ಕೊರೋನಾ ವಿರುದ್ಧ ಹೋರಾಟ: ರಾಷ್ಟ್ರೋತ್ಥಾನದಿಂದ ರಕ್ತದಾನ ಶಿಬಿರ

First Published Apr 20, 2020, 4:12 PM IST

ರಾಷ್ಟ್ರೀಯ ಸ್ವಯಂ ಸೇವಕ ಸಂಘ ದೇಶದಲ್ಲೇ ಎಂಥ ವಿಪತ್ತೂ ಸಂಭವಿಸಿದರೂ ತಮ್ಮ ಜೀವದ ಹಂಗು ತೊರೆದು ಸೇವೆಗೆ ಮುಂದಾಗುತ್ತದೆ. ಇದೀಗ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹತ್ತು ಹಲವು ಸಂಘಟನೆಗಳು ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿವೆ.

ಕೊರೋನಾ ವಿರುದ್ಧ ಹೋರಾಟ: ರಾಷ್ಟ್ರೋತ್ಥಾನದಿಂದ ಬೆಂಗಳೂರಿನ ವಾಜರಹಳ್ಳಿಯಲ್ಲಿಹಮ್ಮಿಕೊಂಡಿದ್ದರಕ್ತದಾನ ಶಿಬಿರದಲ್ಲಿ ಚಿಕ್ಕಮಗಳೂರು-ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ರಕ್ತದಾನ ಮಾಡಿದರು.
undefined
ವಾಜರಹಳ್ಳಿಯ ಸುತ್ತಮುತ್ತ ಸ್ವಯಂ ಸೇವಕರು ರಕ್ತದಾನ ಮಾಡುವ ಮೂಲಕ ಕೊರೋನಾ ವಿರುದ್ಧದ ಹೋರಾಟಕ್ಕೆ ತಮ್ಮ ಕಾಣಿಕೆ ನೀಡಿದರು.
undefined
ಕೊರೋನಾ ವೈರಸ್‌ನಿಂದ ಎಲ್ಲೆಡೆ ಜೀವರಕ್ಷಕ ರಕ್ತದ ತೀವ್ರ ಕೊರತೆ ಸೃಷ್ಟಿಯಾಗಿದೆ.
undefined
ಆಗಾಗ ನಡೆಯುವ ರಕ್ತದಾನ ಶಿಬಿರಗಳೂ ನಡೆಯುತ್ತಿಲ್ಲ.
undefined
ಸ್ವಯಂ ಪ್ರೇರಿತ ದಾನಿಗಳು ರಕ್ತದಾನ ಕೇಂದ್ರಕ್ಕೆ ತಲುಪುವುದು ಈ ಸಂದರ್ಭದಲ್ಲಿ ಸುಲಭವಲ್ಲ. ಹಾಗಾಗಿ ಎಲ್ಲೆಡೆ ರಕ್ತದ ಶೇಖರಣೆಯೇ ಇಲ್ಲವಾಗಿದೆ.
undefined
ತಲಸೈಮಿಯಾ, ಪ್ರಸವ, ಅಪಘಾತದಂಥ ಪ್ರಕರಣಗಳು ಸೇರಿ ರಕ್ತ ಸಂಬಂಧಿ ರೋಗಿಗಳಿಗೆ ಅಗತ್ಯ ರಕ್ತ ಸಿಗದೇ ಪರದಾಡುವಂತಾಗಿದೆ.
undefined
ಈ ಎಲ್ಲ ಸಂಕಟವನ್ನು ಮನಗೊಂಡು ವಾಜರಹಳ್ಳಿ ಸುತ್ತ ಮುತ್ತಲಿನವರು ರಕ್ತ ದಾನ ಮಾಡಿದರು.
undefined
ಅಗತ್ಯ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದಲ್ಲದೇ, ಸೂಕ್ತ ವೈದ್ಯಕೀಯ ಪರೀಕ್ಷೆಯೊಂದಿಗೆ ರಕ್ತ ಪಡೆಯಲಾಯಿತು.
undefined
ಈ ಶಿಬಿರಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
undefined
ವಾಜರಹಳ್ಳಿ ಸುತ್ತಮುತ್ತಲಿನ ಗೃಹ ಕ್ಷೇಮಾಭಿವೃದ್ಧಿ ಸಂಘನಟೆಗಳು ಈ ಶಿಬಿರಕ್ಕೆ ಕೈ ಜೋಡಿಸಿದ್ದರು.
undefined
RSS ಮಾಡುತ್ತಿರುವ ಸೇವೆ ಸಂಕ್ಷಿಪ್ತ ವರದಿ ಇದು.
undefined
ನಮ್ಮ ನಡೆ ನವಭಾರತದೆಡೆ ಎಂಬ ಧ್ಯೇಯ ವಾಕ್ಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಮಿಷನ್ ದಿಶಾ ಸಹ ಈ ಕಾರ್ಯಕ್ರಮದಲ್ಲಿ ಕೈ ಜೋಡಿಸಿತ್ತು.
undefined
click me!