4.0 ಲಾಕ್‌ಡೌನ್‌ಗೆ ದಿನಗಣನೆ: ಇತ್ತ ರಸ್ತೆ ಬಂದ್‌ಗೆ ಚಾಲನೆ..!

First Published | May 12, 2020, 10:29 PM IST

ದೇಶದಲ್ಲಿ ಸದ್ಯ ಮೂರನೇ ಹಂತದ ಲಾಕ್​ಡೌನ್​ ನಡೆಯುತ್ತಿದ್ದು, ಮೇ 17ಕ್ಕೆ ಅದರ ಅವಧಿ ಮುಕ್ತಾಯವಾಗಲಿದೆ. ಆದರೆ ದೇಶದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಅತ್ತ ನಾಲ್ಕನೇ ಹಂತದ ಲಾಕ್‌ಡೌನ್ ಘೊಷಣೆಯಾಗುತ್ತಿದ್ದಂತೆಯೇ, ಇತ್ತ ಕೊರೋನಾಗೆ ಎದುರಿ ರಸ್ತೆ ಬಂದ್‌ಗೆ ಪ್ರಕ್ರಿಯೆಗಳು ಶುರುವಾಗಿದೆ.

ಕೊರೋನಾ ಭಯಕ್ಕೆ ಜಿಲ್ಲೆಯ ಪ್ರವೇಶ ರಸ್ತೆಗಳನ್ನು ಕಲ್ಲು-ಬಂಡೆಗಳಿಂದ ಬಂದ್ ಮಾಡಲಾಗುತ್ತಿದೆ.
ಮೊನ್ನೆ ಶಿವಮೊಗ್ಗ, ಈಗ ಹಾಸನದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಕಾಣಿಸಿಕೊಳ್ಳುತ್ತಿದ್ದಂತೆ ಚಿಕ್ಕಮಗಳೂರಿನಲ್ಲಿ ಆತಂಕ ಶುರುವಾಗಿದೆ.
Tap to resize

ಹಾಸನದಲ್ಲಿ ಐದು ಪಾಸಿಟಿವ್ ಕೇಸ್ ಕಾಣಿಸಿಕೊಳ್ಳುತ್ತಿದ್ದಂತೆ ಕಾಫಿನಾಡಿನ ಮಲೆನಾಡು ಭಾಗದಲ್ಲಿ ಹಾಸನಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗಗಳನ್ನು ಮತ್ತೆ ಬಂದ್ ಮಾಡುತ್ತಿದ್ದಾರೆ.
ಮೂಡಿಗೆರೆ ತಾಲೂಕಿನ ಗೋಣಿಬೀಡು ಹೋಬಳಿಯ ಗ್ರಾಮೀಣ ಭಾಗದಿಂದ ಸಕಲೇಶಪುರ ಮಾರ್ಗಕ್ಕೆ ಸಂಪರ್ಕ ಕಲ್ಪಿಸುವ ಮರಗುಂದ-ದೇವಾಲಕೆರೆಯ ಜಪಾವತಿ ಸೇತುವೆ ಮೇಲೆ ಬೃಹತ್ ಬಂಡೆಕಲ್ಲುಗಳನ್ನು ರಸ್ತೆಗೆ ಅಡ್ಡಲಾಗಿ ಹಾಕಿ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಿದ್ದಾರೆ.
ರಸ್ತೆಗಳಿಗೆ ದೊಡ್ಡ-ದೊಡ್ಡ ಕಲ್ಲುಗಳನ್ನಿಟ್ಟು ಹಾಸನ-ಚಿಕ್ಕಮಗಳೂರು ಸಂಚಾರ ಬಂದ್ ಮಾಡಲಾಗಿದೆ.
ಗ್ರೀನ್ ಝೋನ್ ಕಾಫಿನಾಡು ಹಸಿರು ಜಿಲ್ಲೆಯಾಗೇ ಉಳಿದುಕೊಳ್ಳಲಿ ಎಂದು ಹಳ್ಳಿಗರು ಈ ನಿರ್ಧಾರಕ್ಕೆ ಮುಂದಾಗಿದ್ದಾರೆ.
ಈಗಾಗಲೇ ಸರ್ಕಾರ ಕೂಡ ಲಾಕ್ ಡೌನ್ ಸಡಿಲಿಕೆ ಮಾಡಿರುವುದರಿಂದ ಹೊರಜಿಲ್ಲೆಗಳಿಗೆ ಹೋಗಿ ಬರುವವರ ಸಂಖ್ಯೆ ಕೂಡ ಗಣನೀಯವಾಗಿ ಹೆಚ್ಚಾಗಿದೆ. ಹಾಗಾಗಿ, ಮಲೆನಾಡಿಗರೇ ಸ್ವಯಂ ಪ್ರೇರಿತರಾಗಿ ರಸ್ತೆಗಳನ್ನು ಬಂದ್ ಮಾಡಿ ಕೊರೊನಾ ಮುಕ್ತ ಜಿಲ್ಲೆಯನ್ನಾಗಿಸಲು ಮುಂದಾಗಿದ್ದಾರೆ.
ಒಟ್ಟಾರೆ ಅಕ್ಕ-ಪಕ್ಕ ಜಿಲ್ಲೆಗಳಾದ ಹಾಸನ ಮತ್ತು ಚಿಕ್ಕಮಗಳೂರು ಮಾರ್ಗವಾಗಿ ಯಾರೂ ಹೋಗುವಂತಿಲ್ಲ, ಬರುವಂತಿಲ್ಲ.

Latest Videos

click me!