RCB ಅಭಿಮಾನಿಗಳಿಗೆ ನಮ್ಮ ಮೆಟ್ರೋ ಪ್ರಯಾಣ ಉಚಿತ ಎಂಬುದು ಸುಳ್ಳು! ಬಿಎಂಆರ್‌ಸಿಎಲ್ ಸ್ಪಷ್ಟನೆ

Published : May 30, 2026, 01:19 PM IST

2026ರ ಐಪಿಎಲ್ ಫೈನಲ್ ವೇಳೆ RCB ಅಭಿಮಾನಿಗಳಿಗೆ ಉಚಿತ ಮೆಟ್ರೋ ಪ್ರಯಾಣದ ಅವಕಾಶವಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದ ಸುದ್ದಿ ಸಂಪೂರ್ಣ ಸುಳ್ಳು. ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಮೇ 31ರಂದು ಉಚಿತ ಪ್ರಯಾಣವಿಲ್ಲ ಎಂದು ತಿಳಿಸಿದೆ.

PREV
14
ಆರ್‌ಸಿಬಿ ಅಭಿಮಾನಿಗಳಿಗೆ ಉಚಿತ ಮೆಟ್ರೋ ಪ್ರಯಾಣ

ಬೆಂಗಳೂರು: 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಮಹಾ ಫೈನಲ್ ಪಂದ್ಯಾವಳಿಗೆ ದಿನಗಣನೆ ಆರಂಭವಾಗಿದೆ. ಮೇ 31ರ ಭಾನುವಾರದಂದು ಅಹಮದಾಬಾದ್‌ನಲ್ಲಿ ನಡೆಯಲಿರುವ ಈ ಹೈವೋಲ್ಟೇಜ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಪ್ರಶಸ್ತಿಗಾಗಿ ಕಾದಾಡಲಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಭಿಮಾನಿಗಳ ಉತ್ಸಾಹ ಮುಗಿಲು ಮುಟ್ಟಿದೆ. 

ಆದರೆ, ಇದೇ ಸಂಭ್ರಮದ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ 'ಆರ್‌ಸಿಬಿ ಅಭಿಮಾನಿಗಳಿಗೆ ಉಚಿತ ಮೆಟ್ರೋ ಪ್ರಯಾಣ' ಎಂಬ ಸುದ್ದಿಯ ಕುರಿತು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BANGALORE METRO RAIL CORPORATION LIMITED- BMRCL) ಮಹತ್ವದ ಸ್ಪಷ್ಟನೆಯನ್ನು ನೀಡಿದೆ.

24
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದೇನು?

ಮೆಟ್ರೋ ಪ್ರಯಾಣ ಉಚಿತ ಎಂಬುದು ಸಂಪೂರ್ಣವಾಗಿ ಸುಳ್ಳು ಮತ್ತು ತಪ್ಪು ಮಾಹಿತಿ ಎಂದು ಬಿಎಂಆರ್‌ಸಿಎಲ್ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಕೆಲವು ಖಾಸಗಿ ವ್ಯಕ್ತಿಗಳು ಹಾಗೂ ಸಂಸ್ಥೆಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳು ಮತ್ತು ಜಾಹೀರಾತುಗಳನ್ನು ಪ್ರಕಟಿಸಿದ್ದರು. ಅದರಲ್ಲಿ, ಮೇ 31ರಂದು ನಡೆಯಲಿರುವ ಐಪಿಎಲ್ ಫೈನಲ್ ಪಂದ್ಯಾವಳಿಯ ಪ್ರಯುಕ್ತ ಬೆಂಗಳೂರಿನ ಆರ್‌ಸಿಬಿ ಅಭಿಮಾನಿಗಳಿಗೆ 'ನಮ್ಮ ಮೆಟ್ರೋ'ದಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಪ್ಪಾಗಿ ಪ್ರಚಾರ ಮಾಡಲಾಗಿತ್ತು. ಈ ಸುದ್ದಿ ಅತಿ ವೇಗವಾಗಿ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿತ್ತು.

34
ಬಿಎಂಆರ್‌ಸಿಎಲ್ ನೀಡಿದ ಪ್ರಮುಖ ಸ್ಪಷ್ಟನೆಗಳು ಇಲ್ಲಿವೆ:

ಯಾರಿಗೂ ಉಚಿತ ಪ್ರಯಾಣವಿಲ್ಲ: 2026ರ ಮೇ 31ರಂದು ಆರ್‌ಸಿಬಿ ಅಭಿಮಾನಿಗಳಿಗೆ ಆಗಲಿ ಅಥವಾ ಯಾವುದೇ ಇತರ ಪ್ರಯಾಣಿಕರ ವರ್ಗಕ್ಕಾಗಲಿ ಉಚಿತ ಮೆಟ್ರೋ ಪ್ರಯಾಣ ಸೌಲಭ್ಯ ಒದಗಿಸುವ ಯಾವುದೇ ಯೋಜನೆಯನ್ನು ಬಿಎಂಆರ್‌ಸಿಎಲ್‌ ಘೋಷಿಸಿಲ್ಲ ಹಾಗೂ ಅನುಮೋದಿಸಿಲ್ಲ.

ಅನಧಿಕೃತ ಪ್ರಚಾರಕ್ಕೆ ಮಾನ್ಯತೆ ಇಲ್ಲ: ಮೆಟ್ರೋ ಪ್ರಯಾಣ ಉಚಿತವಾಗಿರುತ್ತದೆ ಎಂದು ಜಾಹೀರಾತು ನೀಡಲು ಅಥವಾ ಪ್ರಚಾರ ಮಾಡಲು ಯಾವುದೇ ಖಾಸಗಿ ವ್ಯಕ್ತಿ, ಸಂಸ್ಥೆ ಅಥವಾ ಸಂಘಟನೆಗೆ ಬಿಎಂಆರ್‌ಸಿಎಲ್ ಯಾವುದೇ ರೀತಿಯ ಅನುಮತಿ ಅಥವಾ ಅಧಿಕೃತ ಮಾನ್ಯತೆಯನ್ನು ನೀಡಿರುವುದಿಲ್ಲ.

44
ಟಿಕೆಟ್ ಖರೀದಿಸುವುದು ಕಡ್ಡಾಯ

ಟಿಕೆಟ್ ಕಡ್ಡಾಯ: ನಮ್ಮ ಮೆಟ್ರೋದಲ್ಲಿ ಪ್ರಯಾಣಿಸಲು ಎಲ್ಲಾ ಪ್ರಯಾಣಿಕರು ಎಂದಿನಂತೆ ಟಿಕೆಟ್ ಖರೀದಿಸುವುದು ಕಡ್ಡಾಯವಾಗಿದೆ. ಪ್ರಯಾಣಿಕರು ಸ್ಮಾರ್ಟ್ ಕಾರ್ಡ್, ಕ್ಯೂಆರ್ ಟಿಕೆಟ್, ಎನ್‌ಸಿಎಂಸಿ (NCMC) ಕಾರ್ಡ್ ಅಥವಾ ಬಿಎಂಆರ್‌ಸಿಎಲ್ ಅನುಮೋದಿಸಿರುವ ಇತರೆ ಪ್ರಯಾಣ ಮಾಧ್ಯಮಗಳನ್ನು ಬಳಸಿಕೊಂಡೇ ಪ್ರಯಾಣಿಸಬೇಕು.

ನಿಯಮಗಳು ಅನ್ವಯ: ಮೇ 31ರ ಮೆಟ್ರೋ ಪ್ರಯಾಣವು ಬಿಎಂಆರ್‌ಸಿಎಲ್‌ನ ಪ್ರಚಲಿತ ದರ ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ ಎಂದು ಸಂಸ್ಥೆ ನೆನಪಿಸಿದೆ.

Read more Photos on
click me!

Recommended Stories