ಮೈಸೂರಿನ 'ಕಿಲ್ಲಿಂಗ್ ಡಾಕ್ಟರ್' ವಿನಯ್ ಅಸಲಿ ಬಣ್ಣ ಬಯಲು: ಸೈಕೋ ವೈದ್ಯನ ಬಲೆಗೆ ಸಿಲುಕಿ ನಲುಗಿದ ಮೂವರು ಸುಂದರಿಯರು!

Published : Mar 25, 2026, 04:30 PM IST

ಮೈಸೂರಿನ ಆಯುರ್ವೇದ ವೈದ್ಯನೆಂದು ಹೇಳಿಕೊಳ್ಳುವ ವಿನಯ್, ಪ್ರೀತಿಯ ಹೆಸರಲ್ಲಿ ಹಲವು ಮಹಿಳೆಯರಿಗೆ ಮೋಸ ಮಾಡಿದ್ದಾರೆ. ವೈದ್ಯೆ ನಾಗಶ್ರೀ 12 ವರ್ಷ ಕೋಮಾದಲ್ಲಿದ್ದು ಸಾವು, ಮತ್ತೊಬ್ಬ ಯುವತಿ ಆತ್ಮ*ಹತ್ಯೆ. ತನ್ನ ಪತ್ನಿಗೂ ವಿಚಿತ್ರ ಲೈಂಗಿಕ ಕಿರುಕುಳ ನೀಡಿರುವ ಆಘಾತಕಾರಿ ಸತ್ಯಗಳು ಇದೀಗ ಬಯಲಾಗಿವೆ.

PREV
17
ಮೈಸೂರಿನ ಸೈಕೋ ವೈದ್ಯ

ಮೈಸೂರು (ಮಾ.25): ಸಮಾಜದಲ್ಲಿ ವೈದ್ಯರನ್ನು ದೇವರ ಸಮಾನ ಎಂದು ಕಾಣಲಾಗುತ್ತದೆ. ಆದರೆ ಮೈಸೂರಿನಲ್ಲಿ ಆಯುರ್ವೇದ ವೈದ್ಯನೆಂದು ಕರೆಸಿಕೊಳ್ಳುವ ವಿನಯ್ ಎಂಬಾತನ ಕ್ರೂರ ಕೃತ್ಯಗಳು ಕೇಳಿದರೆ ಮೈ ಜುಂ ಎನ್ನುತ್ತದೆ. ಈತ ಕೇವಲ ವೈದ್ಯನಲ್ಲ, ಪ್ರೀತಿಯ ಹೆಸರಲ್ಲಿ ಹೆಣ್ಣುಮಕ್ಕಳ ಜೀವನದ ಜೊತೆ ಚೆಲ್ಲಾಟವಾಡಿ, ಸಾವು-ನೋವಿಗೆ ಕಾರಣನಾದ ಒಬ್ಬ ಸರಣಿ ಅಪರಾಧಿ ಎಂಬ ಆಘಾತಕಾರಿ ಸತ್ಯಗಳು ಈಗ ಹೊರಬರುತ್ತಿವೆ.

27
ಮೋಸದ ವೈದ್ಯ

ಹುಣಸೂರು ತಾಲೂಕಿನ ಹನಗೋಡು ಸಮೀಪ ಕ್ಲಿನಿಕ್ ನಡೆಸುತ್ತಿದ್ದ ಈ 'ಮೋಸದ ವೈದ್ಯ'ನ ಅಸಲಿ ಮುಖ ಈಗ ಬಯಲಾಗಿದೆ.  ಈತ ಮೈಸೂರು ಆಯುರ್ವೇದ ಡಾಕ್ಟರ್ ಅಲ್ಲಲ್ಲಾ, ಹುಡುಗಿಯರಿಗೆ ಮೋಸ ಮಾಡುವ ವಿಕ್ಟರ್. ಗಂಡನಿಂದ ವಿಚಿತ್ರ ಲೈಂಗಿಕ ಕಿರುಕುಳ ಕೇಸಿನ ಬೆನ್ನಲ್ಲಿಯೇ ಆತನ ಹಳೆಯ ಪ್ರೇಮ ಪುರಾಣಗಳೆಲ್ಲವೂ ಹೊರಬೀಳುತ್ತಿವೆ. ಈತನ ವಿರುದ್ಧ ಪೊಲೀಸರು ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹ ಮಾಡುತ್ತಿದ್ದಾರೆ.

37
ವೈದ್ಯೆಯ ಸಾವಿನ ಹಿಂದೆ ರೋಚಕ ಕಹಾನಿ

12 ವರ್ಷದ ಹಿಂದಿನ ಲವ್ ಕಹಾನಿ, ವೈದ್ಯನ ಮೋಸಕ್ಕೆ ನರಳಿ ಪ್ರಾಣಬಿಟ್ಟ ವೈದ್ಯೆ ನಾಗಶ್ರೀ. ವೈದ್ಯೆಯ ಸಾವಿನ ಹಿಂದೆ ರೋಚಕ ಕಹಾನಿಯೊಂದು ಹೊರಬಿದ್ದಿದೆ. ಮೈಸೂರಿನ ಖಾಸಗಿ ಆಯುರ್ವೇದ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಡಾ.ನಾಗಶ್ರೀ ಜೊತೆಗೆ, ಜ್ಯೂನಿಯರ್ ಡಾಕ್ಟರ್ ಆಗಿ ವಿನಯ್ ಸೇರಿಕೊಂಡನು.

ನಂತರ ತನಗಿಂತ ಹಿರಿಯ ಡಾಕ್ಟರ್ ನಾಗಶ್ರೀ ಅವರನ್ನ ಪುಸಲಾಯಿಸಿ ಲವ್ ಮಾಡ್ತಾನೆ. ಮದುವೆ ಮಾಡಿಕೊಳ್ಳುವುದಾಗಿ ಲೈಂಗಿಕ ಸಂಬಂಧವನ್ನೂ ಬೆಳೆಸುತ್ತಾನೆ. ನಂತರ, ಮದುವೆ ಮಾಡಿಕೊಳ್ಳುವಂತೆ ಕೇಳಿದಾಗ ನೀನು ನನಗಿಂತ 2 ವರ್ಷ ದೊಡ್ಡವಳು ಮದುವೆ ಮಾಡಿಕೊಳ್ಳಲು ಮನೆಯಲ್ಲಿ ಒಪ್ಪುತ್ತಿಲ್ಲ ಎಂದು ನಾಟಕ ಮಾಡಿದ್ದಾನೆ. 

47
ಶ್ರೀರಂಗಪಟ್ಟಣ ಲಾಡ್ಜ್‌ನಲ್ಲಿ ಇಂಜೆಕ್ಷನ್ ಕೊಟ್ಟ

ಇದಾದ ನಂತರ ಇಬ್ಬರೂ ಬದುಕುವುದು ಬೇಡವೆಂದು ಶ್ರೀರಂಗಪಟ್ಟಣಕ್ಕೆ ಹೋಗಿ ಇಬ್ಬರೂ ಸಾಯೋಣವೆಂದು ಹೇಳಿದ್ದಾನೆ. ಶ್ರೀರಂಗಪಟ್ಟಣದಲ್ಲಿ ಲಾಡ್ಜ್ ರೂಮು ಮಾಡಿ, ಇಬ್ಬರೂ ನಿದ್ರೆ ಮಾತ್ರೆಯನ್ನು ತೆಗೆದುಕೊಂಡಿದ್ದಾರೆ. ನಂತರ, ಯುವತಿಯನ್ನು ಕೊಲೆ ಮಾಡುವ ಉದ್ದೇಶದಿಂದ ಡಾ.ನಾಗಶ್ರೀಗೆ ಓವರ್‌ಡೋಸ್ ಇಂಜೆಕ್ಷನ್ ಕೂಡ ಕೊಟ್ಟಿದ್ದಾನೆ. ಇದರಿಂದ ಯುವತಿ ಸ್ಥಿತಿ ಗಂಭೀರವಾಗಿದ್ದು ಕೋಮಾಕ್ಕೆ ಜಾರಿದ್ದಳು. ಆದರೆ, ವಿನಯ್‌ಗೆ ಏನೂ ಆಗಿರಲಿಲ್ಲ. 12 ವರ್ಷಗಳ ಕಾಲ ಕೋಮಾದಲ್ಲಿದ್ದ ಡಾ.ನಾಗಶ್ರೀ ಇತ್ತೀಚೆಗೆ ಸಾವನ್ನಪ್ಪಿದ್ದಾರೆ.

57
ಚಾರ್ಟೆಡ್ ಅಕೌಂಟೆಂಟ್ ಗೌತಮಿ

ಚಾರ್ಟೆಡ್ ಅಕೌಂಟೆಂಟ್ ಗೌತಮಿ ಹಿರೇಮಠ ಅವರು 2014ರಿಂದ 2017ರವರೆಗೆ ಇಂಗ್ಲೆಂಡಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಇದಾದ ನಂತರ 2017ರಲ್ಲಿ ಗೌತಮಿ ಹಿರೇಮಠ ಮೈಸೂರಿಗೆ ಬಂದು ವಾಸವಾಗಿದ್ದರು. ಆಗ ಡಾ. ವಿನಯ್ ಫೇಸ್‌ಬುಕ್ ಮೂಲಕ ಗೌತಮಿಯನ್ನು ಪರಿಚಯ ಮಾಡಿಕೊಂಡಿದ್ದನು. ಇಬ್ಬರೂ ಪರಿಚಿತರಾಗಿ, ಲವ್ ಮಾಡಿ ಒಂದು ವರ್ಷಗಳ ಕಾಲ ಪ್ರೇಮ ಹಕ್ಕಿಗಳಾಗಿ ವಿಹಾರ ಮಾಡಿದ್ದಾರೆ.

ಆದರೆ, ವಿನಯ್ ಜೊತೆಗೆ ಲವ್‌ನಲ್ಲಿದ್ದ ಗೌತಮಿ ಒಂದು ವರ್ಷದ ಬಳಿಕ ಆತ್ಮ*ಹತ್ಯೆ ಮಾಡಿಕೊಳ್ಳುತ್ತಾರೆ. ಇನ್ನು ಗೌತಮಿಯ ತಂದೆ ಡಾ.ವಿನಯ್‌ನಿಂದಲೇ ತನ್ನ ಮಗಳು ಸಾವನ್ನಪ್ಪಿದ್ದಾಳೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ, ಪೊಲೀಸರ ಮೇಲೆ ಪ್ರಭಾವ ಬೀರಿದ್ದರಿಂದ ಆ ಕೇಸಿನಿಂದಲೂ ವಿನಯ್ ಲೀಲಾಜಾಲವಾಗಿ ಹೊರಬಂದಿದ್ದನು.

67
3ನೇ ಹುಡುಗಿ ವಿನೋದಾ ಜೊತೆ ಮದುವೆ

ಇದೀಗ ಹುಣಸೂರಿನ ಹನಗೋಡು ಗ್ರಾಮದ ಪಕ್ಕದಲ್ಲಿರುವ ಹುಡುಗಿ ವಿನೋದಾ ಎನ್ನುವವರನ್ನು ಮದುವೆ ಮಾಡಿಕೊಳ್ಳುತ್ತಾರೆ. ವಿನೋದಾ ಮದುವೆಯಾಗಿ 15 ದಿನಕ್ಕೆ ಮನೆಯಿಂದ ಹೊರಗಡೆ ಬಂದಿದ್ದಾಳೆ. ಮದುವೆಯಾಗಿ ಒಂದೇ ವಾರದಲ್ಲಿ ನಿಮ್ಮ ಮನೆಯವರಿಗೆ ಅದ್ಧೂರಿ ಮದುವೆ ಮಾಡಿಕೊಡಲು ಆಗಿಲ್ಲ, ನಾವು ಕೇಳಿದಷ್ಟು ಹಣ ಕೊಡಲು ಆಗಿಲ್ಲ. ನೀವು ನಿಮ್ಮನೆಯಲ್ಲಿ ಮಾಡಿರುವ ಮದುವೆ ಸಾಲಕ್ಕೆ ಜಮೀನು ಮಾರುತ್ತಾರಂತೆ, ಅದೇ ಜಮೀನನ್ನ ನಮ್ಮ ಹೆಸರಿಗೆ ಬರೆದುಕೊಡಲು ಹೇಳು ಎಂದು ಒತ್ತಡ ಹಾಕಿದ್ದಾರೆ.

77
ವಿಚಿತ್ರ ಲೈಂಗಿಕತೆಗೆ ಬೇಡಿಕೆ

ಇದ್ಯಾವುದಕ್ಕೂ ವಿನೋದಾ ಸೊಪ್ಪು ಹಾಕದಿದ್ದಾಗ ಕಿರುಕುಳ ಕೊಡಲು ಆರಂಭಿಸಿದ್ದಾನೆ. ಪ್ರತಿದಿನ ಜ್ಯೂಸ್‌ನಲ್ಲಿ ಡ್ರಗ್ಸ್ ಹಾಕಿಕೊಟ್ಟು ಮಂಕು ಕವಿದಂತೆ ಮಾಡುತ್ತಿದ್ದನು. ಇನ್ನು ರಾತ್ರಿಯಾದರೆ ವಿಚಿತ್ರ ಲೈಂಗಿಕತೆಗೆ ಬೇಡಿಕೆ ಇಡುತ್ತಿದ್ದನು. ಇದಕ್ಕೊಪ್ಪದಿದ್ದರೆ ಗನ್ ತೋರಿಸಿ ಜೀವ ಬೆದರಿಕೆಯನ್ನೂ ಹಾಕುತ್ತಿದ್ದನು ಎಂದು ಆರೋಪ ಮಾಡಿದ್ದಾರೆ.

Read more Photos on
click me!

Recommended Stories