ರಾಜ್ಯದಲ್ಲಿ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿದ್ದು, ಗೃಹಲಕ್ಷ್ಮಿ ಯೋಜನೆಯ 2000 ರೂಪಾಯಿ ಮೊತ್ತವನ್ನು ಹೆಚ್ಚಿಸುವ ಕುರಿತು ಚರ್ಚೆಗಳು ಎದ್ದಿವೆ. ಈ ಕುರಿತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಕೇಳಿದ ಪ್ರಶ್ನೆಗೆ ಅವರು ಹೇಳಿದ್ದೇನು?
ಈಗ ಎಲ್ಲೆಲ್ಲೂ ಬೆಲೆ ಏರಿಕೆಯ ಬಿಸಿ. ಪಶ್ಚಿಮ ಏಷ್ಯಾದ ಸಂಘರ್ಷದಿಂದ ಜಗತ್ತಿನಾದ್ಯಂತ ಎಲ್ಲಾ ಬೆಲೆಗಳು ಏರಿಕೆ ಆಗಿರುವ ಕಾರಣ, ಜನಸಾಮಾನ್ಯರು ಬದುಕುವುದೇ ದುಸ್ತರ ಎನ್ನುವಂಥ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯದಲ್ಲಿ 200 ಯೂನಿಟ್ವರೆಗೆ ಉಚಿತ ಕರೆಂಟ್ ನೀಡಿದ್ರೂ, ವಾಣಿಜ್ಯ ಬಳಕೆಯ ಕರೆಂಟ್ ಮೊತ್ತ ಎರಡು ಪಟ್ಟಿಗಿಂತ ಹೆಚ್ಚಾಗಿರುವ ಕಾರಣ, ಸಣ್ಣ-ಪುಟ್ಟ ಅಂಗಡಿ ಇಟ್ಟುಕೊಂಡವರ ಸ್ಥಿತಿ ಅಯೋಮಯವಾಗಿದೆ. ಅದೇ ರೀತಿ ನೀರಿನ ಬಿಲ್ ಕೂಡ ದುಪ್ಪಟ್ಟಾಗಿದೆ.
25
ಗೃಹಲಕ್ಷ್ಮಿ ಹೋಗ್ತಿರೋದು ಯಾರಿಗೆ?
ಗೃಹಲಕ್ಷ್ಮಿ ಹಣ ಒಂದಷ್ಟು ಮಂದಿಗೆ ಹೋಗುತ್ತಿದೆ. ಬಡವರಿಗಾಗಿ ಸರ್ಕಾರ ಮಾಡಿರುವ ಈ ಗ್ಯಾರೆಂಟಿ ಯೋಜನೆಯ ಫಲ ಪಡೆಯುತ್ತಿರುವ ಮತ್ತೊಂದಷ್ಟು ವರ್ಗವೇ ಇದೆ. ಮೂರ್ನಾಲ್ಕು ಮನೆಗಳಿಂದ ಬಾಡಿಗೆ ಪಡೆಯುತ್ತಿರುವ ಮನೆ ಮಾಲೀಕರೂ ಇದರ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ ಅನ್ನಿ. ಆದರೆ ಕಡಿಮೆ ಆದಾಯದಿಂದ ದಿನ ನೂಕುತ್ತಿರುವ ಎಷ್ಟೋ ಮಂದಿಗೆ ಇದು ಸಿಗದೇ ಇರುವ ಸ್ಥಿತಿ ಇದೆ. ಒಟ್ಟಿನಲ್ಲಿ ಈಗ ಕೊಡುತ್ತಿರುವ ಎರಡು ಸಾವಿರ ಮೊತ್ತ ಸಿಗದೇ ಇರುವವರು ಎಲ್ಲಾ ಬಿಲ್ ಹೆಚ್ಚಾಗಿರುವ ಕಾರಣ ಪಡಬಾರದ ಕಷ್ಟ ಪಡುತ್ತಿದ್ದಾರೆ.
35
2000 ರೂಪಾಯಿ ಏರಿಕೆ ಆಗತ್ತಾ?
ಇದರ ನಡುವೆಯೇ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ 2000 ರೂಪಾಯಿಯನ್ನು ಏರಿಸುವಿರಾ ಎನ್ನುವ ಪ್ರಶ್ನೆ ಎದುರಾಗಿದೆ. ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದ ವೇಳೆ, ಭಾಗ್ಯಲಕ್ಷ್ಮಿ ಯೋಜನೆಯನ್ನು ಜನಸಾಮಾನ್ಯರಿಗೆ ಅನುಕೂಲ ಆಗಲಿ ಎನ್ನುವ ನಿಟ್ಟಿನಲ್ಲಿ ಜಾರಿಗೊಳಿಸಲಾಗಿತ್ತು. ಆದರೆ ಇದೀಗ ಬೆಲೆ ಏರಿಕೆ ಆಗಿರುವ ಕಾರಣ, ಮುಂದಿನ ದಿನಗಳಲ್ಲಿ ಅದನ್ನು ಏರಿಸುವಿರಾ ಎಂದು ಪ್ರಶ್ನಿಸಲಾಗಿದೆ.
ಅದಕ್ಕೆ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಯುದ್ಧದಿಂದಾಗಿ ಎಲ್ಲಾ ಬೆಲೆಗಳು ಏರಿಕೆ ಆಗುತ್ತಿರುವುದು ಸಹಜವಾಗಿದೆ. ಎಲ್ಲೆಡೆ ಆರ್ಥಿಕ ಬಿಕ್ಕಟ್ಟು ಇದೆ. ರಾಜ್ಯದಲ್ಲಿಯೂ ಈ ಸಮಸ್ಯೆ ಇದೆ. ಆದರೆ ಸದ್ಯ ನಮ್ಮ ಮುಂದೆ ಆ ರೀತಿಯ ಯಾವ ಪ್ರಸ್ತಾವವೂ ಇಲ್ಲ. 2000 ರೂಪಾಯಿ ಹೆಚ್ಚು ಮಾಡುವ ಯಾವುದೇ ವಿಷಯ ಸದ್ಯ ಇಲ್ಲ ಎಂದಿದ್ದಾರೆ.
55
ಕೊಡುವ ಹಣವೇ ಕೊಡಲು ಆಗ್ತಿಲ್ಲ!
ಅಂದಹಾಗೆ 2000 ರೂಪಾಯಿಗಳನ್ನು ಪ್ರತಿ ತಿಂಗಳು ಹಾಕಲು ಕೆಲವೊಮ್ಮೆ ರಾಜ್ಯ ಸರ್ಕಾರ ಕಷ್ಟಪಡುವುದು ಇದೆ. ಈ ಯೋಜನೆಯ ಫಲಾನುಭವಿಗಳ ಪೈಕಿ ಹಲವರು ಪ್ರತಿ ತಿಂಗಳು ಹಣ ಹಾಕುತ್ತಿಲ್ಲ ಎಂದು ಗೋಳೋ ಎನ್ನುವುದು ಇದೆ. ನಡುನಡುವೆ 2-3 ತಿಂಗಳು ಮಿಸ್ ಆಗಿರುತ್ತವೆ ಎನ್ನಲಾಗುತ್ತಿದೆ. ಇದಾಗಲೇ ಗ್ಯಾರೆಂಟಿ ಯೋಜನೆಗಳಿಂದಾಗಿ ಸರ್ಕಾರ ಕಷ್ಟದಲ್ಲಿ ಇರುವಾಗ, ಇನ್ನು ಹೆಚ್ಚು ಹಣ ಕೊಡುವುದು ಮಾತ್ರ ಕನಸಿನ ಮಾತೇ ಎನ್ನುವ ಕಮೆಂಟ್ಸ್ ಬರುತ್ತಿವೆ.