ಕೊರೋನಾ ವಾರಿಯರ್‌ಗಳು ಸೋಂಕಿಗೆ ತುತ್ತಾಗುವುದನ್ನು ತಪ್ಪಿಸಲು ಕೆಎಲ್‌ವಿ ವಿದ್ಯಾರ್ಥಿಗಳು ನಿರ್ಮಿಸಿದ ರೊಬೋಟಿಕ್ ವೆಹಿಕಲ್‌ಗೆ ಬೃಹತ್ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಚಾಲನೆ ನೀಡಿದ್ದಾರೆ.
undefined
ಬುಧವಾರ ಕಿಮ್ಸ್‌ಗೆ ಅರ್ಪಿಸಿ ಮಾತನಾಡಿದ ಸಚಿವರು, ವಿದ್ಯಾರ್ಥಿಗಳ ಸಾಧನೆ ಶ್ಲಾಘನೀಯ. ಇದರಿಂದ ವೈದ್ಯರು ನೇರವಾಗಿ ರೋಗಿಗಳ ಸಂಪರ್ಕಕ್ಕೆ ಬರುವ ಸಂದರ್ಭ ಕಡಿಮೆಯಾಗಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
undefined
ಆಟೋಮೆಟಿಕ್ ಗೈಡೆಡ್ ವೆಹಿಕಲ್ (ಎಜಿವಿ) ವಾರ್ಡ್‌ನಲ್ಲಿ ಸ್ವಯಂ ಚಾಲಿತವಾಗಿ ಕೋವಿಡ್ ವಾರ್ಡ್‌ಗೆ ತೆರಳಿ ಆಹಾರ, ಹಣ್ಣು, ಔಷಧ ಪೂರೈಸುತ್ತದೆ. ‘ಪ್ರಧಾಯ’ ಎಂದು ಹೆಸರಿಡಲಾಗಿದೆ.
undefined
ಒಮ್ಮೆ ಚಾರ್ಜ್ ಮಾಡಿದರೆ ಇಡೀ ದಿನ ಕಾರ್ಯನಿರ್ವಹಣೆ ಮಾಡಬಲ್ಲದು. ಇದರಿಂದ ಸಿಬ್ಬಂದಿಯೆ ನೇರವಾಗಿ ವಾರ್ಡ್‌ಗೆ ತೆರಳಿ ಔಷಧ ಮತ್ತಿತರ ವಸ್ತುವನ್ನು ನೀಡುವ ಅಗತ್ಯ ಇರುವುದಿಲ್ಲ.
undefined