ಕಾರ್ಮಿಕರ ಅಭಾವಕ್ಕೆ ಎದೆಗುಂದದ ಅನ್ನದಾತ: ರೈತನ ಹೊಸ ಐಡಿಯಾಗೆ ಮಾರು ಹೋದ ಜನ..!

First Published | Oct 8, 2020, 1:07 PM IST

ರೋಣ(ಅ.08): ಕೂಲಿ ಆಳು (ಕಾರ್ಮಿಕರು)ಗಳ ಅಭಾವಕ್ಕೆ ಎದೆಗುಂದದೇ  ತಾಲೂಕಿನ ಹುನಗುಂಡಿ ಗ್ರಾಮದ ರೈತ ಯಲ್ಲಪ್ಪ ಕುರಿ ತನ್ನ ಬೈಕ್ ಮೂಲಕ ಈರುಳ್ಳಿ ಮತ್ತು ಮೆಣಸಿನ ಬೆಳೆ ಮಧ್ಯೆ ಜೋಳ ಬೀಜ ಬಿತ್ತನೆಗೆ ಮುಂದಾಗಿ ಯಶಸ್ಸು ಕಂಡಿದ್ದಾನೆ. ಇದರಿಂದ ಸಮಯ ಮತ್ತು ಹಣ ಉಳಿತಾಯ ಮಾಡಿದ್ದಾನೆ.

ಈಗಾಗಲೇ ಈರುಳ್ಳಿ ಮತ್ತು ಮೆಣಸಿನ ಬೆಳೆ ಬೆಳೆಯಲಾಗಿದ್ದು, ಈ ಬೆಳೆಗಳ ಮಧ್ಯೆ ಮಿಶ್ರ ಬೆಳೆಯಾಗಿ ಜೋಳ ಬೆಳೆಯಲಾಗುತ್ತದೆ. ಆದರೆ ಬೆಳೆಯಲ್ಲಿಯೇ ಎತ್ತು ಅಥವಾ ಟ್ರ್ಯಾಕ್ಟರ್ ಬಳಸಿ ಬಿತ್ತನೆ ಮಾಡಲು ಬರುವದಿಲ್ಲ. ಕೇವಲ ಕೂಲಿ ಆಳುಗಳ ಮೂಲಕ ಬೀಜ ಊರಿಸಿ (ನಾಟಿ) ಬೇಕು. ಹೀಗೆ ಬೀಜ ಊರಿಸಲು ಒಂದು ಎಕರೆಗೆ ಕನಿಷ್ಟ 5 ಆಳುಗಳು 2 ದಿನ ಶ್ರಮಿಸಬೇಕು. ಇದಲ್ಲದೇ ಎತ್ತಿನಂತೆ ಹೆಗಲಿಗೆ ನೊಗ ಹೊತ್ತು ಮನುಷ್ಯರೇ ಎಳೆ ಗುಂಟೆ ಎಳೆಯುತ್ತಾ ಬಿತ್ತನೆಯನ್ನು ಮಾಡಬೇಕು. ಆದರೆ ಹೀಗೆ ಎಳೆಯುವಾಗ ಹೆಗಲು ಮತ್ತು ಹೊಟ್ಟೆಗೆ ಆಯಾಸ ಮತ್ತು ಶ್ರಮ ಹೆಚ್ಚಾಗುತ್ತದೆ.
undefined
ಈ ಕಾರಣದಿಂದಲೇ ಎಳೆಗುಂಟೆ ಎಳೆಯಲು ಯಾರು ಮುಂದೆ ಬರುತ್ತಿಲ್ಲ. ಅಲ್ಲದೇ ಕಳೆದ 15 ದಿನಗಳಿಂದ ನಿರಂತರ ಸುರಿದ ಮಳೆಯಿಂದಾಗಿ ಬಿತ್ತನೆ ಅವಧಿ ಮುಗಿಯುತ್ತಾ ಬರುತ್ತಿದ್ದು, ಇದರಿಂದ ಚಿಂತಾಕ್ರಾಂತನಾದ ರೈತ ಯಲ್ಲಪ್ಪ ಕುರಿ, ತನ್ನ ಪತ್ನಿ ನೀಲಮ್ಮ, ಮಗ ಬಸವರಾಜನೊಂದಿಗೆ ಬೈಕ್ ಮೂಲಕ ಜೋಳ ಬಿತ್ತನೆಗೆ ಪ್ಲ್ಯಾನ್ ಮಾಡಿಕೊಂಡು ಯಸಸ್ಸು ಕಂಡಿದ್ದಾನೆ.
undefined

Latest Videos


ಎಕರೆ ಒಂದಕ್ಕೆ ಬಿತ್ತಣೆಗೆ ಕನಿಷ್ಟ 10 ಕೂಲಿ ಆಳುಗಳು ಬೇಕಾಗುತ್ತವೆ. ಒಂದು ಆಳಿಗೆ 150 ರು.ಗಳಂತೆ ಒಟ್ಟು 1500 ರು.ಗಳ ಖರ್ಚಾಗುತ್ತೆ. ಆದರೆ ಬೈಕ್ ಮೂಲಕ ಕೆವಲ 3 ಜನ ಕೆವಲ 1 ತಾಸಿನಲ್ಲಿ ಒಂದು ಎಕರೆ ಯಾವುದೇ ಪ್ರಯಾಸವಿಲ್ಲದೆ ಬಿತ್ತನೆ ಮಾಡಬಹುದು. ಕೇವಲ ಒಂದು ಲಿಟರ್ ಪೆಟ್ರೋಲ್‌ (75 ರು.ಗಳು) ಮಾತ್ರ ಖರ್ಚಾಗುತ್ತದೆ. ಬೈಕ್ ಗೆ ಎಳೆಗುಂಟಿ ಕಂಟಿ ಒಬ್ಬರು ಬಿತ್ತುತ್ತಾರೆ, ಅದರ ಹಿಂದೆ ಒಬ್ಬರು ಬೆಳೆಸಾಲು ಹೊಡೆಯುತ್ತಾರೆ. ಇದೆಲ್ಲವನ್ನು ಬೈಕ ಮೂಲಕ ಮಾಡಿ ಮೂಗಿಸುತ್ತಾರೆ. ಈ ರೀತಿ ಬಿತ್ತಣೆಗೆ ಮುಂದಾದ ರೈತ ಯಲ್ಲಪ್ಪ ಕುರಿ ಪ್ಲ್ಯಾನ್‌ಗೆ ರೈತ ಫಿಧಾ ಆಗಿದ್ದು, ನಾವು ಈ ರೀತಿ ಪ್ರಯೋಗ ಮಾಡಿದರಾಯ್ತು, ಸಮಯವು ಉಳಿಯುತ್ತೆ, ಆಳಿನ ಸಮಸ್ಯೆಯು ಇರಲ್ಲ ಎನ್ನುತ್ತಿದ್ದಾರೆ.
undefined
ಈ ಹಿಂದೆ ಉಳ್ಳಾಗಡ್ಡಿ (ಈರುಳ್ಳಿ) ಮಥು ಮೆಣಸಿನ ಬೆಳೆ ಮಧ್ಯೆ ಜೋಳವನ್ನು ಮಿಶ್ರ ಬೆಳೆಯನ್ನಾಗಿ ಬೆಳೆಯಲು ಮನಷ್ಯರೆ ಎಳೆಗುಂಟೆ ಎಳೆಯುತ್ತಾ ಬಿತ್ತಲಾಗುತ್ತಿತ್ತು. ಇದು ಭಾಳ್‌ ತ್ರಾಸ್ ಮತ್ತು ಸಮಯ ಹಿಡಿಯುತ್ತಿತ್ತು. ಅಲ್ಲದೇ ಈಗ ಈ ರೀತ ಎಳೆಗುಂಟೆ ಎಳೆದು ಬಿತ್ತಣೆ ಮಾಡಲು ಕೂಲಿ ಆಳುಗಳು ಸಿಗುತ್ತಿಲ್ಲ. ಆದ್ದರಿಂದ ಬೈಕ್ ಮೂಲಕ ಜೋಳ ಬಿತ್ತಣೆಗೆ ಮುಂದಾಗಿದ್ದೇನೆ. ಈಗಾಗಲೇ ಒಟ್ಟು 4 ಎಕರೆ ಬೈಕ್‌ ಮೂಲಕ ಮಿಶ್ರ ಬೆಳೆಯಾಗಿ ಜೋಳ ಬಿತ್ತಲಾಗಿದೆ. ಇದರಿಂದ ನಮಗೆ ಬಹಳ ಅನುಕೂಲವಾಗಿದೆ. ಸಮಯವು ಉಳಿದಿದೆ, ಹಣವೂ ಉಳಿದಿದೆ ಎಂದು ರೋಣ ತಾಲೂಕಿನ ಹುನಗುಂಡಿ ಗ್ರಾದ ರೈತ ಯಲ್ಲಪ್ಪ ಕುರಿ ಅವರು ತಿಳಿಸಿದ್ದಾರೆ.
undefined
click me!