ಲಾಡ್ಜ್‌ಗೆ ಕರೆಸಿಕೊಂಡು ರೇ* , ಮದ್ವೆಯಾಗೋಕೆ ಕೀಳು ಜಾತಿ ಎಂದ ಪೊಲೀಸಪ್ಪ ಅರೆಸ್ಟ್

Published : Sep 06, 2025, 09:48 AM IST

Bengaluru Crime News: ಮದುವೆಯಾಗುವುದಾಗಿ ನಂಬಿಸಿ ವಕೀಲೆಯ ಮೇಲೆ ಅತ್ಯಾ*ಚಾರ ಎಸಗಿದ್ದ ಪೊಲೀಸ್ ಕಾನ್ಸ್ಟೇಬಲ್ ಸಿದ್ದೇಗೌಡನನ್ನು ಬಂಧಿಸಲಾಗಿದೆ. ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

PREV
15

ಮದುವೆಯಾಗೋದಾಗಿ ನಂಬಿಸಿ ಅತ್ಯಾ*ಚಾರ ಮಾಡಿದ್ದ ಪೊಲೀಸ್‌ ಸಿದ್ದೇಗೌಡ ಅಲಿಯಾಸ್ ಸಿದ್ದಿ ಎಂಬಾತನನ್ನು ಬಂಧಿಸಿ ಪರಪ್ಪನ ಅಗ್ರಹಾರಕ್ಕೆ ಕಳುಹಿಸಲಾಗಿದೆ. ಜಮಖಂಡಿ ಮೂಲದ ಸಿದ್ದೇಗೌಡ ಮಂಗಳೂರಿನ ಪಾಂಡೇಶ್ವರದ ಎಸ್‌ಎಎಫ್‌ (Special Action Force) ನಲ್ಲಿ ಕಾನ್‌ಸ್ಟೇಬಲ್ ಆಗಿ ಕೆಲಸ ಮಾಡಿಕೊಂಡಿದ್ದನು.

25

ಸಂತ್ರಸ್ತೆ ವಿಜಯಪುರ ಜಿಲ್ಲೆಯ ಬಬಲೇಶ್ವರ ಮೂಲದ ನಿವಾಸಿಯಾಗಿದ್ದು, ಬೆಂಗಳೂರಿನಲ್ಲಿ ವಕೀಲೆಯಾಗಿ ಪ್ರ್ಯಾಕ್ಟಿಸ್ ಮಾಡಿಕೊಂಡಿದ್ದರು. ಹುಬ್ಬಳ್ಳಿ ಮದುವೆಯೊಂದರಲ್ಲಿ ಸಂತ್ರಸ್ತೆಯನ್ನು ಸಿದ್ದೇಗೌಡ ಭೇಟಿಯಾಗಿದ್ದನು. ಇಲ್ಲಿಯೇ ಇಬ್ಬರು ಮೊಬೈಲ್ ನಂಬರ್ ಎಕ್ಸ್‌ಚೇಂಜ್ ಮಾಡಿಕೊಂಡಿದ್ದರು.

35

ನಂಬರ್ ಎಕ್ಸ್‌ಚೇಂಜ್ ಆಗುತ್ತಿದ್ದಂತೆ ಸಿದ್ದೇಗೌಡನ ಬಣ್ಣದ ಮಾತುಗಳು ಶುರುವಾಗಿದ್ದವು. ಈ ವೇಳೆ ಮದುವೆಯಾಗೋದಾಗಿ ಸಂತ್ರಸ್ತೆಯನ್ನು ಸಿದ್ದೇಗೌಡ ನಂಬಿಸಿದ್ದನು. ಬೆಂಗಳೂರಿಗೆ ಬರುತ್ತಿದ್ದ ಸಿದ್ದೇಗೌಡ, ಲಾಡ್ಜ್‌ ಬುಕ್ ಮಾಡಿ ಸಂತ್ರಸ್ತೆಯನ್ನು ಕರೆಸಿಕೊಂಡು ಅತ್ಯಾ*ಚಾರ ಎಸಗಿದ್ದಾನೆ. ಒಟ್ಟು ನಾಲ್ಕು ಬಾರಿ ಅತ್ಯಾ*ಚಾರ ಮಾಡಿರೋದಾಗಿ ಸಂತ್ರಸ್ತೆ ಆರೋಪಿಸಿದ್ದಾರೆ.

45

ಇದಾದ ಬಳಿಕ ಮದುವೆ ವಿಷಯ ಬಂದಾಗ ನಿಮ್ಮದು‌ ಕೀಳು ಜಾತಿ. ಹೀಗಾಗಿ ಮದುವೆಗೆ ನಮ್ಮ ಮನೆಯಲ್ಲಿ ಒಪ್ಪಲ್ಲ‌ ಎಂದು ಹೇಳಿದ್ದಾನೆ. ಇಷ್ಟು ಮಾತ್ರವಲ್ಲ ಸಂತ್ರಸ್ತೆಯಿಂದ ಹಣ ಸಹ ಪಡೆದುಕೊಂಡಿದ್ದನು. ಹಣ ಸಹ ವಾಪಸ್ ನೀಡಿಲ್ಲ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಈ ಸಂಬಂಧ ಸಂತ್ರಸ್ತೆ ಆಗಸ್ಟ್ 8ರಂದು ಬಸವೇಶ್ವರ ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

55

ದೂರು ದಾಖಲಾಗುತ್ತಿದ್ದ ಸಿದ್ದೇಗೌಡ ಎಸ್ಕೇಪ್ ಆಗಿದ್ದನು. ಆಗಸ್ಟ್ 30 ರಂದು ನಾಪತ್ತೆಯಾಗಿದ್ದ ಸಿದ್ದೇಗೌಡನನ್ನು ಪೊಲೀಸರು ಬಂಧಿಸಿದ್ದರು. ಇದೀಗ ಆರೋಪಿ ಸಿದ್ದೇಗೌಡನನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read more Photos on
click me!

Recommended Stories