ಶೀಘ್ರದಲ್ಲೇ ರಾತ್ರಿ ವೇಳೆ ಬಸ್‌ ಸಂಚಾರ: ಸಾರಿಗೆ ಸಚಿವ ಲಕ್ಷ್ಮಣ ಸವದಿ

First Published | May 23, 2020, 3:19 PM IST

ಹೊಸಪೇಟೆ(ಮೇ.23): ಈಗಾಗಲೇ ರಾಜ್ಯದಲ್ಲಿ ಕೆಲ ಪ್ರದೇಶದಲ್ಲಿ ರಾತ್ರಿ ವೇಳೆಯಲ್ಲಿ ಬಸ್‌ ಸಂಚಾರ ಆರಂಭಗೊಂಡಿದ್ದು, ರಾಜ್ಯಾದ್ಯಂತ ಪೂರ್ಣ ಪ್ರಮಾಣದಲ್ಲಿ ರಾತ್ರಿ ವೇಳೆಯಲ್ಲೂ ಬಸ್‌ ಸಂಚಾರವನ್ನು ಅತೀ ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.

ನಗರದ ಕೇಂದ್ರ ಬಸ್‌ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವ ಲಕ್ಷ್ಮಣ ಸವದಿ
ಮೇ 30ರಂದು ಲಾಕ್‌ಡೌನ್‌ ಕುರಿತು ಕೇಂದ್ರದ ಹೊಸ ಮಾರ್ಗಸೂಚಿ ಹೊರಬರಲಿದೆ. ಕೇಂದ್ರ ಮಾರ್ಗಸೂಚಿ ನೋಡಿಕೊಂಡು ಬಸ್‌ ಯಾವ ರೀತಿಯಲ್ಲಿ ಓಡಿಸಬೇಕು ಎನ್ನುವ ಕುರಿತು ತೀರ್ಮಾನಕ್ಕೆ ಬರಲಾಗುತ್ತದೆ.
Tap to resize

ರಾತ್ರಿ ವೇಳೆಯಲ್ಲಿ ಕೆಲ ಪ್ರಯಾಣಿಕರು ಬಸ್‌ಗಾಗಿ ಕಾಯುತ್ತಾ ಬಸ್‌ ನಿಲ್ದಾಣದಲ್ಲಿ ಮಲಗುವ ಪ್ರಶ್ನೆಯೇ ಇಲ್ಲ. ಪೂರ್ಣ ಪ್ರಮಾಣದಲ್ಲಿ ಬಸ್‌ ಸಂಚಾರವನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು.
ಇಡೀ ರಾಜ್ಯದಲ್ಲೇ ಹೊಸಪೇಟೆ ವಿಭಾಗವು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಹೊಸಪೇಟೆ ಎಂದರೆ ನಮಗೆ ಹೆಮ್ಮೆಯ ಸಂಗತಿ ಎಂದ ಸಚಿವ ಲಕ್ಷ್ಮಣ ಸವದಿ

Latest Videos

click me!