ಸಿದ್ಧಾರೂಢ ಮಠದಲ್ಲಿ ಸರಳವಾಗಿ ಜರುಗಿದ ತೆಪ್ಪೋತ್ಸವ

First Published | Aug 4, 2020, 9:33 PM IST

ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ಮಂಗಳವಾರ ಸರಳವಾಗಿ ತೆಪ್ಪೋತ್ಸವ (ಜಲ ರಥೋತ್ಸವ) ಜರುಗಿತು. ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯುತ್ತಿದ್ದ ತೆಪ್ಪೋತ್ಸವಕ್ಕೆ ಕೊರೋನಾ ಭೀತಿ ಹಿನ್ನೆನೆಯಲ್ಲಿ ಈ ಬಾರಿ ಸರಳವಾಗಿ ಆಚರಣೆ ಮಾಡಲಾಯ್ತು. ಅದರ ಒಂದು ಫೋಟೋ ಝಲಕ್ ಇಲ್ಲಿದೆ.

ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ಸರಳವಾಗಿ ಜರುಗಿದ ತೆಪ್ಪೋತ್ಸವ
ಸಂಜೆ ಭಕ್ತರು ಜಾಸ್ತಿ ಸೇರುತ್ತಾರೆಂದು ಮಧ್ಯಾಹ್ನವೇ ತೆಪ್ಪೋತ್ಸವ
Tap to resize

ಕೊರೋನಾ ಹಿನ್ನೆಲೆಯಲ್ಲಿ ಜನರನ್ನು ಸೇರಿಸಬಾರದೆಂಬ ಉದ್ದೇಶದಿಂದ ‌ಸರಳವಾಗಿ ಆಚರಣೆ
117 ವರ್ಷದಿಂದ ‌ಮಠದಲ್ಲಿ ನಡೆಯುತ್ತಿರುವ ತೆಪ್ಪೋತ್ಸವ
ಆದರೂ ಜನರು ಗಂಪು ಗುಂಪಾಗಿ ಸೇರಿದ್ದರು.
ಸಿದ್ಧಾರೂಢ ಮಠದ ಟ್ರಸ್ಟ್‌ ಕಮಿಟಿಯ ವತಿಯಿಂದ ನಡೆಯುವ ಪ್ರತಿ ವರ್ಷ ತೆಪ್ಪೋತ್ಸವ ನೋಡಲು ಆಗಮಿಸುತ್ತಿದ್ದ ಲಕ್ಷಾಂತರ ಭಕ್ತರು ರಥೋತ್ಸವಕ್ಕೆ ಉತ್ತತ್ತಿ, ಬಾಳೆಹಣ್ಣು, ಖರ್ಜುರ ಹಾಗೂ ಹೂವು ಹಾರಿಸಿ ಭಕ್ತಿ ಮೆರೆಯುತ್ತಿದ್ದರು. ಆದ್ರೆ, ಈ ಬಾರಿ ಇರಲಿಲ್ಲ,
ಮಾಸ್ಕ್ ಧರಿಸಿಕೊಂಡು ತೆಪ್ಪೋತ್ಸವ (ಜಲ ರಥೋತ್ಸವ)ದಲ್ಲಿ ಪಾಲ್ಗೊಂಡ ಮಹಿಳೆಯರು

Latest Videos

click me!