಿಲಿಕಾನ್ ಸಿಟಿಯಲ್ಲಿ ನೀರಿನ ಸಮಸ್ಯೆ ಹೆಚ್ಚುತ್ತಿದ್ದಂತೆ ಕರಿಮಣಿ ಮಾಲೀಕ ಟ್ಯುನ್ ಗೆ ನೀರಿಲ್ಲ ನೀರಿಲ್ಲ ಸಾಲುಗಳನ್ನ ಬರೆದು ಹಾಡಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. 

ಹೌದು ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಮಹಿಳೆಯರು ಎದುರಿಸುತ್ತಿರುವ ನೀರಿನ ಸಮಸ್ಯೆಯ ಬಗ್ಗೆ ಮಾಜಿ ಉಪಮಹಾಪೌರ ಸಿ.ಆರ್.‌ ರಾಮ್‌ ಮೋಹನ್‌ ರಾಜ್‌ 'ನೀರಿಲ್ಲ, ನೀರಿಲ್ಲ' ಎಂದು ರೀಲ್ಸ್ ಮಾಡಿ ನೀರಿನ ಸಮಸ್ಯೆಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

Tap to resize

ಮಹಿಳಾ ದಿನಾಚರಣೆ ಜೊತೆಗೆ ಶಿವರಾತ್ರಿ ಹಬ್ಬದಲ್ಲೂ ನೀರಿಲ್ಲದೇ ಜನ ಪರಿತಪಿಸುತ್ತಿರುವುದನ್ನು ಈ ರೀಲ್ಸ್‌ ನಲ್ಲಿ ತೋರಿಸಲಾಗಿದೆ. ನಗರದಲ್ಲಿ ಕಳೆದ ಏಳು ದಶಕಗಳಲ್ಲಿ ಕಂಡರಿಯದ ನೀರಿನ ಅಭಾವ ಎದುರಾಗಿದೆ. 

ಕುಡಿಯಲು ನೀರಿಲ್ಲ. ಕನಿಷ್ಠ ಪಕ್ಷ ಶೌಚಾಲಯಕ್ಕೂ ನೀರಿಲ್ಲದ ಪರಿಸ್ಥಿತಿ ಎದುರಾಗಿರುವುದನ್ನು ಖಾಲಿ ಕೊಡೆಗಳ ಮೂಲಕ ರೀಲ್ಸ್‌ ಮಾಡಿದ್ದಾರೆ. ಜನಪ್ರತಿಯೊಬ್ಬರು ಮಹಿಳೆಯರ ಜೊತೆಗೂಡಿ ಸಾಮಾಜಿಕ ಅರಿವು ಮೂಡಿಸುವ ಪ್ರಯತ್ನ ನಡೆಸಿರುವುದು ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಗಿದೆ.

Latest Videos

click me!