ಗೋವಾಗೆ ಯಶವಂತಪುರದಿಂದ ಡೈರೆಕ್ಟ್‌ ಟ್ರೈನ್, ಇಲ್ಲಿವೆ ಫೋಟೋಸ್

First Published | Mar 7, 2020, 1:10 PM IST

ಮಂಗಳೂರಿನ ಪಡೀಲ್‌ ಬೈಪಾಸ್‌ ಮಾರ್ಗ ಮೂಲಕ ಯಶವಂತಪುರ- ವಾಸ್ಕೊ ಹೊಸ ರಾತ್ರಿ ರೈಲು ಆರಂಭಿಸಲಾಗಿದ್ದು, ಸಿಎಂಬಿ.ಎಸ್‌ ಯಡಿಯೂರಪ್ಪ ಅವರು ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದ್ದಾರೆ. ಇಲ್ಲಿವೆ ಫೋಟೋಸ್

ಹೊಸ ರೈಲು ಯಶವಂತಪುರದಿಂದ ಸಂಜೆ 6.45ಕ್ಕೆ ಹೊರಡಲಿದ್ದು, ಮರುದಿನ ಬೆಳಗ್ಗೆ 8.25ಕ್ಕೆ ಕಾರವಾರ ತಲುಪಲಿದೆ. ಅಲ್ಲಿಂದ 8.30ಕ್ಕೆ ಹೊರಟು 10.30ಕ್ಕೆ ವಾಸ್ಕೋ ತಲುಪಲಿದೆ.
ಸಿಎಂ ಬಿ.ಎಸ್‌ ಯಡಿಯೂರಪ್ಪ, ಸಂಸದೆ ಶೊಭಾ ಕರಂದ್ಲಾಜೆ, ರೈಲ್ವೇ ಸಚಿವ ಸುರೇಶ್ ಅಂಗಡಿ ಸೇರಿ ಗಣ್ಯರು ರೈಲಿಗೆ ಹಸಿರು ನಿಶಾನೆ ತೋರಿಸಿದ್ದಾರೆ.
Tap to resize

ಅಲ್ಲಿಂದ ಅದೇ ರೈಲು ಸಂಜೆ 3.25ಕ್ಕೆ ಹೊರಟು 5.25ಕ್ಕೆ ಕಾರವಾರ ತಲುಪುವುದು. ಕಾರವಾರದಿಂದ ಸಂಜೆ 5.30ಕ್ಕೆ ಹೊರಟು ಮರುದಿನ ಬೆಳಗ್ಗೆ ಎಂಟು ಗಂಟೆಗೆ ಯಶವಂತಪುರ ತಲುಪಲಿದೆ.
ಹಳೆ ರೈಲು ಬೆಂಗಳೂರು- ಕಾರವಾರ ನಡುವಿನ ಪ್ರಯಾಣದ ಅವಧಿ 17 ಗಂಟೆ ಇದ್ದು, ಹೊಸ ರೈಲು ಈ ಅಂತರವನ್ನು 14.25 ಗಂಟೆಯಲ್ಲಿ ತಲುಪಬಹುದು ಎನ್ನುವುದು ಇಲಾಖೆ ಅಧಿಕಾರಿಗಳ ನಿರೀಕ್ಷೆ.
ಹೊಸ ರೈಲಿಗೆ ಚಿಕ್ಕಬಾಣಾವರ, ಚೆನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್‌, ಕಾಣಿಯೂರು, ಕಬಕ ಪುತ್ತೂರು, ಬಂಟ್ವಾಳ, ಸುರತ್ಕಲ್‌, ಮೂಲ್ಕಿ, ಉಡುಪಿ, ಬಾರ್ಕೂರು, ಕುಂದಾಪುರ, ಬೈಂದೂರು, ಭಟ್ಕಳ, ಮುರ್ಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರೋಡ್‌ ಮತ್ತು ಅಂಕೋಲದಲ್ಲಿ ನಿಲುಗಡೆ ಇರಲಿದೆ.
ಬೆಂಗಳೂರು ಮತ್ತು ಕಾರವಾರ ನಡುವೆ ಇದ್ದ ಹಳೆ ರೈಲು ಸಂಚಾರ ರದ್ದುಗೊಳಿಸಲಾಗಿದೆ.

Latest Videos

click me!