ಕಲಬುರಗಿ: ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಆಸ್ಪತ್ರೆ ಮುಂದೆ ಹುಟ್ಟುಹಬ್ಬ, 50 ಜನರ ವಿರುದ್ಧ FIR

First Published | Jun 2, 2021, 9:49 AM IST

ಕಲಬುರಗಿ(ಜೂ.02): ಆಸ್ಪತ್ರೆ ಮುಂದೆ ಹುಟ್ಟುಹಬ್ಬ ಆಚರಿಸಿಕೊಂಡ ಸಮಾಜ ಸೇವಕನ ವಿರುದ್ಧ ಎಫ್‌ಐಅರ್‌ ದಾಖಲಾಗಿದೆ. ಉಚಿತ ಆಂಬುಲೆನ್ಸ್‌ ಸೇವೆ ನೀಡುವ ನೆಪದಲ್ಲಿ ಆಸ್ಪತ್ರೆ ಮುಂದೆ ಹುಟ್ಟುಹಬ್ಬ ಆಚರಿಸಿಕೊಂಡ ಅಫಜಲಪುರದ ಸಮಾಜ ಸೇವಕ ಜೆ.ಎಂ.ಕೊರಬು ಹಾಗೂ ಇತರೆ 50 ಜನರ ವಿರುದ್ಧ ದೂರು ದಾಖಲಿಸಲಾಗಿದೆ.

ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಸರ್ಕಾರಿ ಆಸ್ಪತ್ರೆ ಮುಂದೆ ಹುಟ್ಟುಹಬ್ಬ ಆಚರಣೆ
ಕಲಬುರಗಿ ಜಿಲ್ಲೆಯ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್
Tap to resize

ಕಳೆದ ಮೇ. 31 ರಂದು ಅಫಜಲಪುರ ತಾಲೂಕಾ ಆಸ್ಪತ್ರೆ ಮುಂದೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಜೆ.ಎಂ. ಕೊರಬು
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹಲವು ಮಠಾಧೀಶರು, ಅಧಿಕಾರಿಗಳು, ರಾಜಕೀಯ ಮುಖಂಡರು
ಉಚಿತ ಆಂಬುಲೆನ್ಸ್‌ ಸೇವೆ ನೆಪದಲ್ಲಿ ಆಸ್ಪತ್ರೆ ಮುಂದೆ ಕಾರ್ಯಕ್ರಮ ಆಯೋಜನೆ
ತಾಲೂಕು ಆಡಳಿತದ ಅನುಮತಿ ಪಡೆಯದೇ ಕಾರ್ಯಕ್ರಮ ಆಯೋಜನೆ ಹಿನ್ನಲೆ ದೂರು ದಾಖಲು

Latest Videos

click me!