ಬೆಂಗಳೂರು ಮದುವೆ ಮನೆಗಳೇ ಟಾರ್ಗೆಟ್; ₹24 ಲಕ್ಷ ನಗದು, 1.7 ಕೆಜಿ ಚಿನ್ನ-ಬೆಳ್ಳಿ ಕಳ್ಳತನ!

Published : Jun 17, 2025, 11:25 AM IST

ಬೆಂಗಳೂರಿನಲ್ಲಿ ಮನೆಯವರು ಮದುವೆಗೆ ತೆರಳಿದ್ದ ವೇಳೆ ಕಳ್ಳರು 24 ಲಕ್ಷ ರೂಪಾಯಿ, 1.5 ಕೆಜಿ ಚಿನ್ನಾಭರಣ ಕದ್ದಿದ್ದಾರೆ. ಪೆಪ್ಸಿ ರಘು ಸಹಚರರನ್ನು ಪೊಲೀಸರು ಬಂಧಿಸಿದ್ದು, ಪ್ರಮುಖ ಆರೋಪಿ ಪರಾರಿಯಾಗಿದ್ದಾನೆ.

PREV
17

ಬೆಂಗಳೂರಿನಲ್ಲಿ ಮದುವೆಗೆಂದು ಮನೆ ಬಿಟ್ಟು ಹೋಗಿದ್ದನ್ನು ಅವಕಾಶವನ್ನಾಗಿ ಪರಿಗಣಿಸಿ, ಕಳ್ಳರು ಟೆರಸ್ ಮೂಲಕ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ನಗದು ಕದ್ದ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ಪೆಪ್ಸಿ ರಘು ಸಹಚರರನ್ನು ಪೊಲೀಸರು ಬಂಧಿಸಲಾಗಿದೆ. ಆದರೆ, ಪ್ರಮುಖ ಆರೋಪಿ ಪೆಪ್ಸಿ ರಘು ಪರಾರಿಯಾಗಿದ್ದಾನೆ.

27

ಪೆಪ್ಸಿ ರಘು ತಂಡದಿಂದ ಕಳ್ಳತನ:

ಜೈಲಿನಲ್ಲಿ ಪರಿಚಯವಾದ ಶಿಷ್ಯರನ್ನು ಬಳಸಿಕೊಂಡು ಮನೆಗಳ್ಳತನ ಮಾಡಿಸುತ್ತಿದ್ದ ಕುಖ್ಯಾತ ಮನೆಗಳ್ಳ ಪೆಪ್ಸಿ ರಘು, ಇನ್ಸ್ಟಾಗ್ರಾಮ್‌ನ ಸಂದೇಶಗಳ ಮೂಲಕ ಕಳ್ಳತನಕ್ಕೆ ನಿರ್ದೇಶನ ನೀಡುತ್ತಿದ್ದ ಎನ್ನಲಾಗಿದೆ. ಪೆಪ್ಸಿ ರಘು ತನ್ನ ಸಹಚರರಿಗೆ ಯಾವ ಮನೆಯಲ್ಲಿ ಜನರಿಲ್ಲ ಎಂಬ ಮಾಹಿತಿ ನೀಡುತ್ತಿದ್ದನು.  ನಂತರ ಶಿಷ್ಯಂದಿರು ಮನೆಗೆ ನುಗ್ಗಿ ಕಳ್ಳತನ ಕೃತ್ಯಕ್ಕೆ ಸಹಾಯ ಮಾಡುತ್ತಿದ್ದನು.

37

ವಿಶ್ವನಾಥ್ ಮನೆಗೆ ನುಗ್ಗಿದ ದಾಳಿ:

ಕತ್ರಿಗುಪ್ಪೆ ನಿವಾಸಿ ವಿಶ್ವನಾಥ್ ಅವರ ಮನೆಯವರು ಮದುವೆಗಾಗಿ ಚಿಕ್ಕಮಗಳೂರಿಗೆ ತೆರಳಿದ ಸಂದರ್ಭದಲ್ಲಿ ಮೇ 21ರಂದು ರಾತ್ರಿ ಈ ತಂಡ ದಾಳಿ ನಡೆಸಿದೆ. ಟೆರಸ್ ಮೂಲಕ ನುಗ್ಗಿದ ಆರೋಪಿಗಳು ಮನೆಯೊಳಗೆ ನುಗ್ಗಿ ₹24 ಲಕ್ಷ ನಗದು, 175 ಗ್ರಾಂ ಚಿನ್ನಾಭರಣ ಮತ್ತು ಸುಮಾರು 1.5 ಕೆಜಿ ಬೆಳ್ಳಿಯ ನಾಣ್ಯಗಳನ್ನು ಕದ್ದಿದ್ದಾರೆ.

47

ಮೋಜು-ಮಸ್ತಿಗಾಗಿ ಕದ್ದ ಹಣ ಬಳಕೆ:

ಆರೋಪಿಗಳು ಕದ್ದ ಹಣವನ್ನು ಗೋವಾದಲ್ಲಿ ಮೋಜು ಮಸ್ತಿಗಾಗಿ ಹಾಗೂ ಕ್ಯಾಸಿನೊಗಳಲ್ಲಿ ಬಳಸಿದ್ದು, ಕೆಲವೊಂದು ಭಾಗವನ್ನು ಹುಡುಗಿಯರ ಮೇಲೆ ಖರ್ಚು ಮಾಡಿರುವುದಾಗಿ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

57

ಪೆಪ್ಸಿ ರಘು ನಾಪತ್ತೆ:

ಪ್ರಮುಖ ಆರೋಪಿ ಪೆಪ್ಸಿ ರಘು ಅಲಿಯಾಸ್ ರಘುವನಹಳ್ಳಿ ರಘು ಈವರೆಗೂ ಪೊಲೀಸರಿಂದ ತಪ್ಪಸಿಕೊಂಡಿದ್ದಾನೆ. ಆತನ ಪತ್ತೆಗೆ ಬಲೆ ಬೀಸಲಾಗಿದೆ. ಈತನ ಬಂಧನಕ್ಕೆ ನಿರಂತರ ಕಾರ್ಯಾಚರಣೆ ಮುಂದುವರಿದಿದೆ.

67

ಮೌಲ್ಯದ ವಸ್ತುಗಳು ವಶ:

ಮೂವರು ಬಂಧಿತರಿಂದ ₹9 ಲಕ್ಷ ನಗದು, 175 ಗ್ರಾಂ ಚಿನ್ನ ಹಾಗೂ 1.5 ಕೆಜಿ ಬೆಳ್ಳಿ ನಾಣ್ಯಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣವನ್ನು ಸಿ.ಕೆ. ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

77

ಬಂಧಿತ ಆರೋಪಿಗಳು:

ಶಿವಪ್ರಸಾದ್, ಲಿಖಿತ್ ಅಲಿಯಾಸ್ ಕಡ್ಡಿ ಹಾಗೂ ಜಯದೀಪ್ ಎಂಬ ಮೂವರು ಆರೋಪಿಗಳನ್ನು ಸಿಸಿಟಿವಿ ದೃಶ್ಯ ಆಧರಿಸಿ ಬಂಧಿಸಲಾಗಿದೆ. ಈ ಮೂವರು ಪೆಪ್ಸಿ ರಘು ಸಹಚರರು ಎನ್ನಲಾಗಿದೆ.

Read more Photos on
click me!

Recommended Stories