ಉಡುಪಿ (ಆ.05) ಅಯೋಧ್ಯೆಯಲ್ಲಿ ರಾಮಮಂದಿರದ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡುವ ಸಮಯದಲ್ಲಿಯೇ ಉಡುಪಿ ಶ್ರೀಕೃಷ್ಣ ಮಠದ ಗೋಶಾಲೆಯಲ್ಲಿ ದೇಸಿ ದನ ಕಪಿಲೆಯು ಬಿಳಿನಾಮಧಾರಿ ಗಂಡು ಕರುವಿಗೆ ಜನ್ಮ ನೀಡಿದೆ. ಪರ್ಯಾಯ ಶ್ರೀಈಶಪ್ರಿಯ ತೀರ್ಥ ಶ್ರೀಪಾದರ ಅಚ್ಚುಮೆಚ್ಚಿನ ಮಣ್ಣಿನ ಬಣ್ಣವನ್ನೇ ಈ ಕರು ಹೊಂದಿದೆ. ಶ್ರೀಗಳು ಈ ಕರುವಿಗೆ ಶ್ರೀರಾಮ ಎಂದು ನಾಮಕರಣ ಮಾಡಿದ್ದಾರೆ. ಅಯೋಧ್ಯೆಯಲ್ಲಿ ಪ್ರಧಾನಿ ಮೋದಿ ರಾಮಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಿದ್ದಾರೆ. ಶತಮಾನಗಳ ಕನಸು ನನಸಾಗಿದ್ದು ದೇಶದಲ್ಲಿ ಜನರು ಸಹ ಸಂಭ್ರಮಿಸುತ್ತಿದ್ದಾರೆ. ಸುಪ್ರೀಂ ಕೋರ್ಟ್ ಮಹತ್ವದ ತೀರ್ಪಿನ ನಂತರ ರಾಮಮಂದಿರ ನಿರ್ಮಾಣಕ್ಕೆ ಹಸಿರು ನಿಶಾನೆ ಸಿಕ್ಕಿತ್ತು. Ram Mandir in ayodhya Bhumi puja Cow gives birth to calf in Udupi Sri Krishna Matha ರಾಮಮಂದಿರ ಶಿಲಾನ್ಯಾಸನದ ವೇಳೆ ಉಡುಪಿ ಮಠದಲ್ಲಿ ಕರು ಹಾಕಿದ ಹಸು