ಚಿಕ್ಕಮಗಳೂರು: ಕಾಡಂಚಿನ ಗ್ರಾಮಗಳಿಗೆ ವಾಹನ ವ್ಯವಸ್ಥೆ, ಮತದಾನಕ್ಕೆ ಇನ್ನು ಕಾಡುಪ್ರಾಣಿಗಳ ಭಯವಿಲ್ಲ

First Published | Apr 7, 2024, 9:06 PM IST

ಮಲೆನಾಡಿನ ಅರಣ್ಯದಂಚಿನ ಗ್ರಾಮಗಳಿಂದ ಮತದಾರರನ್ನು ಮತದಾನದ ಕೇಂದ್ರಕ್ಕೆ ಕರೆತರಲು ಉಚಿತ ವಾಹನದ ವ್ಯವಸ್ಥೆ  ಮಾಡಲಾಗಿದೆ. ಅಭಯಾರಣ್ಯದ ಸುತ್ತಮುತ್ತಲ್ಲಿನ ಜನರಿಗೆ ಮಲೆನಾಡಿನ ಕಾಡು ಪ್ರಾಣಿಗಳು ಭೀತಿಯಿಂದ ದೂರ ಉಳಿಯುವುದರ ಜೊತೆಗೆ ಮತದಾನ ಪ್ರಮಾನ ಹೆಚ್ಚಿಸಲು ಚಿಕ್ಕಮಗಳೂರು ಜಿಲ್ಲಾಡಳಿತ ಪ್ಲಾನ್ ಮಾಡಿದೆ.

ಮೊದಲ ಹಂತದ ಲೋಕಸಭಾ ಚುನಾವಣೆಗೆ ಇನ್ನು ಕೆಲ ದಿನಗಳು ಬಾಕಿ ಇದೆ. ಚುನಾವಣಾ ರಣಕಣದಲ್ಲಿ ಅಭ್ಯರ್ಥಿಗಳು ಮತದಾರರನ್ನು ಸೆಳೆಯುಲು ಕಸರತ್ತು ಆರಂಭಿಸಿದ್ದಾರೆ. ಇತ್ತ ಚುನಾವಣಾ ಆಯೋಗದ ಸೂಚನೆಯಂತೆ ಮತದಾನದ ಪ್ರಮಾಣ ಹೆಚ್ಚಿಸಲು ಜಿಲ್ಲಾಡಳಿತ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ, ಇದರ ನಡುವೆ ಚಿಕ್ಕಮಗಳೂರು ಜಿಲ್ಲಾಡಳಿತ ಮತದಾನದ ಪ್ರಮಾಣ ಹೆಚ್ಚಿಸಲು ಉಚಿತ ವಾಹನದ ವ್ಯವಸ್ಥೆಯನ್ನು ಕಲ್ಪಿಸಿದೆ. 
 

ಭದ್ರಾ ಹುಲಿಸಂರಕ್ಷಿತಾರಣ್ಯದ ಸುತ್ತಮುತ್ತಲಿನಲ್ಲಿರೋ ಗ್ರಾಮಗಳು ಸೇರಿದಂತೆ ಮಲೆನಾಡಿನ ಗ್ರಾಮಗಳಲ್ಲಿ ಕಾಡಾನೆ ಸೇರಿದಂತೆ ಇತರೆ ಪ್ರಾಣಿಗಳ ಕಾಟವಿದೆ. ಈಗಾಗಲೇ ಕಾಡಾನೆ ದಾಳಿಯಿಂದ ಜನರ ಪ್ರಾಣ ಕಳೆದುಕೊಂಡಿದ್ದಾರೆ. ನಿತ್ಯವೂ ಮಲೆನಾಡಿನ ಜನರಿಗೆ ಕಾಡು ಪ್ರಾಣಿಗಳು ಭಯವಿದೆ. ಈ ಹಿನ್ನೆಲೆಯಲ್ಲಿ ಮತದಾನದ ದಿನಂದು ಜನರು ಭಯ ಮುಕ್ತವಾಗಿ ಮತದಾನ ಮಾಡುವ ಉದ್ದೇಶದಿಂದ ಜಿಲ್ಲಾಡಳಿತ ಅಲೋಚನೆ ಮಾಡಿದೆ. ಉಚಿತ ವಾಹನವನ್ನ ಒದಗಿಸಿರೋ ಜಿಲ್ಲಾಡಳಿತ. ಮಲೆನಾಡಿನಲ್ಲಿರೋ ಶೃಂಗೇರಿ,ಕಳಸ, ಮೂಡಿಗೆರೆ ತಾಲೂಕಿನ ಕುಗ್ರಾಮಗಳಿಗೂ ಉಚಿತ ವಾಹನಗಳ ಸೌಕರ್ಯ ಕಲ್ಪಿಸೋಕೆ ಮುಂದಾಗಿದೆ. 
 

Latest Videos


ಚಿಕ್ಕಮಗಳೂರಿನ ಭದ್ರ ಹುಲಿಸಂರಕ್ಷಿತಾರಣ್ಯ ಅನ್ನೋ ಅಭಯಾರಣ್ಯವಿದ್ರೆ ಇನ್ನುಳಿದಂತೆ ಮೂಡಿಗೆರೆ, ಶೃಂಗೇರಿ ವಿಧಾನ ಸಭಾಕ್ಷೇತ್ರದಲ್ಲಂತೂ ಕುದುರೆಮುಖ ರಾಷ್ಟ್ರೀಯ ಉದ್ಯಾನವನವಿದೆ. ಇಲ್ಲಿ ಒಂದೂರಿನಿಂದ ಒಂದೂರಿಗೆ ಕಿಲೋಮೀಟರ್ ಗಳೇ ಹೋಗಬೇಕು. ಮತಗಟ್ಟೆ ಎಲ್ಲೋ ಊರೇ ಎಲ್ಲೋ ಇರೋದು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಈ ಪ್ರದೇಶಗಳಲ್ಲಿ ಲೋಕಸಭಾ ಚುನಾವಣೆಯ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ ಮತದಾನ ಪ್ರಮಾಣ ಹೆಚ್ಚಿಸಲು ಪ್ಲಾನ್ ರೂಪಿಸಿದೆ. 
 

ಈ ಹಿಂದಿನ ಕಹಿನೆನಪಿನ ಭಯವಿಲ್ಲದಂತೆ, ಮತಗಟ್ಟೆಗಳು ದೂರ ಅನ್ನೋದನ್ನ ಮರೆತು ಮತ ಹಾಕೋಕಾದ್ರೂ ಬರ್ಲಿ ಅಂತಾ ಆಯಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಉಚಿತ ವಾಹನವನ್ನ ಕಲ್ಪಿಸೋಕೆ ಮುಂದಾಗಿದೆ.ಒಟ್ಟಾರೆ ಕಾಫಿ ನಾಡಿನ ಕುಗ್ರಾಮ ಅಭಯಾರಣ್ಯದ ಸುತ್ತಮುತ್ತಲಿನಲ್ಲಿರೋ ಜನ್ರು ಭಯ, ಮುಕ್ತವಾಗಿ ಮತದಾನಕ್ಕೆ ಬರ್ಲಿ ಅಂತಾ ಉಚಿತ ವಾಹನದ ಸೌಕರ್ಯ ಕಲ್ಪಿಸಿದೆ.  ಅನಿವಾರ್ಯದಿಂದ ಅಮಿಷೆಗೆ ಒಳಗಾಗಿ ಬೇರೆ ಪಕ್ಷದ ವಾಹನ ಬಳಸದೇ ಉಚಿತ ವಾಹನದಲ್ಲಿಯೇ ಬಂದು ಮತದಾನ ಮಾಡ್ಲಿ. ಈ ಬಾರಿಯಾದ್ರೂ ಮಲೆನಾಡಿನ ಕುಗ್ರಾಮದಲ್ಲಿ ಮತ ಪ್ರಕ್ರಿಯೆ ಹೆಚ್ಚಾಗಲಿ ಎನ್ನುವುದು ಜಿಲ್ಲಾಡಳಿತದ ಪ್ಲಾನ್ .

- ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

click me!