ಹೊಸ ಕಾರಿಗೆ ಮಾದಪ್ಪನ ಪೂಜೆ… ಹಿಂದಿರುಗುವ ದಾರಿಯಲ್ಲೇ ಕಾರು ಪಲ್ಟಿ! ಭಕ್ತರು ಶಾಕ್!

Published : May 14, 2026, 10:31 AM IST

verturns while returning from Mahadeshwara temple ಹೊಸ ಕಾರು ಖರೀದಿಸಿದ ಖುಷಿ… ದೇವರ ದರ್ಶನ ಮಾಡಿಕೊಂಡು ಶುಭಾರಂಭ ಮಾಡೋಣ ಅನ್ನೋ ಭಕ್ತಿ… ಆದರೆ ಮನೆಗೆ ಹಿಂದಿರುಗುವ ದಾರಿಯಲ್ಲೇ ನಡೆದ ಘಟನೆ ನೋಡಿ ಎಲ್ಲರೂ ಬೆಚ್ಚಿಬಿದ್ದಿದ್ದಾರೆ

PREV
13
ಹೊಸ ಕಾರಿಗೆ ಪೂಜೆ, ಮನೆ ಸೇರುವ ಮುನ್ನವೇ ಪಲ್ಟಿ!

ಹೊಸ ಕಾರು ಖರೀದಿಸಿದ ಖುಷಿ… ದೇವರ ದರ್ಶನ ಮಾಡಿಕೊಂಡು ಶುಭಾರಂಭ ಮಾಡೋಣ ಅನ್ನೋ ಭಕ್ತಿ… ಆದರೆ ಮನೆಗೆ ಹಿಂದಿರುಗುವ ದಾರಿಯಲ್ಲೇ ನಡೆದ ಘಟನೆ ನೋಡಿ ಎಲ್ಲರೂ ಬೆಚ್ಚಿಬಿದ್ದಿದ್ದಾರೆ.

ಮಂಡ್ಯ ಮೂಲದ ಭಕ್ತರು ಹೊಸ ಕಾರು ಖರೀದಿಸಿದ್ದರು. ಮೊದಲು ಮಾದಪ್ಪನ ಆಶೀರ್ವಾದ ಪಡೆದು ಬಳಿಕ ಕಾರು ಓಡಿಸೋಣ” ಅಂತಾ ಚಾಮರಾಜನಗರದ ಮಾದಪ್ಪನ ಬೆಟ್ಟಕ್ಕೆ ಕುಟುಂಬ ಸಮೇತ ಬಂದಿದ್ದರು.

23
ಹೊಸ ಕಾರಿನ ಖುಷಿ ಕ್ಷಣಾರ್ಧದಲ್ಲಿ ಕಮರಿಹೋಯ್ತ!

ಹೊಸ ಕಾರೇ ಕ್ಷಣಾರ್ಧದಲ್ಲಿ ರಸ್ತೆಯ ಬದಿಗೆ ಉರುಳಿ ಬಿದ್ದ ದೃಶ್ಯ ನೋಡಿ ಸ್ಥಳೀಯರು ಕೂಡ ಬೆಚ್ಚಿಬಿದ್ದರು. ಕಾರಿನ ಮುಂಭಾಗ ಜಖಂಗೊಂಡಿದ್ದರೂ, ಕಾರಿನಲ್ಲಿದ್ದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ದೇವರ ದರ್ಶನಕ್ಕೆ ಬಂದಿದ್ದೇವೆ… ಇದೇ ರೀತಿ ಆಗುತ್ತೆ ಅಂತ ಯಾರು ಊಹಿಸಿದ್ದರು? ಎಂದು ಕುಟುಂಬದವರು ಅಳಲು.

33
ದೇವರ ಕೃಪೆನಾ? ದುರಾದೃಷ್ಟವಾ? ಹೊಸ ಕಾರಿನ ಶುಭಾರಂಭವೇ ಶಾಕ್!

ಒಂದು ಕಡೆ 'ದೇವರ ಕೃಪೆಯಿಂದಲೇ ದೊಡ್ಡ ಅನಾಹುತ ತಪ್ಪಿತು' ಅನ್ನೋ ನೆಮ್ಮದಿ… ಇನ್ನೊಂದು ಕಡೆ 'ದರ್ಶನಕ್ಕೆ ಬಂದು ಇಂಥ ಅವಘಡ ಯಾಕಾಯಿತು?' ಅನ್ನೋ ಪ್ರಶ್ನೆ ಭಕ್ತರನ್ನು ಕಾಡುತ್ತಿದೆ.

ಘಟನೆ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read more Photos on
click me!

Recommended Stories