ಗಡಿ ಕಾಯುತ್ತಲೇ ವೀರ ಯೋಧನ ಹೃದಯವಿದ್ರಾವಕ ಅಂತ್ಯ; ಸ್ವಗ್ರಾಮಕ್ಕೆ ಬಂದ ಪಾರ್ಥಿವ ಶರೀರ

Published : Jul 06, 2025, 03:41 PM IST

ಗ್ಯಾಂಗ್ಟೊಕ್ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಧ ಗಂಗಾಧರಪ್ಪ ಹೃದಯಾಘಾತದಿಂದ ವೀರಮರಣ. ಚಿಕ್ಕಬಳ್ಳಾಪುರ ಜಿಲ್ಲೆಯ ತೊಂಡೇಭಾವಿ ಗ್ರಾಮದಲ್ಲಿ ಇಂದು ಸಂಜೆ ಸೇನಾ ಗೌರವಗಳೊಂದಿಗೆ ಅಂತ್ಯಕ್ರಿಯೆ.

PREV
15

ಚಿಕ್ಕಬಳ್ಳಾಪುರ (ಜು.06): ಪಶ್ಚಿಮ ಬಂಗಾಳದ ಗ್ಯಾಂಗ್ಟೊಕ್ ಗಡಿ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಹೃದಯಾಘಾತದಿಂದ ಯೋಧ ಗಂಗಾಧರಪ್ಪ (54) ವೀರಮರಣ ಹೊಂದಿದ ಹೃದಯವಿದ್ರಾವಕ ಘಟನೆ ನಡೆದಿದೆ. ಕಳೆದ ಮೂರು ದಶಕಗಳ ಕಾಲ ದೇಶದ ಗಡಿಯನ್ನು ಕಾಯುತ್ತಿದ್ದ ಈ ವೀರ ಯೋಧನು, ಇದೀಗ ಪಾರ್ಥಿವ ಶರೀರವಾಗಿ ಜನ್ಮಭೂಮಿಗೆ ಮರಳಿದ್ದಾರೆ.

25

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ತೊಂಡೇಭಾವಿ ಗ್ರಾಮದ ನಿವಾಸಿಯಾದ ಗಂಗಾಧರಪ್ಪ ಅವರು ಇಂಡೋ ಟಿಬೇಟಿಯನ್ ಬಾರ್ಡರ್ ಪೋರ್ಸ್‌ನಲ್ಲಿ ಹವಾಲ್ದಾರ್ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಶನಿವಾರ ಮುಂಜಾನೆ ಕರ್ತವ್ಯದ ವೇಳೆ ಹೃದಯಾಘಾತ ಸಂಭವಿಸಿ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

35

ಮೃತ ಯೋಧನ ಪಾರ್ಥಿವ ಶರೀರ ಇಂದು ಇಂಡಿಗೋ ವಿಮಾನದಲ್ಲಿ ಪಶ್ಚಿಮ ಬಂಗಾಳದಿಂದ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (KIA) ಆಗಮಿಸಿತು. ವಿಮಾನ ನಿಲ್ದಾಣದಲ್ಲಿ ಸೈನಿಕರು ಮತ್ತು ಅಧಿಕಾರಿಗಳಿಂದ ಪೂರ್ಣ ಗೌರವದೊಂದಿಗೆ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು.

45

ಇತ್ತೀಚೆಗೆ ಕರ್ತವ್ಯದಲ್ಲಿಯೇ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವ ಯೋಧರ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕಕಾರಿ ವಿಚಾರವಾಗಿದೆ. ಪಾರ್ಥಿವ ಶರೀರವನ್ನು ವಿಮಾನ ನಿಲ್ದಾಣದಿಂದ ತವರೂರಾದ ತೊಂಡೇಭಾವಿ ಗ್ರಾಮಕ್ಕೆ ತರಲಾಗುತ್ತಿದೆ. ಇಂದು ಸಂಜೆ ಸ್ವಗ್ರಾಮದಲ್ಲಿ ಸೇನಾ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.

55

ಹೆಚ್ಚಿನ ವಿವರಗಳು:

  • ಗಂಗಾಧರಪ್ಪ ಅವರು 30 ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿ ರಾಷ್ಟ್ರಭಕ್ತಿಯ ಸಾಕ್ಷಾತ್ಕಾರ ನೀಡಿದ ವ್ಯಕ್ತಿ.
  • ಗ್ಯಾಂಗ್ಟೊಕ್ ಗಡಿಭಾಗದಲ್ಲಿ ಗಡಿರಕ್ಷಣೆಯಲ್ಲಿ ತೊಡಗಿದ್ದ ವೇಳೆ ಸಾವಿಗೆ ಕಾರಣವಾಯಿತು.
  • ಐಟಿಬಿಪಿ ಪಡೆ ತಕ್ಷಣವೇ ಶವ ಸಾಗಣೆ ಪ್ರಕ್ರಿಯೆ ನಡೆಸಿದ್ದು, ಕುಟುಂಬಕ್ಕೆ ಅಗತ್ಯ ಸಾಂತ್ವನವನ್ನು ಒದಗಿಸುತ್ತಿದೆ.
  • ಈ ದುಃಖದ ಸಂದರ್ಭ ಕುಟುಂಬದವರಾಗಲಿ, ಗ್ರಾಮಸ್ಥರಾಗಲಿ ಎಲ್ಲರೂ ಶೋಕದಲ್ಲಿ ಮುಳುಗಿದ್ದು, ಈ ವೀರ ಯೋಧನ ಕೊಡುಗೆಯನ್ನು ನೆನೆದು ಗೌರವಿಸುತ್ತಿದ್ದಾರೆ.
Read more Photos on
click me!

Recommended Stories