ಜನವರಿ 23ರಂದು ಗುಮ್ಮನೂರಿನ ಗಂಡನ ಮನೆಯಿಂದ ಸರಸ್ವತಿ ಏಕಾಏಕಿ ನಾಪತ್ತೆಯಾಗಿದ್ದಳು. ಆಕೆ ತನ್ನ ಪ್ರಿಯಕರ ಕುಮಾರ್ ಜೊತೆ ಕಾರಿನಲ್ಲಿ ಪರಾರಿಯಾಗುತ್ತಿರುವ ದೃಶ್ಯ ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅಷ್ಟೇ ಅಲ್ಲದೆ, ಪತ್ನಿ ಪರಾರಿಯಾದ ನಂತರ ಪ್ರಿಯಕರ ಕುಮಾರ್, ಹರೀಶ್‌ಗೆ ಕರೆ ಮಾಡಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ. 'ಸರಸ್ವತಿ ತಂಟೆಗೆ ಬರಬೇಡ, ಬಂದರೆ ಸುಮ್ಮನಿರಲ್ಲ' ಎಂದು ಹರೀಶ್ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿ ಮಾನಸಿಕ ಕಿರುಕುಳ ನೀಡಿದ್ದ ಎಂದು ಕುಟುಂಬಸ್ಥರು ದೂರಿದ್ದಾರೆ.