ಉಪಚುನಾವಣೆ ಮಧ್ಯೆಯೂ ಯಡಿಯೂರಪ್ಪ ಟೆಂಪಲ್ ರನ್..!

Suvarna News   | Asianet News
Published : Oct 24, 2021, 03:56 PM IST

ವಿಜಯನಗರ(ಅ.24): ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆ ಮಧ್ಯೆಯೂ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಟೆಂಪಲ್ ರನ್ ಮಾಡಿದ್ದಾರೆ. ಹೌದು, ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಸುಪ್ರಸಿದ್ಧ ಶ್ರೀ ಗುರು ಬಸವೇಶ್ವರ ದೇವಾಲಯಕ್ಕೆ ಇಂದು(ಭಾನುವಾರ) ಭೇಟಿ ನೀಡಿದ ಯಡಿಯೂರಪ್ಪ ಅವರು ನಾಡಿನ ಎಲ್ಲ ಜನರ ಒಳಿತಿಗಾಗಿ ವಿಶೇಷ ಪೂಜೆ ಮಾಡಿಸಿ ಪ್ರಾರ್ಥನೆಗಳನ್ನು ಸಲ್ಲಿಸಿದ್ದಾರೆ. 

PREV
15
ಉಪಚುನಾವಣೆ ಮಧ್ಯೆಯೂ ಯಡಿಯೂರಪ್ಪ ಟೆಂಪಲ್ ರನ್..!

ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದ ಸುಪ್ರಸಿದ್ಧ ಕೊಟ್ಟೂರೇಶ್ವರನ ದರ್ಶನ ಪಡೆದ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ 

25

ಖಾಸಗಿ ಕಾರ್ಯಕ್ರಮದ ನಿಮಿತ್ತ  ಕೊಟ್ಟೂರು ಪಟ್ಟಣಕ್ಕೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬಿ.ವೈ. ವಿಜಯೇಂದ್ರ 

35

ಬಿ.ವೈ.ವಿಜಯೇಂದ್ರ ಆಪ್ತರ ಮನೆಯಲ್ಲಿದ್ದ ಮದುವೆ ಕಾರ್ಯಕ್ರಮಕ್ಕೆ ಯಡಿಯೂರಪ್ಪ ಹಾಗೂ ವಿಜಯೇಂದ್ರ ಆಗಮಿಸಿದ್ದರು ಎಂದು ತಿಳಿದು ಬಂದಿದೆ. 

45

ವಿಜಯಪುರ ಜಿಲ್ಲೆಯ ಸಿಂದಗಿ ಹಾಗೂ ಹಾವೇರಿ ಜಿಲ್ಲೆಯ ಹಾನಗಲ್ ಉಪಸಮಯರದ ನಡುವೆಯೂ ಬಿಡುವು ಮಾಡಿಕೊಂಡು ಕೊಟ್ಟೂರು ಪಟ್ಟಣಕ್ಕೆ ಆಗಮಿಸಿ ನವದಂಪತಿಗೆ ಆಶೀರ್ವದಿಸಿದ ಯಡಿಯೂರಪ್ಪ ಹಾಗೂ  ವಿಜಯೇಂದ್ರ

55

ಕೊಟ್ಟೂರು ತಾಲೂಕಿನ ಸುಪ್ರಸಿದ್ಧ ಶ್ರೀ ಗುರು ಬಸವೇಶ್ವರ ದೇವಾಲಯಕ್ಕೆ ಭೇಟಿ ನೀಡಿ, ನಾಡಿನ ಎಲ್ಲ ಜನರ ಒಳಿತಿಗಾಗಿ ವಿಶೇಷ ಪೂಜೆ, ಪ್ರಾರ್ಥನೆಗಳನ್ನು ಸಲ್ಲಿಸಿದ ಯಡಿಯೂರಪ್ಪ 

click me!

Recommended Stories