Bagalakot: ಬರೋಬ್ಬರಿ 14 ಲಕ್ಷ ರೂ.ಗೆ ಮಾರಾಟವಾದ ಬಲಭೀಮ ಎತ್ತು: ವಿಶೇಷತೆಗಳೇನು?
First Published | Jan 28, 2023, 5:40 PM ISTಬಾಗಲಕೋಟೆ (ಜ.28): ಸಾಮಾನ್ಯವಾಗಿ ಹಸು, ಹೋರಿ ಅಥವಾ ಎತ್ತುಗಳು 20 ರಿಂದ 50 ಸಾವಿರ ರೂ.ಗೆ ಮಾರಾಟವಾಗುತ್ತವೆ. ಇನ್ನು ಬಲಿಷ್ಠ ಮತ್ತು ಭಾರಿ ವಿಶೇಷವಾದ ಎತ್ತುಗಳು ಇದ್ದರೆ 1 ರಿಂದ 2 ಲಕ್ಷ ರೂ. ಬೆಲೆ ಬಾಳಬಹುದು. ಅದಕ್ಕೂ ಮಿಗಿಲೆಂದರೆ 10 ಲಕ್ಷ ರೂ.ಗೆ ಎತ್ತು ಮಾರಾಟ ಆಗಿರಬಹುದು. ಆದರೆ, ಬಾಗಲಕೋಟೆಯಲ್ಲಿ ಒಂದು ಎತ್ತು (ಹೋರಿ) ಬರೋಬ್ಬರಿ 14 ಲಕ್ಷ ರೂ.ಗೆ ಮಾರಾಟವಾಗಿದೆ. ಈ ಮೂಲಕ ಹೈನುಗಾರಿಕೆ ಹಾಗೂ ಬೇಸಾಯ ಮಾಡುವ ಎಲ್ಲ ರೈತರ ಹುಬ್ಬೇರಿಸುವಂತೆ ಮಾಡಿದೆ. ಇಲ್ಲಿದೆ ನೋಡಿ ಆ ಎತ್ತಿನ ಸುಂದರ ಚಿತ್ರಗಳು.