ಬೆಂಗಳೂರಿನ ಮಹಿಳಾ ಟೆಕ್ಕಿಯೊಬ್ಬರು ಜ್ಯೋತಿಷಿಯೊಬ್ಬರ ಅಲ್ಪಾಯುಷಿ ಭವಿಷ್ಯವನ್ನು ನಂಬಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಮದುವೆಗೆ ಸಿದ್ಧತೆ ನಡೆಸುತ್ತಿದ್ದ 27 ವರ್ಷದ ವಿದ್ಯಾಜ್ಯೋತಿ, 9 ದಿನಗಳ ಪೂಜೆಯ ಕೊನೆಯ ದಿನದಂದು ಈ ದುರಂತ ನಿರ್ಧಾರ ತೆಗೆದುಕೊಂಡಿದ್ದಾರೆ.
ಜ್ಯೋತಿಷಿಯೊಬ್ಬರ ಮಾತು ನಂಬಿ ಬೆಂಗಳೂರಿನ ಮಹಿಳಾ ಟೆಕ್ಕಿಯೊಬ್ಬರು ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಬಾಗಲಗುಂಟೆಯ ಎಂಇಐ ಲೇಔಟ್‌ನಲ್ಲಿ ಶುಕ್ರವಾರ ಸಂಜೆ ಈ ಘಟನೆ ನಡೆದಿದೆ.
25
27 ವರ್ಷದ ವಿದ್ಯಾಜ್ಯೋತಿ
27 ವರ್ಷದ ವಿದ್ಯಾಜ್ಯೋತಿ ಆತ್ಮ*ಹತ್ಯೆಗೆ ಶರಣಾದ ಮಹಿಳಾ ಟೆಕ್ಕಿ. ಬಾಗಲಗುಂಟೆ ನಿವಾಸಿಗಳಾದ ಉಮೇಶ್-ಕವಿತಾ ದಂಪತಿಯ ಎರಡನೇ ಮಗಳಾಗಿರುವ ವಿದ್ಯಾಜ್ಯೋತಿ ಬಾಷ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ವರ್ಕ್ ಫ್ರಂ ಹೋಮ್ ಹಿನ್ನೆಲೆ ವಿದ್ಯಾಜ್ಯೋತಿ ಮನೆಯಲ್ಲಿಯೇ ಇದ್ದರು.
35
9 ದಿನ ಪೂಜೆ
ಕೆಲ ದಿನಗಳ ಹಿಂದೆ ಜ್ಯೋತಿಷಿಯೊಬ್ಬರು ವಿದ್ಯಾಜ್ಯೋತಿಗೆ ಅಲ್ಪಾಯುಷಿ ಎಂದು ಭವಿಷ್ಯ ನುಡಿದಿದ್ದರು. ಪರಿಹಾರಕ್ಕಾಗಿ 9 ದಿನ ಪೂಜೆ ಮಾಡಬೇಕು. 9ನೇ ದಿನ ದೇವರಿಗೆ ತಾಳಿ ಕೊಡುವಂತೆ ಹೇಳಿದ್ದರು. ಶುಕ್ರವಾರ ಪೂಜೆಯ 9ನೇ ದಿನವಾಗಿದ್ದರಿಂದ ಸಂಜೆ ಮಾರಮ್ಮಾ ದೇವಸ್ಥಾನಕ್ಕೆ ತೆರಳಿ ತಾಳಿ ಸಲ್ಲಿಸಬೇಕಿತ್ತು.
ಶುಕ್ರವಾರ ಮಧ್ಯಾಹ್ನ ಊಟದ ಬಳಿಕ ಕೆಲಸ ಮಾಡಬೇಕೆಂದು ವಿದ್ಯಾಜ್ಯೋತಿ ಕೋಣೆ ಸೇರಿಕೊಂಡಿದ್ದರು. ಸಂಜೆಯಾದ್ರೂ ಹೊರಗೆ ಬರದಿದ್ದಾಗ ಕುಟುಂಬಸ್ಥರು ಕರೆದಿದ್ದಾರೆ. ಬಾಗಿಲು ತೆಗೆಯದಿದ್ದಾಗ ಕಿಟಕಿಯಿಂದ ಇಣುಕಿ ನೋಡಿದಾಗ ನೇಣುಬಿಗಿದ ಸ್ಥಿತಿಯಲ್ಲಿ ವಿದ್ಯಾಜ್ಯೋತಿ ಶವ ಕಾಣಿಸಿದೆ. ಕೂಡಲೇ ಪೋಷಕರು ಸ್ಥಳೀಯ ಠಾಣೆಗೆ ಮಾಹಿತಿ ನೀಡಿದ್ದಾರೆ.
ವಿದ್ಯಾಜ್ಯೋತಿ ಕೊಡಗು ಮೂಲದ ಯುವಕನೋರ್ವನನ್ನು ಪ್ರೀತಿಸುತ್ತಿದ್ದರು. ಮದುವೆಗೂ ಇಬ್ಬರ ಕುಟುಂಬಸ್ಥರು ಸಹ ಒಪ್ಪಿಕೊಂಡಿದ್ದರು. ಮಗಳ ಮದುವೆ ಸಿದ್ಧತೆಯಲ್ಲಿದ್ದ ಕುಟುಂಬಸ್ಥರಿಗೆ ವಿದ್ಯಾಜ್ಯೋತಿ ಶಾಕ್ ನೀಡಿದ್ದಾಳೆ. ಈ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.