ಆಟೋದಲ್ಲಿ ಶವ ಪತ್ತೆ ಕೇಸ್ ಟ್ವಿಸ್ಟ್; ತಿಲಕನಗರ ಸೇಂಥಿಲ್ ಮೇಲೆ ಕಣ್ಣಾಕಿದ ಸಲ್ಮಾಗೆ ಸಾವಿನ ಮನೆ ತೋರಿಸಿದ ಸುಬ್ರಮಣಿ!

Published : Oct 27, 2025, 10:53 AM IST

ಬೆಂಗಳೂರಿನ ತಿಲಕನಗರದಲ್ಲಿ ಆಟೋದಲ್ಲಿ ಪತ್ತೆಯಾದ ಸಲ್ಮಾ ಎಂಬ ಮಹಿಳೆಯ ಶವದ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಬೆಂಗಳೂರಿನಿಂದ ತುಮಕೂರಿಗೆ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ.

PREV
16
ಆಟೋದಲ್ಲಿ ಮಹಿಳೆ ಶವ ಸಿಕ್ಕ ಕೇಸ್‌ಗೆ ಟ್ವಿಸ್ಟ್

ಬೆಂಗಳೂರಿನ ತಿಲಕನಗರ ಠಾಣಾ ವ್ಯಾಪ್ತಿಯಲ್ಲಿ ಆಟೋದಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಹತ್ವದ ಮುನ್ನಡೆಯನ್ನು ಸಾಧಿಸಿದ್ದಾರೆ. ಪ್ರಕರಣ ದಾಖಲಾಗಿ, ಮರಣೋತ್ತರ ಪರೀಕ್ಷೆ (Post Mortem) ನಡೆಯುವ ಮೊದಲೇ ಪೊಲೀಸರು ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಈ ಕುರಿತಾದ ವಿಶೇಷ ಮಾಹಿತಿ ಲಭ್ಯವಾಗಿದೆ.

26
ಒಂದೇ ಮನೆಯಲ್ಲಿ ಮೂವರೂ ಒಟ್ಟಿಗೆ ಮದ್ಯ ಸೇವನೆ

ಪೊಲೀಸರ ಪ್ರಕಾರ, ಕೊಲೆಯಾದ ಮಹಿಳೆಯ ಹೆಸರು ಸಲ್ಮಾ ಎಂದು ಗುರುತಿಸಲಾಗಿದೆ. ಆರೋಪಿಗಳಾದ ಸುಬ್ರಮಣಿ ಮತ್ತು ಸೆಂಥಿಲ್ ಸೇರಿ ಮೂವರು ಕೊಲೆಯಾದ ದಿನ ಒಟ್ಟಿಗೆ ಕುಡಿದಿದ್ದು, ಒಂದೇ ಮನೆಯಲ್ಲಿ ತಂಗಿದ್ದರು. ಈ ವೇಳೆ, ಕೊಲೆಯಾದ ಸಲ್ಮಾಳೊಂದಿಗೆ ಸುಬ್ರಮಣಿಗೆ ಅನೈತಿಕ ಸಂಬಂಧ ಇತ್ತು ಎಂದು ತಿಳಿದುಬಂದಿದೆ. ಆದರೆ, ಸಲ್ಮಾಳೊಂದಿಗೆ ಆರೋಪಿ ಸೆಂಥಿಲ್ ಅತಿಯಾದ ಒಡನಾಟ (ಸಲುಗೆ) ಇಟ್ಟುಕೊಂಡಿದ್ದನ್ನು ಕಂಡ ಸುಬ್ರಮಣಿ ತೀವ್ರವಾಗಿ ಕೋಪಗೊಂಡಿದ್ದಾನೆ.

ಈ ಕೋಪದ ಭರದಲ್ಲಿ, ಸುಬ್ರಮಣಿ ಅಲ್ಲಿಯೇ ಇದ್ದ 'ರಾಗಿ ಮುದ್ದೆ ತಿರುಗಿಸುವ ಹಿಟ್ಟಿನ ಕೋಲನ್ನು' ಬಳಸಿ ಸಲ್ಮಾಳ ತಲೆಗೆ ಬಲವಾಗಿ ಹಲ್ಲೆ ಮಾಡಿದ್ದಾನೆ. ಈ ಮಾರಣಾಂತಿಕ ಹಲ್ಲೆಯಿಂದ ಸಲ್ಮಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

36
ತಪ್ಪಿಸಿಕೊಂಡಿದ್ದ ಆರೋಪಿಗಳ ಬಂಧನ ಹೇಗೆ?

ಕೊಲೆ ಮಾಡಿದ ತಕ್ಷಣ ಆರೋಪಿಗಳು ಶವವನ್ನು ಆಟೋದಲ್ಲಿಯೇ ಇರಿಸಿ, ಆಟೋವನ್ನು ಕೆಟ್ಟು ನಿಂತಿರುವಂತೆ ಬಿಟ್ಟು ಪರಾರಿಯಾಗಿದ್ದರು. ಕೊಲೆಯಾದ ಒಂದು ದಿನದ ನಂತರ ಶವ ಪತ್ತೆಯಾಗಿತ್ತು. ಈ ಅಂತರದಲ್ಲಿ ಆರೋಪಿಗಳಾದ ಸುಬ್ರಮಣಿ ಮತ್ತು ಸೆಂಥಿಲ್ ಬೆಂಗಳೂರು ಗಡಿ ದಾಟಿ ತುಮಕೂರಿಗೆ ಪರಾರಿಯಾಗಿದ್ದರು. ಮುಂದಿನ ಯೋಜನೆಯಂತೆ ಅವರಿಬ್ಬರೂ ತುಮಕೂರಿನಿಂದ ಪಾಂಡಿಚೇರಿಗೆ ಹೋಗಲು ತಯಾರಿ ನಡೆಸಿದ್ದರು.

46
ತುಮಕೂರಿನಲ್ಲಿ ಲೊಕೇಶನ್ ಪತ್ತೆ

ಆದರೆ, ಆರೋಪಿಗಳು ಕೊಲೆ ಮಾಡಿದ ದಿನ ಅಂದು ಮಧ್ಯಾಹ್ನ ಮೆಜೆಸ್ಟಿಕ್ (ಕೆಂಪೇಗೌಡ ಬಸ್ ನಿಲ್ದಾಣ) ವರೆಗೂ ನಡೆದುಕೊಂಡು ಹೋಗಿ, ಅಲ್ಲಿಂದ ತುಮಕೂರಿಗೆ ಬಸ್ಸಿನಲ್ಲಿ ಪ್ರಯಾಣ ಮಾಡಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಆರೋಪಿಗಳ ಮೊಬೈಲ್ ಲೊಕೇಶನ್ ಪರಿಶೀಲನೆ ನಡೆಸಿದಾಗ, ಅವರ ಲೊಕೇಶನ್ ತುಮಕೂರಿನಲ್ಲಿ ಪತ್ತೆಯಾಗಿತ್ತು.

56
ಇಬ್ಬರು ಆರೋಪಿಗಳು ವಶ

ಕೂಡಲೇ, ಡಿಸಿಪಿ ಸಾರಾ ಫಾತಿಮಾ ಅವರು ಈ ಮಾಹಿತಿಯನ್ನು ಆಧರಿಸಿ, ತಮಗೆ ಹಿಂದೆ ಪರಿಚಿತರಾಗಿದ್ದ ತುಮಕೂರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದರು. ತುಮಕೂರು ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದರು. ವಶಕ್ಕೆ ಪಡೆದ ಬಳಿಕ ಆರೋಪಿಗಳ ಬಟ್ಟೆ ಮತ್ತು ಉಗುರುಗಳನ್ನು ಪರಿಶೀಲಿಸಿದಾಗ, ಅವುಗಳಲ್ಲಿ ರಕ್ತದ ಕಲೆಗಳು ಪತ್ತೆಯಾಗಿವೆ. ಇದು ಆರೋಪಿಗಳೇ ಕೊಲೆ ಮಾಡಿದ್ದಾರೆಂಬುದನ್ನು ಖಚಿತಪಡಿಸಿತು.

66
ಪೊಲೀಸರಿಂದ ಹೆಚ್ಚಿನ ವಿಚಾರಣೆ

ದೂರು ದಾಖಲಾಗುವ ಮತ್ತು ಮರಣೋತ್ತರ ಪರೀಕ್ಷೆ ನಡೆಯುವ ಮೊದಲೇ ಆರೋಪಿಗಳನ್ನು ಬಂಧಿಸುವಲ್ಲಿ ತಿಲಕನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳ ವಿಚಾರಣೆ ಮುಂದುವರೆದಿದ್ದು, ತನಿಖೆ ವೇಳೆ ಸುಬ್ರಮಣಿಯ ಜೊತೆಗಿದ್ದ ಮತ್ತೊಬ್ಬ ಆರೋಪಿ ಸೆಂಥಿಲ್, ಕೊಲೆಯ ನಂತರ ಸುಬ್ರಮಣಿಗೆ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದ ಎಂಬ ಮಾಹಿತಿಯೂ ಬಯಲಾಗಿದೆ. ಸದ್ಯ ಇಬ್ಬರು ಆರೋಪಿಗಳನ್ನು ತಿಲಕನಗರ ಪೊಲೀಸರು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

Read more Photos on
click me!

Recommended Stories