ಮದುವೆ ಮನೆಗೆ ಆವರಿಸಿದ ಕತ್ತಲು: ಕೇವಲ 4 ದಿನದಲ್ಲಿ ಮದುವೆ ಮಂಟಪ ಏರಬೇಕಿದ್ದ ಮಂಡ್ಯದ ಹುಡುಗಿ ಲಾರಿ ಚಕ್ರಕ್ಕೆ ಬಲಿ!

Published : Nov 11, 2026, 07:00 PM IST

ಇನ್ನೇನು ನಾಲ್ಕೇ ದಿನಗಳಲ್ಲಿ ಮದುವೆ ಮಂಟಪದಲ್ಲಿ ನವವಧುವಾಗಿ ನಗಬೇಕಿದ್ದ ಸಿಂಧುಶ್ರೀ, ವೆಡ್ಡಿಂಗ್ ಕಾರ್ಡ್ ಹಂಚಲು ಹೋಗಿ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಮೈಸೂರು ರಸ್ತೆಯಲ್ಲಿ ನಡೆದ ಈ ಹೃದಯ ವಿದ್ರಾವಕ ದುರಂತದ ಸಂಪೂರ್ಣ ವಿವರ ಮತ್ತು ಚಿತ್ರಗಳು ಇಲ್ಲಿವೆ ನೋಡಿ.

PREV
16

ಬೆಂಗಳೂರು: ವಿಧಿ ಎಷ್ಟು ಕ್ರೂರಿ ಅಲ್ವಾ? ಇನ್ನೇನು ನಾಲ್ಕೇ ದಿನದಲ್ಲಿ ಕೈತುಂಬ ಮದರಂಗಿ ಇಟ್ಟುಕೊಂಡು, ರೇಷ್ಮೆ ಸೀರೆಯುಟ್ಟು ಮದುವೆ ಮಂಟಪದಲ್ಲಿ ನವವಧುವಾಗಿ ಮಿಂಚಬೇಕಿದ್ದ ಯುವತಿಯೊಬ್ಬಳು, ಹೆಣವಾಗಿ ಬಿದ್ದ ಕರುಣಾಜನಕ ಘಟನೆ ಬೆಂಗಳೂರಿನ ಮೈಸೂರು ರಸ್ತೆಯಲ್ಲಿ ನಡೆದಿದೆ!

26

ಮಂಡ್ಯ ಮೂಲದ ಐಟಿ ಉದ್ಯೋಗಿ ಸಿಂಧುಶ್ರೀ (29) ಹಾಗೂ ಆಕೆಯ ಅತ್ತೆ ಮಗಳು ವಿದ್ಯಾ (19) ಅಪಘಾತದಲ್ಲಿ ಕ್ರೂರವಾಗಿ ಕೊನೆಯುಸಿರೆಳೆದ ದುರದೃಷ್ಟವಂತೆಯರು. ಇದರಲ್ಲಿ ಸಿಂಧುಶ್ರೀ ಮದುವೆ ಮಾಡಿಕೊಳ್ಳುವ ಮದುಮಗಳಾಗಿದ್ದಳು. ಆದರೆ, ದುರಾದೃಷ್ಟ ಅವರನ್ನು ಬೀದಿ ಹೆಣವನ್ನಾಗಿ ಮಾಡಿದೆ.

36

ಕಣ್ಣೀರು ತರಿಸುತ್ತೆ ಈ ದುರಂತ!

ಆ ಮನೆಯಲ್ಲಿ ಮದುವೆಯ ಸಂಭ್ರಮ ಕಳೆಗಟ್ಟಿತ್ತು. ಬಟ್ಟೆ-ಆಭರಣಗಳ ಖರೀದಿ, ಸಂಬಂಧಿಕರ ಕರೆ ತರಾತುರಿ ಜೋರಾಗಿತ್ತು. ನವೆಂಬರ್ 17ರ ಭಾನುವಾರ ಗ್ರ್ಯಾಂಡ್ ರಿಸೆಪ್ಷನ್, ಸೋಮವಾರ ಶುಭ ಮುಹೂರ್ತದಲ್ಲಿ ಮದುವೆ ನಿಶ್ಚಯವಾಗಿತ್ತು.

46

ಗೆಳತಿಯರಿಗೆ ಮದುವೆ ಪತ್ರಿಕೆ ನೀಡಿ, 'ತಪ್ಪದೇ ಮದುವೆಗೆ ಬನ್ನಿ' ಎಂದು ಕರೆಯಲು ಸಿಂಧುಶ್ರೀ ತನ್ನ ತಂಗಿ ವಿದ್ಯಾ ಜೊತೆ ಸ್ಕೂಟರ್‌ನಲ್ಲಿ ಕತ್ರಿಗುಪ್ಪೆಗೆ ಹೊರಟಿದ್ದಳು. ಆದರೆ, ವಿಧಿಯಾಟವೇ ಬೇರೆಯಾಗಿತ್ತು! ದೀಪಾಂಜಲಿ ನಗರ ಮೆಟ್ರೋ ನಿಲ್ದಾಣದ ಬಳಿ ಬಂದಾಗ ಹಿಂಬದಿಯಿಂದ ಅತೀ ವೇಗವಾಗಿ ರಾಕ್ಷಸನಂತೆ ಬಂದ ಲಾರಿಯೊಂದು ಇವರ ಸ್ಕೂಟರ್‌ಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ.

56

ಲಾರಿ ಚಕ್ರಕ್ಕೆ ಬಲಿಯಾದ ಕನಸುಗಳು

ಡಿಕ್ಕಿಯ ರಭಸಕ್ಕೆ ರಸ್ತೆಗೆ ಬಿದ್ದ ಇಬ್ಬರು ಯುವತಿಯರ ದೇಹದ ಮೇಲೆ ಲಾರಿಯ ಬೃಹತ್ ಚಕ್ರಗಳು ಹರಿದುಹೋಗಿವೆ. ಪರಿಣಾಮ, ಮದುವೆ ಮನೆಯಲ್ಲಿ ನಗಬೇಕಿದ್ದ ಜೀವಗಳು ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಶವವಾಗಿ ಬಿದ್ದವು.

66

ಕೃತ್ಯ ಎಸಗಿದ ಲಾರಿ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದು, ಬ್ಯಾಟರಾಯನಪುರ ಸಂಚಾರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮದುವೆ ಸಂಭ್ರಮದಲ್ಲಿದ್ದ ಕುಟುಂಬಸ್ಥರು ಈ ಸುದ್ದಿ ಕೇಳಿ ಆಸ್ಪತ್ರೆಯ ಮುಂದೆ ಕಣ್ಣೀರಿಡುತ್ತಿರುವ ದೃಶ್ಯ ಪ್ರತಿಯೊಬ್ಬರ ಕಣ್ಣಂಚಲ್ಲಿ ನೀರು ತರಿಸುವಂತಿದೆ.

Read more Photos on
click me!

Recommended Stories