Mandya| ಶ್ರೀರಂಗಪಟ್ಟಣ ದಸರಾಕ್ಕೆ ಚುಂಚನಗಿರಿ ಶ್ರೀ ಚಾಲನೆ

First Published Oct 10, 2021, 9:29 AM IST

ಶ್ರೀ​ರಂಗ​ಪ​ಟ್ಟಣ(ಅ.10): ನಾ​ಡ​ದೇ​ವತೆ ಚಾ​ಮುಂಡೇ​ಶ್ವರಿ ದೇ​ವಿಗೆ ಪು​ಷ್ಪಾರ್ಚನೆ ನೆ​ರ​ವೇ​ರಿ​ಸುವ ಮೂ​ಲಕ ಇತಿಹಾಸ ಪ್ರಸಿದ್ಧ ಶ್ರೀರಂಗಪಟ್ಟಣ ದಸರಾ ಮಹೋತ್ಸವಕ್ಕೆ ಆ​ದಿ​ಚುಂಚ​ನ​ಗಿರಿ ಪೀ​ಠಾ​ಧ್ಯಕ್ಷ ನಿರ್ಮಲಾ​ನಂದ​ನಾಥ ಸ್ವಾ​ಮೀಜಿ ಶನಿವಾರ ಅಧಿಕೃತ ಚಾಲನೆ ನೀಡಿದರು. 

ಈ ವೇಳೆ ಆಶೀರ್ವಚನ ನೀಡಿದ ಶ್ರೀಗಳು, ತಾಯಿ ಚಾ​ಮುಂಡೇ​ಶ್ವ​ರಿಯ ಪೂರ್ಣ ಆ​ಶೀರ್ವಾದ​ದಿಂದ ಎಲ್ಲ ಸಂಕ​ಷ್ಟ​ಗಳೂ ದೂ​ರವಾಗಿ ರೈ​ತರ ಮೊ​ಗ​ದಲ್ಲಿ ನಗು ಮೂ​ಡಲಿ, ನಾ​ಡಿ​ನಲ್ಲಿ ಸಂಪತ್ತು ನೆ​ಲೆ​ಸಲಿ ಎಂದು ಆ​ಶಿ​ಸಿ​ದರು. 
 

ಈ ಸಂದರ್ಭದಲ್ಲಿ ಜಿಲ್ಲಾ ಉ​ಸ್ತು​ವಾರಿ ಸ​ಚಿವ ಕೆ.ಸಿ. ನಾ​ರಾ​ಯ​ಣ​ಗೌಡ, ಶಾ​ಸಕರಾ​ದ ರ​ವೀಂದ್ರ ಶ್ರೀ​ಕಂಠಯ್ಯ, ಕೆ.ಸು​ರೇಶ್‌ ಗೌಡ ಈ ಸಂದರ್ಭದಲ್ಲಿದ್ದರು.

ಗೋಪಾಲಸ್ವಾಮಿ ಆನೆಯ ಮೇಲೆ ಚಾಮುಂಡೇಶ್ವರಿ ವಿಗ್ರಹವಿದ್ದ ಮರದ ಅಂಬಾರಿಯನ್ನು ಇರಿಸಲಾಗಿತ್ತು. ಈ ವೇಳೆ ಪಟಾಕಿ ಸಿಡಿತ ಹಾಗೂ ಜಾನಪದ ಕಲಾತಂಡಗಳ ಸದ್ದಿಗೆ ಬೆದರಿ ಆನೆ ದಿಕ್ಕಾಪಾಲಾಗಿ ಓಡಲು ಶುರುಮಾಡಿತು.

ಕೊನೆಗೆ ಮಾವುತ ಆನೆ ಕಾಲಿಗೆ ಸರಪಣಿ ಬಿಗಿದು ಆಗಬಹುದಿದ್ದ ಭಾರೀ ಅನಾಹುತ ತಡೆದರು. ಕೊನೆಗೆ ಜಂಜೂಸವಾರಿ ರದ್ದುಗೊಳಿಸಿ, ಚಾಮುಂಡೇ​ಶ್ವ​ರಿ​ ವಿಗ್ರಹವನ್ನು ಬೆಳ್ಳಿ ರಥದಲ್ಲಿ ಮೆ​ರ​ವ​ಣಿಗೆ ನ​ಡೆ​ಸಲಾಯಿತು.

click me!