ಸುಮಾರು 30 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಭದ್ರಾ ನದಿ ಸಂಪೂರ್ಣ ಬತ್ತಿ ಹೋಗಿದ್ದು, ನದಿ ಪಾತ್ರವು ಮೈದಾನದಂತಾಗಿದೆ. ಮುಂಗಾರು ಮಳೆ ಕೈಕೊಟ್ಟಿದ್ದರಿಂದ, ತುಂಬಿ ಹರಿಯಬೇಕಿದ್ದ ನದಿಯಲ್ಲಿ ಯುವಕರು ವಾಲಿಬಾಲ್ ಆಡುತ್ತಿದ್ದು, ಇದು ತೀವ್ರ ಆತಂಕಕ್ಕೆ ಕಾರಣವಾಗಿದೆ.
ಬರೋಬ್ಬರಿ 30 ವರ್ಷಗಳ ಬಳಿಕ ಭದ್ರಾನದಿ ಖಾಲಿಯಾಗಿದ್ದು, ಸ್ಥಳೀಯರು ನದಿತೀರದ ಪ್ರದೇಶದಲ್ಲಿ ವಾಲಿಬಾಲ್ ಆಡುತ್ತಿದ್ದಾರೆ. ಸಾಮಾನ್ಯವಾಗಿ ಈ ವೇಳೆಗಾಗಲೇ ಮುಂಗಾರು ಮಳೆಯಿಂದ ಭದ್ರಾ ನದಿ ತುಂಬಿ ಹರಿಯಲು ಆರಂಭಿಸುತ್ತಿತ್ತು. ಜೂನ್ ತಿಂಗಳ ಮೂರನೇ ವಾರಕ್ಕೂ ಕಾಲಿಟ್ರೂ ನದಿಯಲ್ಲಿನ ನೀರಿನ ಪ್ರಮಾಣ ಇಳಿಮುಖವಾಗುತ್ತಿರೋದು ಆತಂಕಕ್ಕೆ ಕಾರಣವಾಗಿದೆ.
25
ಮೈದಾನದಂತೆ ಕಾಣಿಸುತ್ತಿದೆ ನದಿ ಪ್ರದೇಶ
30 ವರ್ಷಗಳ ಬಳಿಕ ನದಿಯ ಕೆಳಭಾಗದ ಕಲ್ಲು-ಬಂಡೆಗಳನ್ನು ಕಾಣುತ್ತಿದ್ದೇವೆ ಎಂದು ಸ್ಥಳೀಯರು ಅಚ್ಚರಿ ಜೊತೆ ಆತಂಕವನ್ನು ವ್ಯಕ್ತಪಡಿಸುತ್ತಿದ್ದಾರೆ. ನದಿಗೆ ಕಾಲಿಡಲು ಭಯ ಪಡುತ್ತಿದ್ದ ಜಾಗದಲ್ಲಿಂದು ಯುವಕರು ವಾಲಿಬಾಲ್ ಆಡುತ್ತಿದ್ದಾರೆ. ಮುಂಗಾರು ಕೊರತೆಯಿಂದ ನೀರಿಲ್ಲದೆ ಕ್ರಿಕೆಟ್ ಮೈದಾನದಂತೆ ನದಿ ಪ್ರದೇಶ ಕಾಣಿಸುತ್ತಿದೆ.
35
ನೀರಿನ ಮಟ್ಟ ಸಂಪೂರ್ಣ ಕುಸಿತ
ಬಾಳೆಹೊನ್ನೂರು ಬಳಿಯ ಸೇತುವೆ ಬಳಿ ನೀರಿನ ಮಟ್ಟ ಸಂಪೂರ್ಣ ಕುಸಿತವಾಗಿದ್ದು, ಜೂನ್ ತಿಂಗಳಲ್ಲಿ ಪ್ರವಾಹದ ಹಂತಕ್ಕೆ ತಲುಪುತ್ತಿದ್ದ ನದಿಯಲ್ಲಿಂದು ಬರದ ಛಾಯೆ ಆವರಿಸಿದೆ. ಒಂದು ವೇಳೆ ಮುಂದಿನ ದಿನಗಳಲ್ಲಿ ಮಳೆ ಬಾರದಿದ್ದರೆ ನೀರು ಸಂಪೂರ್ಣ ಬತ್ತಿ ಹೋಗುವ ಭೀತಿ ಎದುರಾಗಿದೆ.
ಈ ಬಾರಿಗೆ ಮೇ 29ರ ವೇಳೆಗೆ ಕೇರಳಕ್ಕೆ ಮುಂಗಾರು ಪ್ರವೇಶಿಸುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ನೀಡಿತ್ತಾದರೂ, ಜೂ.4ಕ್ಕೆ ಅಧಿಕೃತವಾಗಿ ಕೇರಳಕ್ಕೆ ಮುಂಗಾರು ಪ್ರವೇಶಿಸಿತ್ತು. ಬಳಿಕದಲ್ಲಿ ಕರಾವಳಿ ಕರ್ನಾಟದ ಮೂಲಕ ರಾಜ್ಯಕ್ಕೆ ಮುಂಗಾರು ಪ್ರವೇಶಿಸಿತ್ತು. ಆದರೆ ಮಳೆಗಾಲ ಆರಂಭದಲ್ಲೇ ಮುಂಗಾರು ದುರ್ಬಲಗೊಂಡಿತ್ತು.
55
ಮಳೆಗಾಲದಲ್ಲೂ ಬೇಸಿಗೆ ಹವೆ
ಈ ಬಾರಿ ಪೂರ್ವಮುಂಗಾರು ಮಳೆ ರಾಜ್ಯದಲ್ಲಿ ಅಬ್ಬರಿಸಿತ್ತು. ಆದ್ರೆ ಮುಂಗಾರುಮಳೆ ಮಾತ್ರ ದಿನದಿಂದ ದಿನಕ್ಕೆ ಕಾಣೆಯಾಗುತ್ತದೆ. ಮಳೆಯ ಕೊರತೆಯಿಂದ ಬಿತ್ತನೆ ಪ್ರಮಾಣವೂ ರಾಜ್ಯದಲ್ಲಿ ಇಳಿಕೆಯಾಗಿದೆ. ದಕ್ಷಿಣ ಕನ್ನಡ ಸೇರಿದಂತೆ ಉತ್ತರ ಒಳನಾಡು ಪ್ರದೇಶದಲ್ಲಿ ಬೇಸಿಗೆ ವಾತಾವರಣ ನಿರ್ಮಾಣವಾಗಿದೆ.