ಆತ್ಮ*ಹತ್ಯೆ ಮಾಡಿಕೊಂಡ ಮಗಳ ಅಂತ್ಯಸಂಸ್ಕಾರವನ್ನು, ಆಕೆಯ ಗಂಡ ಪಾವಗಡ ತಾಲೂಕಿನಲ್ಲಿ ಕಟ್ಟಿಸುತ್ತಿದ್ದ ನಿರ್ಮಾಣ ಹಂತದ ಮನೆಯಲ್ಲೇ ತಂದೆ ನೆರವೇರಿಸಿದ್ದಾರೆ. ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ತಂದೆ, ಇದು ಕೊಲೆ ಎಂದು ಆರೋಪಿಸಿದ್ದಾರೆ.
ಆತ್ಮ*ಹತ್ಯೆ ಮಾಡಿಕೊಂಡು ಪ್ರಾಣ ಕಳೆದುಕೊಂಡ ಮಗಳ ಅಂತ್ಯಸಂಸ್ಕಾರವನ್ನು ತಂದೆ, ಆಕೆಯ ಗಂಡ ಕಟ್ಟಿಸುತ್ತಿದ್ದ ಮನೆಯಲ್ಲಿಯೇ ಅಂತ್ಯಕ್ರಿಯೆ ಮಾಡಲಾಗಿದೆ. ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಭೂಪೂರು ತಾಂಡಾದಲ್ಲಿ ಘಟನೆ ನಡೆದಿದೆ.
25
ಶ್ರುತಿ ಆತ್ಮ*ಹತ್ಯೆ
ಬೆಂಗಳೂರಿನ ಯಲಹಂಕದಲ್ಲಿ ವಾಸವಾಗಿದ್ದ ಶ್ರುತಿ ಆತ್ಮ*ಹತ್ಯೆ ಮಾಡಿಕೊಂಡಿದ್ದರು. ಶ್ರುತಿ ತಂದೆ ರಾಜುನಾಯ್ಕ್, ಮಗಳ ಶವವನ್ನು ಭೂಪೂರು ತಾಂಡಾಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಶ್ರುತಿ ಗಂಡ ಪವನ್ ಕಲ್ಯಾಣ್ ಭೂಪೂರು ತಾಂಡಾದಲ್ಲಿ ಮನೆ ಕಟ್ಟಿಸುತ್ತಿದ್ದರು. ಈ ನಿರ್ಮಾಣಹಂತದ ಮನೆಯ ಪಡಸಾಲೆಯಲ್ಲಿನ ಟೈಲ್ಸ್ ತೆಗೆದು ಮಗಳ ಶವವನ್ನು ರಾಜುನಾಯ್ಕೆ ಹೂತಿದ್ದರು.
35
ಮನೆಯಲ್ಲಿ ಅಂತ್ಯಕ್ರಿಯೆ ಮಾಡಿದ್ದೇಕೆ?
ಅಳಿಯ ಪವನ್‌ಗೆ ಮನೆ ಕಟ್ಟಿಸಿಕೊಳ್ಳಲು ನಾನೇ ಹಣ ನೀಡಿದ್ದೇನೆ. ಹಾಗಾಗಿ ಈ ಮನೆಯೊಳಗೆ ಮಗಳ ಅಂತ್ಯಕ್ರಿಯೆ ಮಾಡಿರೋದಾಗಿ ರಾಜುನಾಯ್ಕ್ ಹೇಳಿದ್ದರು. ಇನ್ನು ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಸ್ಥಳೀಯ ಪೊಲೀಸರು, ಮಾಹಿತಿ ಪಡೆದುಕೊಂಡಿದ್ದಾರೆ. ನಂತರ ರಾಜು ನಾಯ್ಕ್ ಅವರ ಮನವೊಲಿಸಿ ಹೂತಿದ್ದ ಶವವನ್ನು ಹೊರಗೆ ತೆಗೆಸಿದ್ದಾರೆ. ನಂತರ ಗಂಡ ಪವನ್ ಕಲ್ಯಾಣ್ ಜಮೀನಿನಲ್ಲಿ ಶ್ರುತಿ ಅವರ ಅಂತ್ಯಕ್ರಿಯೆ ನಡೆಸಲಾಗಿದೆ.
ಮಗಳ ಅಂತ್ಯಸಂಸ್ಕಾರ ನೆರವೇರಿಸಲು ಗಂಡನ ಮನೆಯವರು ಮುಂದಾಗಲಿಲ್ಲ. ಹಾಗಾಗಿ ನಾನೇ ನಿರ್ಮಾಣ ಹಂತದ ಮನೆಯಲ್ಲಿ ಅಂತ್ಯಸಂಸ್ಕಾರ ಮಾಡಿದೆ. ಪೊಲೀಸರು ಬಂದು ನಮ್ಮ ಮೇಲೆ ದೌರ್ಜನ್ಯ ನಡೆಸಿದರು. ನಮ್ಮ ಮಗಳದ್ದು ಆತ್ಮ*ಹತ್ಯೆ ಅಲ್ಲ. ಮೂರ್ನಾಲ್ಕು ದಿನ ಪ್ಲಾನ್ ಮಾಡಿಕೊಂಡು ಕೊಲೆ ಮಾಡಿದ್ದಾರೆ ಎಂದು ರಾಜು ನಾಯ್ಕ್ ಆರೋಪಿಸಿದ್ದಾರೆ.
ನಮಗೆ ಮಗಳು ಸತ್ತಿದ್ದಾಳೆ ಎಂದು ಹೇಳಿದರು. ಅಲ್ಲಿಗೆ ಹೋದ್ಮೇಲೆ ಆಸ್ಪತ್ರೆಯಲ್ಲಿ ಸೇರಿಸಿದ್ದೇವೆ ಎಂದರು. ನಮಗೆ ಮಗಳನ್ನು ತೋರಿಸಿ ಅಂದ್ರೆ ತೋರಿಸಲಿಲ್ಲ. ನಮಗೆ ಏನು ಅನ್ನೋದು ಗೊತ್ತಾಗಲಿಲ್ಲ. ನಂತರ ಅಳಿಯ ಪವನ್, ಅವರ ತಂದೆ-ತಾಯಿ ವಿರುದ್ಧ ದೂರು ದಾಖಲಿಸಿದ್ದೇನೆ. ಬೆಂಗಳೂರಿನಿಂದ ಮೃತದೇಹ ತೆಗೆದುಕೊಂಡು ಬಂದ ನಂತ್ರ ಇಲ್ಲಿ ಅಂತ್ಯಸಂಸ್ಕಾರ ಮಾಡಿದೆ ಎಂದು ರಾಜುನಾಯ್ಕ್ ಹೇಳಿದ್ದಾರೆ. ತಿರುಮಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.