ಯಾರದ್ದೋ ಫೋಟೋ ಹಿಡಿದು ತನ್ನದೇ ಮಗಳ ಫೋಟೋ ಎಂದು ಪೋಸ್ ಕೊಟ್ಟು ಧರ್ಮಸ್ಥಳದ ವಿರುದ್ಧ ಹುನ್ನಾರ ನಡೆಸಿರುವ ಆರೋಪ ಹೊತ್ತ ಸುಜಾತಾ ಭಟ್ ವಿಷ್ಯವಾಗಿ ಕಿಚ್ಚ ಸುದೀಪ್ ಅವರಿಗೆ ಹೀಗೊಂದು ಮನವಿ ಮಾಡಿಕೊಳ್ಳಲಾಗಿದೆ, ಏನದು?
ಧರ್ಮಸ್ಥಳ ಕೇಸ್‌ನಲ್ಲಿ ತನ್ನದೊಂದು ನಾಪತ್ತೆ ಸ್ಟೋರಿಯನ್ನು ತೇಲಿಸಿಬಿಟ್ಟಿದ್ದ ಸುಜಾತಾ ಭಟ್ ಹೇಳಿದ್ದ ಸುಳ್ಳುಗಳು ಇದೀಗ ಬಟಾಬಯಲಾಗಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಸುಜಾತಾ ಭಟ್ ಹಾಗೂ ಆಕೆಯದ್ದೇ ಮಗಳು ಎಂದು ಬಿಂಬಿತವಾಗಿದ್ದ ಅನನ್ಯಾ ಭಟ್ಳ ಜಾಡು ಹಿಡಿದು ಹೋದಾಗ ಸಿನಿಮೀಯ ರೀತಿಯ ಘಟನೆಗಳು ಇದಾಗಲೇ ಬೆಳಕಿಗೆ ಬಂದಿವೆ. ಯುಟ್ಯೂಬರ್ ಸಮೀರ್, ಬರ್ಬರವಾಗಿ ಹತ್ಯೆಗೀಡಾದ ಸೌಜನ್ಯಾಳಿಗೆ ನ್ಯಾಯ ಕೊಡಿಸುವುದಾಗಿ ಹೇಳಿದ್ದಾಗಿನಿಂದಲೂ ಈ ಪ್ರಕರಣ ಬೇರೆ ಬೇರೆ ರೂಪವನ್ನೇ ತಾಳಿ ಕೊನೆಗೆ ಸುಜಾತಾ ಭಟ್ ಎಂಟ್ರಿಯಾಗಿರುವುದು ಎಲ್ಲರಿಗೂ ಗೊತ್ತಿದ್ದದ್ದೇ.
27
ಸುಜಾತಾ ಭಟ್ ಎನ್ನುವ ಅಪರೂಪದ ಮಹಿಳೆ!
ಧರ್ಮಸ್ಥಳದಲ್ಲಿ ಮುಸುಕುದಾರಿ ದೂರುದಾರ ನೂರಾರು ಶವ ಹೂತಿಟ್ಟ ಆರೋಪದ ಬೆನ್ನಲ್ಲೇ ಸುಜಾತ್ ಭಟ್ ಅನ್ನೋ ಮಹಿಳೆ ತನ್ನ ಮಗಳು ಅನನ್ಯಾ ಭಟ್ ಧರ್ಮಸ್ಥಳ ದೇವಸ್ಥಾನಕ್ಕೆ ತೆರಳಿ ಮಿಸ್ಸಿಂಗ್ ಆಗಿದ್ದಾಳೆ ಎಂದು ದೂರು ನೀಡಿ ಕೋಲಾಹಲ ಸೃಷ್ಟಿಸಿದ್ದರು.
37
ರೀಲು ಬಿಟ್ಟ ಸುಜಾತಾ ಭಟ್
ತನ್ನ ಮಗಳು ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದಾಳೆ ಎಂದು ಆಕೆ ನೀಡಿರುವ ಎಲ್ಲಾ ದೂರುಗಳು ಸುಳ್ಳು ಎನ್ನುವುದು ಏಷ್ಯಾನೆಟ್ ನ್ಯೂಸ್‌ನ ತನಿಖಾ ವರದಿಯಲ್ಲಿ ಬಹಿರಂಗವಾಗಿತ್ತು. ಅಸಲಿಗೆ ಆಕೆಗೆ ಅನನ್ಯಾ ಭಟ್ ಎನ್ನುವ ಮಗಳೇ ಇರಲಿಲ್ಲ. ತನ್ನ ಮಗಳು ಮೊದಲ ವರ್ಷದ ಎಂಬಿಬಿಎಸ್ ವಿದ್ಯಾಭ್ಯಾಸ ಮಾಡುತ್ತಿದ್ದಳು ಎಂದು ಹೇಳಿದ್ದ ಆಕೆಯ ಸುಳ್ಳುಗಳು ಕಾಲೇಜಿನ ದಾಖಲೆಯಲ್ಲಿ ಬಹಿರಂಗವಾಗಿತ್ತು.
ರಾಷ್ಟ್ರೀಯ ಸುದ್ದಿ ಮಾಧ್ಯಮ ಸೇರಿದಂತೆ ದೇಶ ವಿದೇಶದ ಸುದ್ದಿ ಮಾಧ್ಯಮಗಳಲ್ಲಿ ಸುಜಾತ್ ಭಟ್ ಸಂಚಲನ ಸೃಷ್ಟಿಸಿದ್ದರು. ಆದರೆ ಸುಜಾತ್ ಭಟ್ ಕುರಿತು ಮಾಹಿತಿ ಕೆದಕುತ್ತಾ ಹೋಗುತ್ತಿರುವ ಎಸ್ಐಟಿ ಅಧಿಕಾರಿಗಳಿಗೆ ಸ್ಫೋಟಕ ಮಾಹಿತಿಗಳು ಲಭ್ಯವಾಗುತ್ತಿದೆ.
57
ಯಾರೀ ನಕಲಿ ಅನನ್ಯಾ ಭಟ್?
2006ರಲ್ಲಿ ಪ್ರಭಾಕರ್ ಬಾಳಿಗ ತೊರೆದ ಸುಜಾತ ಭಟ್ ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಆಗ ಅಲ್ಲಿ ರಂಗಪ್ರಸಾದ್ ಎನ್ನುವವರ ಪರಿಚಯವಾಗಿ ಸ್ನೇಹ ಬೆಳೆದಿತ್ತು. ರಂಗಪ್ರಸಾದ್ ಅವರಿಗೆ ಶ್ರೀವತ್ಸ ಹೆಸರಿನ ಮಗ ಇದ್ದರು. ಅವರ ಮೃತ ಪತ್ನಿ ವಾಸಂತಿ. ಆ ವಾಸಂತಿಯ ಫೋಟೋ ಅನ್ನು ತನ್ನ ಮಗಳು ಅನನ್ಯಾ ಭಟ್ ಎಂದು ಸುಜಾತಾ ಭಟ್ ಹಸಿಹಸಿ ಸುಳ್ಳು ಹೇಳಿದ್ದರು.
67
ಕಿಚ್ಚ ಸುದೀಪ್ಗೆ ಅಭಿಮಾನಿಗಳ ಕೋರಿಕೆ
ಇದೀಗ ಇದರ ಬೆನ್ನಲ್ಲೇ ಕಿಚ್ಚ ಸುದೀಪ್ ಅವರಿಗೆ ಅವರ ಅಭಿಮಾನಿಗಳು ಹಾಗೂ ಸಾಕಷ್ಟು ಜನರಿಂದ ಭಾರಿ ಮನವಿ ಬರುತ್ತಿದೆ. ಅದೇನೆಂದರೆ, ಸುಜಾತಾ ಭಟ್ ಅವರನ್ನು ಮುಂದಿನ ಬಿಗ್ಬಾಸ್ಗೆ ಕರೆಸಿಕೊಳ್ಳಬೇಕು ಎನ್ನುವುದು. ಅಷ್ಟಕ್ಕೂ ಬಿಗ್ಬಾಸ್ ಎಂದರೇನೇ ಅದರಲ್ಲಿ ಹೆಚ್ಚಿನವರು ಕಾಂಟ್ರವರ್ಸಿಯಾದವರೇ ಎನ್ನುವುದು ಗುಟ್ಟಾಗಿ ಏನೂ ಉಳಿದಿಲ್ಲ. ಘಟಾನುಘಟಿ ಕಳ್ಳರು-ಸುಳ್ಳುಕಾಕರನ್ನು ಮೀರಿಸುವ ರೀತಿಯಲ್ಲಿ ಸುಜಾತಾ ಅವರು ಹೇಳಿರುವ ಹಸಿಹಸಿ ಸುಳ್ಳಿನಿಂದ ಅವರು ಬಿಗ್ಬಾಸ್ ಮನೆಗೆ ಯೋಗ್ಯರು ಎಂದು ಹಲವರು ಸೋಷಿಯಲ್ ಮೀಡಿಯಾದಲ್ಲಿ ತಮಾಷೆ ಮಾಡುತ್ತಿದ್ದಾರೆ.
77
ಹಸಿಹಸಿ ಸುಳ್ಳು ಹೇಳಿದವರಿಗೆ ಹಿಂದೆಯೂ ಛಾನ್ಸ್
ಇದೇ ರೀತಿ ಹಸಿಹಸಿ ಸುಳ್ಳು ಹೇಳಿ, ಘಟಾನುಘಟಿಗಳು, ವಿವಿಧ ಕ್ಷೇತ್ರಗಳ ಗಣ್ಯರನ್ನೇ ಯಾಮಾರಿಸಿದವರಿಗೆ ಈ ಹಿಂದೆಯೂ ಅವಕಾಶ ಸಿಕ್ಕಿದ್ದನ್ನು ಸ್ಮರಿಸಿಕೊಂಡಿರೋ ನೆಟ್ಟಿಗರು, ಆತನಂತೆಯೇ, ಈಕೆಗೂ ದಯವಿಟ್ಟು ಅವಕಾಶ ಕೊಡಿ. ನೋಡಲು ಮಜಾ ಬರುತ್ತದೆ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಸುಜಾತಾ ಭಟ್ ಈಗ ಎಲ್ಲರ ಕೇಂದ್ರಬಿಂದು ಆಗಿದ್ದು, ಆಕೆಯ ಹಿಂದಿರುವ ನಿಜವಾದ ಕೈಬಗ್ಗೆ ಇನ್ನಷ್ಟೇ ತಿಳಿಯಬೇಕಿದೆ.