ಮಂಗಳೂರು: ಹಿಂದೂ ಕಾರ್ಯಕರ್ತರಿಗೆ ಬಜರಂಗದಳದಿಂದ ಶಸ್ತ್ರ ಹಂಚಿಕೆ..!

Suvarna News   | Asianet News
Published : Oct 15, 2021, 11:06 AM ISTUpdated : Oct 15, 2021, 11:08 AM IST

ಮಂಗಳೂರು(ಅ.15):  ತ್ರಿಶೂಲ ದೀಕ್ಷೆ ಹೆಸರಲ್ಲಿ ಹಿಂದೂ ಕಾರ್ಯಕರ್ತರಿಗೆ ಬಜರಂಗದಳದವರು ಶಸ್ತ್ರ ಹಂಚಿದ ಘಟನೆ ನಿನ್ನೆ(ಗುರುವಾರ) ನಡೆದಿದೆ. ಈ ಮೂಲಕ ಬಜರಂಗದಳ ವಿವಾದಾತ್ಮಕ ಹೆಜ್ಜೆಯನ್ನ ಇಟ್ಟಿದೆ. 

PREV
15
ಮಂಗಳೂರು:  ಹಿಂದೂ ಕಾರ್ಯಕರ್ತರಿಗೆ ಬಜರಂಗದಳದಿಂದ ಶಸ್ತ್ರ ಹಂಚಿಕೆ..!

ನಿನ್ನೆ(ಗುರುವಾರ) ಮಂಗಳೂರು ನಗರದ ಕದ್ರಿ ವಿಶ್ವಹಿಂದೂಪರಿಷತ್ ಕಚೇರಿಯಲ್ಲಿ ನಡೆದ ತ್ರಿಶೂಲ ದೀಕ್ಷೆ ಕಾರ್ಯಕ್ರಮದಲ್ಲಿ ಹಿಂದೂ ಕಾರ್ಯಕರ್ತರಿಗೆ ಚೂರಿ ಮಾದರಿಯ ತ್ರಿಶೂಲದಂಥ ಶಸ್ತ್ರವನ್ನ ಹಂಚಿಕೆ ಮಾಡಲಾಗಿದೆ.

25

ಆಯುಧ ಪೂಜೆ ಹಿನ್ನೆಲೆಯಲ್ಲಿ ಕಾರ್ಯಕರ್ತರಿಗೆ ತ್ರಿಶೂಲ ನೀಡಿ ಪೂಜೆ ಮಾಡಲಾಗಿದೆ. ಚೂರಿ ಮಾದರಿಯ ತ್ರಿಶೂಲದಂಥ ಶಸ್ತ್ರವನ್ನ ಕಾರ್ಯಕರ್ತರಿಗೆ ಹಂಚಿದ ಬಜರಂಗದಳ

35

ಮಂಗಳೂರಿನ ಕದ್ರಿಯ ವಿಶ್ವಹಿಂದೂಪರಿಷತ್ ಕಚೇರಿಯಲ್ಲಿ ವಿಎಚ್‌ಪಿ ವಿಭಾಗದ ಕಾರ್ಯದರ್ಶಿ ಶರಣ್ ಪಂಪ್ ವೆಲ್ ನೇತೃತ್ವದಲ್ಲಿ ನಡೆದ ತ್ರಿಶೂಲ ದೀಕ್ಷೆ ಕಾರ್ಯಕ್ರಮ. ಸದ್ಯ ತ್ರಿಶೂಲ ದೀಕ್ಷೆ ಫೋಟೋಗಳು ಸಾಮಾಜಿಕ ತಾಣಗಳಲ್ಲಿ ಭಾರೀ ವೈರಲ್ ಆಗಿವೆ. 

45

ಕಾರ್ಯಕರ್ತರ ಕೈಗೆ ಬಹಿರಂಗವಾಗಿಯೇ ಶಸ್ತ್ರ ಕೊಡುವ ಮೂಲಕ ಬಜರಂಗದಳ ವಿವಾದಾತ್ಮಕ ಹೆಜ್ಜೆಯನ್ನ ಇಟ್ಟಿದೆ. ಕರಾವಳಿಯಲ್ಲಿ ನೈತಿಕ ಪೊಲೀಸ್ ಗಿರಿ ಮಿತಿಮೀರಿದ ಬೆನ್ನಲ್ಲೇ ಬಜರಂಗದಳದ ಈ ನಡೆ ಭಾರೀ ಚರ್ಚೆಗೆ ಗ್ರಾಸವಾಗಿದೆ.  

55

ಹಿಂದೂ ಕಾರ್ಯಕರ್ತರಿಗೆ ಬಜರಂಗದಳದವರು ಶಸ್ತ್ರ ಹಂಚಿದ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ. ಇದರ ಜೊತೆಗೆ ಸಾಮಾಜಿಕ ತಾಣಗಳಲ್ಲಿ ತ್ರಿಶೂಲ ದೀಕ್ಷೆ ವಿಚಾರ ಪರ ವಿರೋಧದ ಚರ್ಚೆ ಕೂಡ ಆರಂಭವಾಗಿದೆ.

click me!

Recommended Stories