ಕೊಡವರ ಮನೆ ಮನೆಗಳಲ್ಲೂ ಕೈಲ್ ಪೋವ್ದ್ ಸಂಭ್ರಮ : ನೀವೂ ಕಣ್ತುಂಬಿಕೊಳ್ಳಿ
First Published | Sep 3, 2020, 4:18 PM ISTಕೊಡವರ ಪ್ರಮುಖವಾದ ಹಬ್ಬಗಳಲ್ಲಿ ಆಯುಧ ಪೂಜೆಯಾಗಿ ಆಚರಿಸಲಾಗುವ ಹಬ್ಬವೇ ಕೈಲ್‌ಪೊವ್ದ್.
ಮೂಲತಃ ಕೃಷಿಕರಾದ ಕೊಡಗಿನ ಜನ ತಮ್ಮ ಆಯುಧಗಳಾದ ಕೋವಿ,ಒಡಿಕತ್ತಿ,ಪೀಚೆಕತ್ತಿ, ಗೆಜ್ಜೆತಂಡ್ ಹಾಗೂ ವ್ಯವಸಾಯಕ್ಕೆ ಬಳಸುವ ಪರಿಕರಗಳನ್ನು ಶುಚಿಗೊಳಿಸಿ ಹಬ್ಬದ ದಿನದಂದು ಪೂಜಿಸುವುದೇ ಕೈಲ್‌ಪೊವ್ದ್‌ನ ವಿಶೇಷ.
ಕೊಡಗಿನ ಬಹುತೇಕ ಪ್ರದೇಶಗಳಲ್ಲಿ ಸೆಪ್ಟೆಂಬರ್ 3ರಂದು ಸಾರ್ವತ್ರಿಕವಾಗಿ ಕೈಲ್‌ಪೊವ್ದ್ ಹಬ್ಬವನ್ನು ಆಚರಿಸಲಾಗುತ್ತದೆ.ಅಂದು ಜಿಲ್ಲೆಗೆ ಸೀಮಿತವಾದಂತೆ ರಜೆಯನ್ನು ಕೂಡ ಘೋಷಿಸಲಾಗುತ್ತದೆ.