ಬೀದರ್‌ ಜಿಲ್ಲೆಯಲ್ಲಿ 1 ಲಕ್ಷ ಹೆಕ್ಟೇರ್‌ ಬೆಳೆ ಹಾನಿ: 100 ಕೋಟಿ ಪರಿಹಾರ ಬಿಡುಗಡೆಗೊಳಿಸಿ, ಖಂಡ್ರೆ

First Published | Sep 21, 2020, 12:28 PM IST

ಬೀದರ್‌(ಸೆ.21): ಮಹಾಮಳೆಯಿಂದ ಜಿಲ್ಲೆಯಲ್ಲಿ ಸುಮಾರು 1ಲಕ್ಷ ಹೆಕ್ಟೇರ್‌ ಬೆಳೆ ಹಾನಿಯಾಗಿದ್ದು, ಇನ್ನಷ್ಟುಹೆಚ್ಚಾಗುವ ಸಾಧ್ಯತೆ ಇದೆ. ರಸ್ತೆ, ಸೇತುವೆಗಳು ಹಾಳಾಗಿವೆ, ಮನೆಗಳು ಕುಸಿದಿವೆ. ಪ್ರವಾಹ ಪರಿಸ್ಥಿತಿಯನ್ನು ಸಮಾರೋಪಾದಿಯಲ್ಲಿ ನಿರ್ವಹಿಸಲು ಜಿಲ್ಲೆಗೆ ತಕ್ಷಣ 100 ಕೋಟಿ ರು.ಗಳನ್ನು ಸರ್ಕಾರ ಬಿಡುಗಡೆ ಮಾಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಆಗ್ರಹಿಸಿದ್ದಾರೆ.
 

ಭಾಲ್ಕಿ ತಾಲೂಕಿನ ಬ್ಯಾಲಹಳ್ಳಿ(ಕೆ) ಗ್ರಾಮದ ಹೊರ ವಲಯದಲ್ಲಿನ ಕಾರಂಜಾ ಜಲಾಶಯ ಹಾಗೂ ಸುತ್ತಮುತ್ತಲಿನ ಹಲಗದ್ದೆಗಳಿಗೆ ಭೇಟಿ ನೀಡಿದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿ, ಸೋಯಾಬಿನ್‌, ಉದ್ದು, ತೊಗರಿ ಬೆಳೆ ಹಾಗೂ ತೋಟಗಾರಿಕೆ ಬೆಳೆಗಳು ಹಾನಿಗೀಡಾಗಿವೆ. ಪ್ರತಿ ಏಕರೆಗೆ ಕನಿಷ್ಟ25 ಸಾವಿರ ರು. ಪರಿಹಾರ ನೀಡುವಂತೆ ವಿಧಾನ ಸಭೆಯಲ್ಲಿ ಪ್ರಸ್ತಾಪಿಸುವುದಾಗಿ ಭರವಸೆ ನೀಡಿದರು.
undefined
ಜಿಲ್ಲೆಯ ರೈತರ ಜೀವನಾಡಿಯಾದ ಈ ಜಲಾಶಯಕ್ಕೆ ಇದುವರೆಗೂ 4 ಟಿಎಂಸಿ ನೀರು ಸಂಗ್ರಹವಾಗಿದ್ದು, ಒಳ ಹರಿವು ಹೆಚ್ಚಿರುವ ಹಿನ್ನೆಲೆಯಲ್ಲಿ, ಮುಂದಿನ ಕೆಲ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಜಲಾಶಯ ತುಂಬುವ ಸಾಧ್ಯತೆ ಇದೆ. ಇದರಿಂದ ಜಿಲ್ಲೆಯಲ್ಲಿನ ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಯಲಿದೆ ಎಂದರು.
undefined

Latest Videos


ನಾನು ಮಂತ್ರಿಯಾಗಿದ್ದ ಸಂದರ್ಭದಲ್ಲಿ ಅತಿವಾಳ ಹಾಗೂ ಕಾರಂಜಾ ಏತ ನೀರಾವರಿ ಯೋಜನೆ, 131ಕಿ.ಮೀ ಬಲದಂಡೆ, 31 ಕಿಮೀ ಎಡದಂಡೆ ಕಾಲುವೆ ಆಧುನೀಕರಣಕ್ಕೆ ಯೋಜನೆ ರೂಪಿಸಿ ಅನುದಾನ ಬಿಡುಗಡೆಗೊಳಿಸಿದ್ದೇನೆ. ಇದೀಗ ಸಿಸಿ ಲೈನಿಂಗ್‌ ಕಾಮಗಾರಿ ಪೂರ್ಣಗೊಂಡಿದ್ದು, ತಾಲೂಕಿನ 29 ಸಾವಿರ ಹೇಕ್ಟೆರ್‌ ಭೂಮಿ ನೀರುಣಲಿದ್ದು, ರೈತರಿಗೆ ವರದಾನ ಆಗಲಿದೆ. ಕೃಷ್ಣಾ ಕಣಿವೆಯಿಂದ ಪ್ರತಿ ವರ್ಷ ಕಾರಂಜಾ ತುಂಬಿಸುವ ಯೋಜನೆ ಅನುಷ್ಟಾನ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡುತ್ತೇನೆ ಎಂದು ಭರವಸೆ ನೀಡಿದರು.
undefined
ಈ ಸಂದರ್ಭದಲ್ಲಿ ಜಿಲ್ಲಾಧಿ​ಕಾರಿ ರಾಮಚಂದ್ರನ್‌, ಬಸವಕಲ್ಯಾಣ ಸಹಾಯಕ ಆಯುಕ್ತ ಭುವನೇಶ ಪಾಟೀಲ್‌, ತಹಸೀಲ್ದಾರ ಅಣ್ಣರಾವ ಪಾಟೀಲ್‌, ಉಪ ತಹಸೀಲ್ದಾರ ದೀಲರಾಜ ಪಸರಗಿ, ರಾಜಶೇಖರ ಪಾಟೀಲ್‌, ಶಶಿಧರ ಕೋಸಂಬೆ, ಸಂಗಮೇಶ ಹುಣಜೆ, ಸತೀಶ ದೇಶೆಟ್ಟೆ, ಶಿವಕುಮಾರ ಸದಾಶಿವ, ವಿಜಯಕುಮಾರ ಬಾಯಪ್ಪ ಇದ್ದರು.
undefined
click me!