ಢಂ ಎಂದ ಟೈರ್, ಸುಂಯ್ ಅಂತ ಜಾರಿದ ಬೈಕ್; ಅಪ್ಪ-ಅಮ್ಮನ ಮಡಿಲಲ್ಲೇ ಪ್ರಾಣ ಬಿಟ್ಟ ಮಗಳು

Published : Apr 20, 2026, 12:41 PM IST

ಮೈಸೂರು ಜಿಲ್ಲೆಯ ನಂಜನಗೂಡು ಬಳಿ ಬೈಕ್ ಟಯರ್ ಬ್ಲಾಸ್ಟ್ ಆಗಿ ಸಂಭವಿಸಿದ ಅಪಘಾತದಲ್ಲಿ 16 ವರ್ಷದ ವಿದ್ಯಾರ್ಥಿನಿ ಸಿಂಚನಾ ಸಾವನ್ನಪ್ಪಿದ್ದಾಳೆ. ಒಂದೇ ಬೈಕ್‌ನಲ್ಲಿ ಹೆಲ್ಮೆಟ್ ಧರಿಸದೆ ನಾಲ್ವರು ಪ್ರಯಾಣಿಸುತ್ತಿದ್ದು, ಈ ದುರ್ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

PREV
15
16 ವರ್ಷದ ಬಾಲಕಿ ಸಾವು

ಚಲಿಸುತ್ತಿದ್ದಾಗಲೇ ಟಯರ್ ಬ್ಲಾಸ್ಟ್ ಆಗಿದ್ದರಿಂದ ಬೈಕ್ ಸ್ಕಿಡ್ ಆಗಿದ್ದು, 16 ವರ್ಷದ ವಿದ್ಯಾರ್ಥಿನಿ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಗಣೇಶಪುರ ಗ್ರಾಮದ ಬಳಿ ಅಪಘಾತ ಸಂಭವಿಸಿದೆ.

25
ಹೆಲ್ಮೆಟ್‌ ಸಹ ಧರಿಸಿರಲಿಲ್ಲ

ಮೃತ ವಿದ್ಯಾರ್ಥಿನಿಯನ್ನು ಸಿಂಚನಾ ಎಂದು ಗುರುತಿಸಲಾಗಿದೆ. ಸಿಂಚನಾ ನಂಜನಗೂಡು ತಾಲೂಕಿನ ಮಡುವಿನಹಳ್ಳಿಯ ಮಹದೇವಸ್ವಾಮಿ ಅವರ ಪುತ್ರಿಯಾಗಿದ್ದು, ತಂದೆಯೊಂದಿಗೆ ಬೈಕ್‌ನಲ್ಲಿ ಬರುತ್ತಿದ್ದಳು. ಬೈಕ್‌ನಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದು, ಯಾರೂ ಸಹ ಹೆಲ್ಮೆಟ್‌ ಸಹ ಧರಿಸಿರಲಿಲ್ಲ.

35
ಬೈಕ್‌ನಲ್ಲಿ ನಾಲ್ವರ ಪ್ರಯಾಣ

ಮಹದೇವಸ್ವಾಮಿ ಪತ್ನಿ, ಮಗ ಮತ್ತು ಮಗಳೊಂದಿಗೆ ಬೇಲದಕುಪ್ಪೆ ಮಹದೇಶ್ವರ ಸ್ವಾಮಿಯ ದೇವಾಲಯಕ್ಕೆ ತೆರಳಿ ಗ್ರಾಮಕ್ಕೆ ಹಿಂದಿರುಗುತ್ತಿದ್ದರು. ಬೈಕ್ ಚಲಿಸುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಟೈಯರ್ ಬ್ಲಾಸ್ಟ್ ಆಗಿದೆ. ಇದರಿಂದ ಬೈಕ್ ರಸ್ತೆ ಮೇಲೆ ವೇಗವಾಗಿ ಜಾರಿದ್ದು, ನಾಲ್ವರು ಕೆಳಗೆ ಬಿದ್ದಿದ್ದಾರೆ.

45
ಮೂವರಿಗೆ ಮುಂದುವರಿದ ಚಿಕಿತ್ಸೆ

ಅಪಘಾತದಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು. ನಾಲ್ವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗಮಧ್ಯೆ ಸಿಂಚನಾ ಉಸಿರು ಚೆಲ್ಲಿದ್ದಾಳೆ. ಸದ್ಯ ಮೂವರಿಗೆ ನಂಜನಗೂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಗುತ್ತಿದೆ. ಅಪಘಾತದ ದೃಶ್ಯಗಳು ರಸ್ತೆಬದಿಯ ಅಂಗಡಿಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಇದನ್ನೂ ಓದಿ: Bidar: ಬಿಸಿಲಾಘಾತಕ್ಕೆ ಕುಸಿದು ಸಾವನ್ನಪ್ಪಿದ 20 ವರ್ಷದ ಯುವಕ; ರಸ್ತೆಬದಿ ಪತ್ತೆಯಾದ ಶವ

55
ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಸಿಂಚನಾ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದಳು. ಟ್ರಾಫಿಕ್ ನಿಯಮ ಉಲ್ಲಂಘಿಸಿ ಒಂದೇ ಬೈಕ್‌ನಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದರು. ಒಂದು ವೇಳೆ ಹೆಲ್ಮೆಟ್ ಧರಿಸಿದ್ರೆ ಸಿಂಚನಾ ಪ್ರಾಣಾಪಾಯದಿಂದ ಪಾರಾಗುವ ಸಾಧ್ಯತೆಗಳಿದ್ದವು. ಈ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಸರಗೂರು ಕೊ*ಲೆಯ ರಹಸ್ಯ ಬಿಚ್ಚಿಟ್ರು ಎಸ್‌ಪಿ; ಅಮೃತಾ-ಸಿದ್ದೇಶ್ ಪ್ಲಾನ್ ಏನಾಗಿತ್ತು?

Read more Photos on
click me!

Recommended Stories